ಮೂರು ವರ್ಷಗಳ ಬಳಿಕ ಸಾರ್ಥಕವಾಯ್ತು 'ಲಕ್ಷ್ಮೀ ನಿವಾಸ' ಟೈಟಲ್! ಕೊನೆಗೂ ಕನಸಿನ ಮನೆಗೆ ಭೂಮಿಪೂಜೆ!

Published : Nov 10, 2026, 02:38 PM IST

Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಹು ದೊಡ್ಡ ಶುಭ ಸುದ್ದಿ ಕೊನೆಗೂ ಸಿಕ್ಕಿದೆ.ಇಲ್ಲಿವರೆಗೂ ಲಕ್ಷ್ಮೀ ನಿವಾಸ ಎಂಬ ಹೆಸರಿಟ್ಟಿದ್ದರೂ ಮನೆಯನ್ನೇ ಕಟ್ಟಿರಲಿಲ್ಲ, ಆದರೆ ಇದೀಗ ಕೊನೆಗೂ ಲಕ್ಷ್ಮೀ ಮತ್ತು ಶ್ರೀನಿವಾಸರ ಆ ಕನಸು ನನಸಾಗುವ ಸಮಯ ಬಂದೇ ಬಿಟ್ಟಿದೆ.

PREV
15
ಲಕ್ಷ್ಮೀ ನಿವಾಸ

ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷ್ಮೀ ನಿವಾಸ. ಈ ಧಾರಾವಾಹಿ ಆರಂಭವಾಗಿ ಮೂರು ವರ್ಷವಾಗುತ್ತಾ ಬಂದಿದೆ, ಆದರೆ ಧಾರಾವಾಹಿಯ ಹೆಸರಿಗೆ ಒಂದು ಅರ್ಥವೇ ಸಿಕ್ಕಿರಲಿಲ್ಲ, ಯಾಕೆಂದರೆ, ಶ್ರೀನಿವಾಸರ ಕನಸಾಗಿದ್ದ ಲಕ್ಷ್ಮೀ ನಿವಾಸದ ನಿರ್ಮಾಣವೇ ಆಗಿರಲಿಲ್ಲ. ಇದೀಗ ಆ ಕನಸು ನನಸಾಗುವ ಸಮಯ ಬಂದಿದೆ.

25
ಕೊನೆಗೂ ಕನಸಿನ ಮನೆಗೆ ಭೂಮಿ ಪೂಜೆ

ಲಕ್ಷ್ಮೀ- ಶ್ರೀನಿವಾಸರ ಕನಸಿನ ಮನೆಯಾದ "ಲಕ್ಷ್ಮೀ ನಿವಾಸ"ಕ್ಕೆ ಭೂಮಿ ಪೂಜೆಯ ಮೂಲಕ ಶುಭಾರಂಭ ಮಾಡಲಾಗಿದೆ. ಆ ಮೂಲಕ ಬಹು ವರ್ಷಗಳ ಲಕ್ಷ್ಮೀ ಶ್ರೀನಿವಾಸರ ಕನಸು ನನಸಾಗುವ ಕಾಲ ಬಂದಿದೆ.

35
ಧಾರಾವಾಹಿ ಆರಂಭವಾಗಿದ್ದೇ ಕನಸಿನ ಮೂಲಕ

ಲಕ್ಷ್ಮೀ ನಿವಾಸ ಧಾರಾವಾಹಿ ಶುರುವಾಗಿದ್ದೇ ಲಕ್ಷ್ಮೀ ಮತ್ತು ಶ್ರೀನಿವಾಸರ ಕನಸಿನ ಮೂಲಕ. ಲಕ್ಷ್ಮೀಗೆ ತನ್ನ ಹೆಣ್ಣು ಮಕ್ಕಳ ಮದುವೆ ಮಾಡುವ ಚಿಂತೆಯಾಗಿದ್ದರೆ, ಶ್ರೀನಿವಾಸ್ ಗೆ ಲಕ್ಷ್ಮೀ ನಿವಾಸವನ್ನು ಕಟ್ಟುವ ಕನಸು. ತಾವು ಅಂದುಕೊಂಡ ಹಾಗೆ ಅಲ್ಲದಿದ್ದರೂ ಲಕ್ಷ್ಮೀ ಕನಸು ನೆರವೇರಿದೆ. ಆದರೆ ಇದೀಗ ಶ್ರೀನಿವಾಸ್ ಕನಸು ನನಸು ಮಾಡುವ ಸಮಯ.

45
ಸೀರಿಯಲ್ ಮುಕ್ತಾಯವಾಗುತ್ತಾ?

ಹಲವು ವರ್ಷಗಳಿಂದ ಹಿರಿಯ ಜೋಡಿ ಕಂಡಿದ್ದ ಕನಸನ್ನು ಇದೀಗ ಮನೆ ಮಂದಿ ಎಲ್ಲಾ ಸೇರಿ ನನಸು ಮಾಡುತ್ತಿದ್ದಾರೆ. ಹಾಗಾಗಿ ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗುತ್ತಾ ಎನ್ನುವ ಕುತೂಹಲ ಕೂಡ ಮೂಡಿದೆ. ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.

55
ವೀಕ್ಷಕರು ಏನು ಹೇಳುತ್ತಿದ್ದಾರೆ?

ಹಲವು ವರ್ಷಗಳಿಂದ ಕನಸು ಕಂಡರೂ ಅದು ನನಸಾಗದೇ ಇರುವುದರಿಂದ, ಕಾದು ಕಾದು ವೀಕ್ಷಕರಿಗೂ ಸಾಕಾಗಿದೆ. ಹಾಗಾಗಿ ಕೊನೆಗೂ ಲಕ್ಷ್ಮೀ ನಿವಾಸ ಹೆಸರು ಇಟ್ಟಿದ್ದಕ್ಕೂ ಸಾರ್ಥಕ ಆಯ್ತು ಎಂದಿದ್ದಾರೆ,. ಜೊತೆಗೆ, ಆದಷ್ಟು ಬೇಗ ಮನೆ ಕಟ್ಟಿ ಧಾರಾವಾಹಿಯನ್ನೂ ಮುಕ್ತಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories