‘ನೀ ಇರಲು ಜೊತೆಯಲ್ಲಿ’ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ ‘ಪುಟ್ಟಕ್ಕನ ಮಕ್ಕಳು’ ನಟಿ

Published : Apr 13, 2026, 04:48 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯಲ್ಲಿ ನಾಯಕಿ ರಚನಾ ಪಾತ್ರದ ಮುಕ್ತಾಯವಾಗಿದ್ದು, ಇದೀಗ ರೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಟಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಯಾರಿ ನಟಿ? 

PREV
16
ನೀ ಇರಲು ಜೊತೆಯಲ್ಲಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನೀ ಇರಲು ಜೊತೆಯಲ್ಲಿ’ ನಾಯಕಿ ರಚನಾ, ಕೃಷ್ಣನ ಲಕ್ಕಿ ಚಾರ್ಮ್ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದಾಳೆ. ಆ ಮೂಲಕ ಇದೀಗ ನಾಯಕಿಯ ಪಾತ್ರಕ್ಕೆ ತೆರೆ ಬಿದ್ದಿದೆ. ಸದ್ಯದಲ್ಲೇ ಹೊಸ ನಾಯಕಿ ಧಾರಾವಾಹಿಗೆ ಎಂಟ್ರಿ ಕೊತ್ತಿದ್ದಾರೆ.

26
ಸೀರಿಯಲ್ ನಿಂದ ಹೊರ ಬಂದ ಸಲೋಮಿ

ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿ ಸಲೋಮಿ ಡಿಸೋಜಾ ಇಲ್ಲಿವರೆಗೆ ನಾಯಕಿ ರಚನಾ ಪಾತ್ರದಲ್ಲಿ ನಟಿಸುತ್ತಿದ್ದರು. ಇದೀಗ ಪಾತ್ರವನ್ನು ಕೊನೆಗೊಳಿಸಲಾಗಿದ್ದು, ಆ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

36
ನನಗೆ ಕಲಿಯಲು ಸಹಾಯ ಮಾಡಿತು

ಪ್ರತಿಯೊಂದು ಪ್ರಯಾಣವೂ ಪರಿಪೂರ್ಣವೆಂದು ಭಾವಿಸುವುದಿಲ್ಲ, ಆದರೆ ಪ್ರತಿಯೊಂದು ಪ್ರಯಾಣವು ನಿಮಗೆ ಏನನ್ನಾದರೂ ಕಲಿಸುತ್ತದೆ. ರಚನಾ ಪಾತ್ರದಲ್ಲಿ "ನೀ ಇರಲು ಜೊತೆಯಲಿ" ಒಂದು ಅಧ್ಯಾಯವಾಗಿದ್ದು ಅದು ನನಗೆ ಬೆಳೆಯಲು, ಕಲಿಯಲು ಮತ್ತು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.

46
ಧನ್ಯವಾದ ತಿಳಿಸಿದ ಸಲೋಮಿ

ಈ ಸುಂದರ ಅವಕಾಶಕ್ಕಾಗಿ starsuvarna ಅವರಿಗೆ ಮತ್ತು ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಮಾರ್ಗದರ್ಶನ ನೀಡಿದ ನಮ್ಮ ನಿರ್ದೇಶಕರಾದ ಧರಣಿ ಜಿ ರಮೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ತಂಡ, ಸಹ ನಟರು ಮತ್ತು ಈ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಪಾಠಗಳು, ಶಕ್ತಿ ಮತ್ತು ನೆನಪುಗಳನ್ನು ಮುಂದಕ್ಕೆ ಕೊಂಡೊಯ್ಯುವುದು... ಮತ್ತು ಬಲವಾದ ಹೃದಯದಿಂದ ಮುಂದುವರಿಯುವುದು ಎಂದು ಸಲೋಮಿ ಬರೆದುಕೊಂದಿದ್ದಾರೆ. ಆ ಮೂಲಕ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ.

56
ಹೊಸ ನಾಯಕಿ ಶೀಘ್ರದಲ್ಲಿ ಎಂಟ್ರಿ

ಇದೀಗ ನೀ ಇರಲು ಜೊತೆಯಲ್ಲಿ ಧಾರಾವಾಹಿಗೆ ಹೊಸ ನಾಯಕಿಯ ಎಂಟ್ರಿಯಾಗಲಿದೆ ಎನ್ನುವ ಮಾಹಿತಿ ವೈರಲ್ ಆಗುತ್ತಿದೆ. ಈ ನಾಯಕಿ ಬೇರಾರು ಅಲ್ಲ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಟಿ ವಿದ್ಯಾ ರಾಜ್. ಇವರು ಸ್ನೇಹಾ ಪಾತ್ರದಲ್ಲಿ ಮಿಂಚಿದ್ದರು.

66
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಂತೆ ಇಲ್ಲೂ ಆಗುತ್ತಾ?

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಸಾವನ್ನಪ್ಪಿದ ಮೇಲೆ, ಕಂಠಿ ಜೀವನದಲ್ಲಿ ಮತ್ತೊಬ್ಬ ಸ್ನೇಹಾ ಆಗಿ ವಿದ್ಯಾ ರಾಜ್ ಎಂಟ್ರಿ ಕೊಟ್ಟಿದ್ದರು. ಅದೇ ರೀತಿ ಇದೀಗ ರಚನಾ ಪಾತ್ರ ಸಾವನ್ನಪ್ಪಿದ ಮೇಲೆ ಮತ್ತೆ ಇದೇ ವಿದ್ಯಾ ರಾಜ್ ಎಂಟ್ರಿ ಕೊಡುತ್ತಿದ್ದಾರೆ. ಅದೂ ನಾಯಕನ ಜೀವನದಲ್ಲಿ. ಹೊಸ ಪಾತ್ರವೋ ಅಥವಾ ರಚನಾಳೆ ಹೊಸ ಅವತಾರದಲ್ಲಿ ಬರುತ್ತಿದ್ದಾಳ ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories