ZEE Kannada ಹೊಸ ಸೀರಿಯಲ್ಸ್​​ ಕೃಷ್ಣ ರುಕ್ಕು, ಜಗದ್ಧಾತ್ರಿ ಶೀಘ್ರದಲ್ಲಿ: ಯಾವ ಧಾರಾವಾಹಿಗಳ ಅಂತ್ಯ?

Published : Feb 04, 2026, 05:11 PM IST

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, 'ಕೃಷ್ಣ ರುಕ್ಕು' ಮತ್ತು 'ಜಗದ್ಧಾತ್ರಿ' ಎಂಬ ಹೊಸ ಸೀರಿಯಲ್‌ಗಳು ಬರಲಿವೆ. ಇದರಿಂದಾಗಿ, 'ಅಮೃತಧಾರೆ' ಅಥವಾ 'ಬ್ರಹ್ಮಗಂಟು' ಧಾರಾವಾಹಿ ಅಥವಾ ಬೇರೆ ಸೀರಿಯಲ್​ ಯಾವುದು ಅಂತ್ಯವಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.  

PREV
16
ಪುಟ್ಟಕ್ಕನ ಮಕ್ಕಳು ಅಂತ್ಯ

ಜೀ ಕನ್ನಡ ಸೀರಿಯಲ್​ ವೀಕ್ಷಕರಿಗೆ ತಿಳಿದಿರುವಂತೆ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಶೀಘ್ರದಲ್ಲಿ ಅಂತ್ಯ ಕಾಣಲಿದೆ. ಇದಾಗಲೇ ಇದರ ಶೂಟಿಂಗ್​ ಮುಗಿದಿದೆ. ಆದರೆ ಇದರ ಬೆನ್ನಲ್ಲೇ ಇನ್ನೊಂದು ಧಾರಾವಾಹಿ ಕೂಡ ಮುಕ್ತಾಯ ಆಗಲಿದೆ.

26
ಹೊಸ ಸೀರಿಯಲ್ಸ್​ ಪ್ರೊಮೋ

ಇದಾಗಲೇ ಎರಡು ಹೊಸ ಸೀರಿಯಲ್​ಗಳ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ. ಒಂದು ಕೃಷ್ಣ ರುಕ್ಕು ಹಾಗೂ ಇನ್ನೊಂದು ಜಗದ್ಧಾತ್ರಿ. ಇವೆರಡೂ ಸೀರಿಯಲ್​​ಗಳ ಪ್ರೊಮೋ ನೋಡಿದ ಮೇಲೆ ವೀಕ್ಷಕರು ಯಾವ ಧಾರಾವಾಹಿಗಳ ಅಂತ್ಯವಾಗುತ್ತೆ ಎನ್ನುವ ಕನ್​ಫ್ಯುಷನ್​ನಲ್ಲಿ ಇದ್ದಾರೆ.

36
ಅಮೃತಧಾರೆ ಮತ್ತು ಬ್ರಹ್ಮಗಂಟು

ಇದಾಗಲೇ ಅಮೃತಧಾರೆ ಮತ್ತು ಬ್ರಹ್ಮಗಂಟು ಎರಡೂ ಸೀರಿಯಲ್​ಗಳು ಬಹುತೇಕ ಕ್ಲೈಮ್ಯಾಕ್ಸ್​ ಹಂತದಲ್ಲಿವೆ. ಬ್ರಹ್ಮಗಂಟುವಿನಲ್ಲಿ ಚಿರು ಮತ್ತು ದೀಪಾ ಒಂದಾಗಿಯಾಗಿದೆ. ಸೌಂದರ್ಯಳ ರಹಸ್ಯ ಮಾವನಿಗೂ ತಿಳಿದಿದೆ. ಅದು ಎಲ್ಲರಿಗೂ ತಿಳಿಯುವುದು ಬಾಕಿ ಇದೆ.

46
ಬ್ರಹ್ಮಗಂಟು ಮುಗಿಯಬಹುದಾ?

ಹಾಗೆಂದು ಇದು ಇಷ್ಟು ಬೇಗ ಮುಕ್ತಾಯ ಆಗುತ್ತದೆ ಎಂದು ಹೇಳಲೂ ಆಗದು. ಅರ್ಚನಾ ಮತ್ತು ರಾಹುಲ್​ ವಿಷ್ಯ ಇನ್ನೂ ಕಗ್ಗಂಟಾಗಿದೆ. ರಾಹುಲ್​ ಒಬ್ಬ ಬಾಲಕನನ್ನು ಸಾಕುತ್ತಿದ್ದು, ಆತ ಇವನನ್ನು ಅಪ್ಪ ಎಂದು ಏಕೆ ಹೇಳುತ್ತಾನೆ ಎನ್ನುವುದು ತಿಳಿಯಬೇಕಿದೆ. ಆತನೇ ಸೌಂದರ್ಯಳ ಮಗನಾ ಎನ್ನುವುದೂ ಗೊತ್ತಾಗಬೇಕಿದೆ. ನರಸಿಂಹ ದಂಪತಿಯ ವಿರಸವೂ ಅಂತ್ಯಗೊಳ್ಳಬೇಕಿದೆ. ಸೌಂದರ್ಯಳ ಕಟುಸತ್ಯ ಮಾವನಿಗೆ ತಿಳಿದರೂ ಅದು ಮನೆಯವರಿಗೆ ತಿಳಿಯಬೇಕಿದೆ. ಇವೆಲ್ಲಾ ಆಗಲು ಇನ್ನೂ ಹಲವು ದಿನಗಳೇ ಬೇಕಾಗಬಹುದು.

56
ಅಮೃತಧಾರೆ ಮುಗಿಯತ್ತಾ?

ಅದೇ ಇನ್ನೊಂದೆಡೆ ಅಮೃತಧಾರೆ. ಇದರಲ್ಲಿಯೂ ಗೌತಮ್​ ಮತ್ತು ಭೂಮಿಕಾ ಒಂದಾಗಿ ಆಗಿದೆ. ಆದರೂ ಅವರಿಬ್ಬರ ರೊಮ್ಯಾನ್ಸ್​ ದೃಶ್ಯಗಳಿಂದ ಸೀರಿಯಲ್​​ ಎಳೆಯುತ್ತಿದ್ದಾರೆ. ಇವರ ಮಗಳು ಯಾರು ಎಂದು ತಿಳಿಯಬೇಕಿದೆ. ಶಕುಂತಲಾ ಮತ್ತು ಜೈದೇವ್​ಗೆ ಮಟ್ಟ ಹಾಕಬೇಕಿದೆ. ಭೂಮಿಕಾ ತಮ್ಮ ಮತ್ತು ಗೌತಮ್​ ಇನ್ನೋರ್ವ ತಮ್ಮ ಪಾರ್ಥನ ವಿಷಯವೂ ಇನ್ನೂ ಮುಗಿದಿಲ್ಲ. ಆದ್ದರಿಂದ ಇದು ಕೂಡ ಇಷ್ಟು ಬೇಗ ಅಂತ್ಯ ಆಗತ್ತೆ ಎನ್ನುವುದೂ ಡೌಟೇ.

66
ಬೇರೆ ಸೀರಿಯಲ್​ ಸದ್ಯಕ್ಕಿಲ್ಲ

ಅಮೃತಧಾರೆ ಮತ್ತು ಬ್ರಹ್ಮಗಂಟು ಬಿಟ್ಟರೆ ಸದ್ಯ ಬೇರೆ ಸೀರಿಯಲ್​ಗಳು ಇಷ್ಟು ಬೇಗ ಮುಗಿಯುವ ಹಂತದಲ್ಲಿ ಇಲ್ಲ. ಹಾಗಿದ್ದರೆ ಯಾವ ಸೀರಿಯಲ್​ ಮುಗಿಯಬಹುದು ಎನ್ನುವ ಕುತೂಹಲ ವೀಕ್ಷಕರಿಗೆ ಇದೆ. ಇದಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories