ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ?

Published : Apr 13, 2026, 10:16 PM IST

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಸೈಕೋ ಜಯಂತ್ ಮನೆ ಸೇರಿರುವ ಜಾನು ಸಂಪೂರ್ಣ ಬದಲಾಗಿದ್ದಾಳೆ. ಜಿರಳೆ ಸೇರಿಸಿದ ಹಾಲನ್ನು ಜಯಂತ್‌ಗೆ ಕುಡಿಸಿ, ಮನೆಯ ವಸ್ತುಗಳ ಸ್ಥಾನ ಬದಲಾಯಿಸಿ, ಇನ್ನು ಮುಂದೆ ತಾನು ಹೇಳಿದಂತೆ ಕೇಳಬೇಕು ಎಂದು ಎಚ್ಚರಿಕೆ ನೀಡುವ ಮೂಲಕ ಜಯಂತ್‌ಗೆ ತಿರುಗೇಟು ನೀಡುತ್ತಿದ್ದಾಳೆ.

PREV
15
ಲಕ್ಷ್ಮೀ ನಿವಾಸ ಸೀರಿಯಲ್

ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು ಇಷ್ಟು ದಿನ ಕಾಯ್ತಿದ್ದ ದೃಶ್ಯವನ್ನು ಇಂದಿನ ಸಂಚಿಕೆಯಲ್ಲಿ ಕಣ್ತುಂಬಿಕೊಂಡಿದ್ದಾರೆ. ಸೈಕೋ ಜಯಂತ್ ಮನೆ ಸೇರಿರುವ ಜಾನು ಮುಂದೇನು ಮಾಡ್ತಾಳೆ ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿತ್ತು. ಜಾನು ಹೇಳಿದ ಮಾತುಗಳನ್ನು ಕೇಳಿ ಜಯಂತ್ ಶಾಕ್ ಆಗಿದ್ದಾನೆ. ಜಿರಳೆ ಸೇರಿಸಿದ ಹಾಲನ್ನು ಜಯಂತ್‌ಗೆ ಕುಡಿಸುವ ಮೂಲಲ ಜಾನು ತಿರುಗೇಟು ನೀಡಿದ್ದಾಳೆ.

25
ಬದಲಾದ ಜಾನು

ಈ ಹಿಂದಿನ ಜಾನು ನಾನಲ್ಲ. ನೀವು ಹೇಳಿದಂತೆ ಕೇಳಿಕೊಂಡು ಇರೋ ಜಾನು ನಾನಲ್ಲ. ಇನ್ಮುಂದೆ ನಾನು ಹೇಳಿದಂತೆಯೇ ನೀವು ಕೇಳಿಕೊಂಡಿರಬೇಕು ಎಂದು ಜಯಂತ್‌ಗೆ ಅವಾಜ್ ಹಾಕಿದ್ದಾಳೆ. ತನ್ನನ್ನು ಬಂಗಾರದ ಪಂಜರದಲ್ಲಿರಿಸಿದ್ದರ ಬಗ್ಗೆಯೂ ಜಾನು ಮಾತನಾಡಿದ್ದಾಳೆ. ತನ್ನ ಪ್ರೀತಿಯ ಜಾನು ಮಾತುಗಳನ್ನು ಕೇಳುತ್ತಿದ್ದಂತೆ ಜಯಂತ್ ಫುಲ್ ಶಾಕ್ ಆಗಿದ್ದಾನೆ.

35
ಬೆಳಗ್ಗೆಯೂ ಬಿಗ್ ಶಾಕ್

ರಾತ್ರಿ ಜಾನು ಮಾತುಗಳನ್ನು ಕೇಳಿಸಿಕೊಂಡು ಆಘಾತಕ್ಕೊಳಗಾಗಿದ್ದ ಜಯಂತ್‌ಗೆ ಬೆಳಗ್ಗೆಯೂ ಶಾಕ್ ಎದುರಾಗಿತ್ತು. ಜಯಂತ್‌ಗೆ ಮನೆಯಲ್ಲಿರುವ ವಸ್ತುಗಳ ಸ್ಥಾನ ಬದಲಾಗಬಾರದು. ಒಂದು ಸಣ್ಣ ಬದಲಾವಣೆಯಾದ್ರೂ ಜಯಂತ್ ಗಮನಕ್ಕೆ ಬರುತ್ತದೆ. ಇದೀಗ ಇದನ್ನೇ ತನ್ನ ಲಾಭಕ್ಕಾಗಿ ಜಾನು ಬಳಸಿಕೊಂಡಿದ್ದಾಳೆ.

45
ಜಯಂತ್ ವಿಲವಿಲ

ಮನೆಯಲ್ಲಿದ್ದ ಹೂವಿನ ಕುಂಡಗಳ ಸ್ಥಾನವನ್ನು ಜಾನು ಬದಲಾಯಿಸಿದ್ದಾಳೆ. ಜಾನು ಇಲ್ಲದಿದ್ದಾಗ ಜಯಂತ್ ಇದೇ ಹೂವಿನ ಕುಂಡಗಳ ಜೊತೆ ಮಾತನಾಡುತ್ತಿದ್ದನು. ಈಗ ಹೂವಿನ ಕುಂಡಗಳ ಸ್ಥಾನ ಬದಲಾಗಿರೋದನ್ನು ಕಂಡು ಜಯಂತ್ ವಿಲವಿಲ ಒದ್ದಾಡಿದ್ದಾನೆ. ನನಗೆ ಇದು ಇಷ್ಟವಿಲ್ಲ ಅಂತ ಗೊತ್ತಿದ್ರೂ ಯಾಕೆ ಹೀಗೆ ಮಾಡ್ತಿದ್ದೀಯಾ ಎಂದು ಜಯಂತ್ ಪ್ರಶ್ನೆ ಮಾಡಿದ್ದಾನೆ.

ಇದನ್ನೂ ಓದಿ: Lakshmi Nivasa Serial: ಜಾನು ಸಾವಿನಲ್ಲೂ, ಲಕ್ಷ್ಮೀ-ಶ್ರೀನಿವಾಸ್‌ ಷಷ್ಠಿಪೂರ್ತಿಯಲ್ಲೂ ಅದೊಂದು ಮಿಸ್‌; ವೀಕ್ಷಕರಿಗೆ ಗೊತ್ತಾಯ್ತು

55
ಜಯಂತ್‌ಗೆ ಜಾನು ಎಚ್ಚರಿಕೆ

ನನಗೆ ಇಷ್ಟಬಂದಂತೆ ಈ ಮನೆಯಲ್ಲಿರಲು ಬಂದಿದ್ದೇನೆ. ಎಲ್ಲವೂ ನೀವು ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಹಾಗೆಯೇ ನಿಮ್ಮಿಷ್ಟದಂತೆ ಎಲ್ಲರೂ ಇರಬೇಕು ಅನ್ನೋದು ನಿಮ್ಮದು ತಪ್ಪು ಕಲ್ಪನೆ. ನಾನು ಹೇಳಿದಂತೆಯೇ ಮುಂದೆ ನಡೆಯಬೇಕು ಎಂದು ಜಯಂತ್‌ಗೆ ಜಾನು ಎಚ್ಚರಿಕೆ ನೀಡಿದ್ದಾಳೆ. ಈ ಎಲ್ಲದರ ನಡುವೆ ಜಾನುಗೆ ಕರೆ ಮಾಡಿರುವ ಅಜ್ಜಿ, ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದಾಳೆ.

ಇದನ್ನೂ ಓದಿ: ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories