ಜೀ ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ನಿತ್ಯಾ ಪಾತ್ರ ಅಂತ್ಯವಾಗಿದೆ. ತಾರಾಳ ಮೋಸವನ್ನು ತಿಳಿದಿದ್ದ ನಿತ್ಯಾ, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಹತ್ಯೆಯಾಗಿದ್ದಾಳೆ. ತನ್ನ ಸಾವಿನೊಂದಿಗೆ ಕರ್ಣನ ಜನ್ಮರಹಸ್ಯವನ್ನೂ ನಿತ್ಯಾ ಮರೆಮಾಚಿದ್ದಾಳಾ ಎಂಬ ಕುತೂಹಲ ಮೂಡಿದೆ.
ಜೀ ಕನ್ನಡದ ಜನಪ್ರಿಯ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದ್ದು, ಸೀರಿಯಲ್‌ನ ಪ್ರಮುಖ ಪಾತ್ರವೊಂದು ಮುಕ್ತಾಯವಾಗಿದೆ. ಕಳೆದು ಮೂರ್ನಾಲ್ಕು ತಿಂಗಳಿನಿಂದ ನಿತ್ಯಾ ಪಾತ್ರವನ್ನು ಕಡಿಮೆ ಮಾಡಿಕೊಂಡು ಬರಲಾಗುತ್ತಿತ್ತು. ಅಂತಿಮವಾಗಿ ನಿತ್ಯಾ ಪಾತ್ರವನ್ನು ಕೊನೆ ಮಾಡಲಾಗಿದೆ.
25
ಯೋಚಿಸಬೇಕಿತ್ತು ನಿತ್ಯಾ!
ಗರ್ಭಿಣಿಯಾಗಿರೋ ನಿತ್ಯಾಳನ್ನು ಮಾರಿಗುಡಿಯ ಮುನಿಯಪ್ಪ ಭೇಟಿಯಾಗಿದ್ದನು. ಈ ವೇಳೆ ನಿಮ್ಮ ತಂದೆ-ತಾಯಿ ಸಾವಿಗೆ ತಾರಾ ಕಾರಣ ಎಂಬ ಸತ್ಯ ಹೇಳಿದ್ದನು. ಇದೇ ವೇಳೆ ನಿತ್ಯಾಗೆ ಭುವನೇಶ್ವರಿಯೇ ಕರ್ಣನ ತಾಯಿ ಸೀತಾ ಎಂಬ ಸತ್ಯ ಗೊತ್ತಾಗಿತ್ತು. ಇದೆಲ್ಲವನ್ನು ತಿಳಿದ ನಿತ್ಯಾ, ಸ್ವಲ್ಪವೂ ಯೋಚಿಸದೇ ತಾರಾಗೆ ಕಾಲ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಳು.
35
ನಿತ್ಯಾಗೆ ಇಂಜೆಕ್ಷನ್ ಚುಚ್ಚಿದ ತಾರಾ
ಇಷ್ಟಾಗುತ್ತಿದ್ದಂತೆ ಮುನಿಯಪ್ಪ ಮತ್ತು ನಿತ್ಯಾಳ ಪ್ರಾಣ ತೆಗೆಯಲು ತಾರಾ ರೌಡಿಗಳನ್ನು ಕಳುಹಿಸಿದ್ದನು. ಮುನಿಯಪ್ಪ ರಸ್ತೆಯಲ್ಲಿಯೇ ಸತ್ತರೆ, ನಿತ್ಯಾಳನ್ನು ಕಾಪಾಡಿದ್ದ ಕರ್ಣ ಆಸ್ಪತ್ರೆಗೆ ಕರೆದುಕೊಂಡು ಬಂದು ಸುಸೂತ್ರವಾಗಿ ಹೆರಿಗೆಯನ್ನು ಮಾಡಿಸಿದ್ದನು. ಹೆಣ್ಣು ಮಗುವಿಗೆ ಜನ್ಮ ನೀಡಿ ವಿಶ್ರಾಂತಿಯಲ್ಲಿದ್ದ ನಿತ್ಯಾಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ತಾರಾ ಕೊಂದಿದ್ದಾಳೆ.
ನಿತ್ಯಾಳನ್ನು ಉಳಿಸಿಕೊಳ್ಳಲು ಕೊನೆಕ್ಷಣದವರೆಗೂ ಹೋರಾಡಿ ಕರ್ಣ ಸಹ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದಾನೆ. ಅಕ್ಕ ನಿತ್ಯಾಳನ್ನು ನೋಡಲು ಓಡೋಡಿ ಬಂದ ನಿಧಿ ಅಘಾತಕ್ಕೊಳಗಾಗಿದ್ದು, ಕಣ್ಣೀರು ಹಾಕುತ್ತಿದ್ದಾಳೆ. ನಿತ್ಯಾಳ ಪ್ರಾಣ ತೆಗೆದು ಆಕೆಯ ಮಗುವನ್ನು ಹಿಡಿದುಕೊಂಡು ತಾರಾ ಎಲ್ಲವನ್ನು ನೋಡುತ್ತಾ ನಿಂತಿದ್ದಾಳೆ.
55
ಮರೆಯಾದ ಸತ್ಯ
ತನ್ನ ಪ್ರಾಣ ಹೋಗುತ್ತಿರೋದು ಗೊತ್ತಾಗುತ್ತಿದ್ದಂತೆ ಗೋಡೆಯ ಮೇಲಿರುವ ಭುವನೇಶ್ವರಿ ದೇವಿ ಫೋಟೋ ತೋರಿಸುವ ಮೂಲಕ ಸತ್ಯ ಹೇಳುವ ಪ್ರಯತ್ನವನ್ನು ನಿತ್ಯಾ ಮಾಡಿದ್ದಳು. ನಿತ್ಯಾಳ ಸಾವಿನ ಜೊತೆಯಲ್ಲಿ ಕರ್ಣನ ಜನ್ಮರಹಸ್ಯ ಮತ್ತು ತಂದೆ-ತಾಯಿ ಸಾವಿನ ನಿಗೂಢ ಸತ್ಯ ಮಣ್ಣಾಗಿ ಹೋಗುತ್ತಾ ಎಂಬುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.