ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಮನೆಕೆಲಸದ ಗಂಗಕ್ಕಾ ಪಾತ್ರಧಾರಿ ನೆನಪಿದ್ಯಾ? ಖಂಡಿತಾ ನೆನಪಿರುತ್ತೆ ಅಲ್ವಾ?
ನಟಿ ಹರ್ಷಿತಾ ಅವರು ಗಂಗಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು, ಅವರ ಕಾಮಿಡಿ ಟೈಮಿಂಗ್ಸ್ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು.ಸದ್ಯ ನಟಿ ನಟನೆಯಿಂದ ಹಿಂದೆ ಸರಿದಿದ್ದಾರೆ.
ನಟಿ ಹರ್ಷಿತಾ ಅವರು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಕೂಡ ಸುಬ್ಬು ಅಕ್ಕನ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಗರ್ಭಿಣಿಯಾದ ಬಳಿಕ ಧಾರಾವಾಹಿಯಿಂದ ಹೊರ ನಡೆದಿದ್ದರು.
ಬಳಿಕ ನಟಿ ತಮ್ಮ ಚೊಚ್ಚಲ ತಾಯ್ತ, ನಂತರ ಮಗುವಿನ ಆರೈಕೆಯಲ್ಲಿ ಪೂರ್ತಿಯಾಗಿ ಬ್ಯುಸಿಯಾಗಿದ್ದರು. ನಂತರ ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ.
ನಟಿ ಹರ್ಷಿತಾ ಹಾಗೂ ಸಂದೀಪ್ ಆಚಾರ್ಯ ದಂಪತಿಗಳಿಗೆ ಕಳೆದ ವರ್ಷ ಹೆಣ್ಣು ಮಗುವಿನ ಜನನವಾಗಿದ್ದು, ಇದೀಗ ಮಗುವಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಜೋಡಿ.
ಹರ್ಷಿತಾ ತಮ್ಮ ಮಗಳಿಗೆ ಘನಿಷ್ಕಾ ಎಂದು ಹೆಸರಿಟ್ಟಿದ್ದು, ಮಗು ಇದೀಗ ಸೆಪ್ಟೆಂಬರ್ 20ರಂದು ತಮ್ಮ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಹರ್ಷಿತಾ, ತಮ್ಮ ಮನೆಯಲ್ಲಿಯೇ ಮಗಳಿಗಾಗಿ ಸರಳವಾಗು ಹುಟ್ಟುಹಬ್ಬ ಆಯೋಜಿಸಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹರ್ಷಿತಾ ಪುತ್ರಿಗೆ ಕನ್ನಡ ಸೀರಿಯಲ್ ರಸಿಕರು ಹಾಗೂ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಆರೋಗ್ಯ, ಸಂತೋಷ ನೀಡುವಂತೆ ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಪ್ರೋಮೋದಲ್ಲಿ ಮಿಂಚಿದ 'ಸೌಂದರ್ಯ' ಬೆಡಗಿ! ಯಾರು ಅಂತಾ ಗೊತ್ತಾಯ್ತಾ?
ತನ್ನವರ ಜೊತೆ ಹಬ್ಬ ಆಚರಿಸಿದ ಅನುಪಮಾ ಗೌಡ… ಗೆಳತಿ ಕೃಷಿ ಮಿಸ್ಸಿಂಗ್ ಬಗ್ಗೆ ನೆಟ್ಟಿಗರ ಪ್ರಶ್ನೆ
ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ‘ಕಮಲಿ’ ಸೀರಿಯಲ್ ನಟಿ Photos Viral
ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸಂಭ್ರಮದಿಂದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಗೊಂಬೆ