ಕೊಂಕು ಮಾತುಗಳನ್ನಾಡುತ್ತಿದ್ದ ಮಹಿಳಾಮಣಿಳಿಗೆ ಕರ್ಣ ತಿರುಗೇಟು ನೀಡಿದ್ದನ್ನು ನೋಡಿ ಇಬ್ಬರು ಅಜ್ಜಿಯರು ಮತ್ತು ಅಮ್ಮ ಮಾಲತಿ ಖುಷಿಯಾಗಿದ್ದಾರೆ. ಇಲ್ಲಿಯೂ ತನ್ನ ಪ್ಲಾನ್ ಫೇಲ್ ಆಗಿದ್ದಕ್ಕೆ ರಮೇಶ್ ಗಾಯಗೊಂಡ ಹಾವಿನಂತಾಗಿದ್ದಾನೆ.
ಮತ್ತೊಂದೆಡೆ ಕರ್ಣನ ಮನೆಯಿಂದ ದೂರ ಹೋಗಲು ಅಜ್ಜಿ ಮತ್ತು ನಿಧಿ ಪ್ಲಾನ್ ಮಾಡಿದ್ದಾರೆ. ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇನೆಂದು ಅಜ್ಜಿಗೆ ನಿಧಿ ಭರವಸೆ ನೀಡಿದ್ದಾಳೆ. ಕೆಲಸ ಮಾಡಿ ಒಂದಿಷ್ಟು ಹಣ ಕೊಡುತ್ತೇನೆ ಅಂತ ನಿತ್ಯಾ ಸಹ ಹೇಳಿದ್ದಾಳೆ. ಮದುವೆಯಾದ ಮಗಳಿಗೆ ತವರಿನ ಭಾರ ಹಾಕಬಾರದು ಎಂಬ ಶಾಂತಿ ಮಾತಿಗೆ ನಿಧಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: Actor Kiran Raj: ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ ಕಿರುತೆರೆಯ ಕರ್ಣ ಕಿರಣ್ ರಾಜ್