Karna Serial: ಹೆಣ್ಣಿಗೆ ಹೆಣ್ಣೇ ಶತ್ರು ಅಂತ ಸಾಬೀತಾಯ್ತು! ಗ್ರಹಚಾರ ಬಿಡಿಸಿದ ಡಾಕ್ಟರ್ ಕರ್ಣ!

Published : Oct 29, 2025, 09:02 AM IST

ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ಕರ್ಣ, ನಿತ್ಯಾಗೆ ಮದುವೆ ಆಗಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಮನೆಯಲ್ಲಿ ಮೊದಲ ದಿನ ನಿತ್ಯಾಗೆ ಶಾವಿಗೆ ಪಾಯಸ ಮಾಡು ಅಂತ ಅಕ್ಕ-ಪಕ್ಕದ ಮನೆಯವರು ಹೇಳಿದ್ದರು. ಅದರಂತೆ ನಿತ್ಯಾ ಪಾಯಸ ಮಾಡಿದ್ದಾಳೆ. 

PREV
15
ಕೆಣಕುವ ಮಾತನಾಡಿದ್ದಾರೆ

ನಿತ್ಯಾಗೆ ಅಡುಗೆ ಬರೋದಿಲ್ಲ, ಆದರೆ ಕರ್ಣ ಮಾತ್ರ ಅವಳಿಗೆ ಫೋನ್‌ನಲ್ಲಿ ಅಡುಗೆ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟಿದ್ದನು. ಈ ಪಾಯಸ ತಿಂದವರು ನಿತ್ಯಾಳನ್ನು ಹೊಗಳಿದ್ದಲ್ಲದೆ, ಕೆಣಕುವ ಮಾತನಾಡಿದ್ದಾರೆ. ಇದು ಕರ್ಣನಿಗೆ ಸಿಟ್ಟು ತರಿಸಿದೆ. ಹಾಗಾದರೆ ಮುಂದೆ ಅವನ ನಿರ್ಧಾರ ಏನು?

25
ನಿತ್ಯಾ ಜಾಕ್‌ಫಾಟ್‌ ಹೊಡೆದಳು

ನಾಲಿಗೆಗೆ ಪಾಯಸ ತಾಗುತ್ತಿದ್ದ ಹಾಗೆ ಇವರು ಪಾಸ್‌ ಆಗಿಬಿಟ್ಟರು, ಸದ್ಯ ಇಷ್ಟಾದರೂ ಗೊತ್ತಿದೆಯಲ್ಲ. ಇಲ್ಲ ಅಂದಿದ್ರೆ ನಿನ್ನ ಹುಡುಗ ಕೈಕೊಟ್ಟು, ಓಡಿ ಹೋಗಿದ್ದಕ್ಕೂ, ಕರ್ಣ ಜೀವನ ಕೊಟ್ಟಿದ್ದಕ್ಕೂ ಏನೂ ವ್ಯತ್ಯಾಸ ಇರುತ್ತಿರಲಿಲ್ಲ. ಆ ಹುಡುಗ ಓಡಿ ಹೋಗಿದ್ದಕ್ಕೆ, ನಿತ್ಯಾ ಜಾಕ್‌ಫಾಟ್‌ ಹೊಡೆದಳು ಎಂದು ಪಕ್ಕದ ಮನೆಯವರು ಹೇಳಿದ್ದರು.

35
ತರಾಟೆಗೆ ತೆಗೆದುಕೊಂಡ ಕರ್ಣ

“ಇಲ್ಲಿ ಬಂದು ನಮ್ಮ ಜೀವನದ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ. ಪಾಪ ಅಂತ ನನಗೆ ಕರುಣೆ ತೋರಿಸೋದು ಬೇಡ, ಇವರಿಗೆ ಜಾಕ್‌ಫಾಟ್‌ ಹೊಡಿತು ಅಂತ ಹೊಟ್ಟೆ ಉರಿದುಕೊಳ್ಳೋದು ಬೇಡ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇರುತ್ತಾರೆ ಅಲ್ವಾ? ಹಾಗೆಂದಮೇಲೆ ಮದುವೆ ಮನೆಯಲ್ಲಿ ಅಷ್ಟೆಲ್ಲ ಅನುಭವಿಸಿರೋ ನಿತ್ಯಾ ಬಗ್ಗೆ ಯಾಕೆ ಹೀಗೆ ಮಾತಾಡ್ತೀರಾ? ಹೆಣ್ಣಿಗೆ ಹೆಣ್ಣೇ ಶತ್ರು ಎನ್ನೋ ಗಾದೆ ಮಾತು ನಿಜ ಮಾಡೋಕೆ ಹೋಗಬೇಡಿ” ಎಂದು ಕರ್ಣ, ಅಕ್ಕ-ಪಕ್ಕದವನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

45
ನಿತ್ಯಾ ಪರವೂ ಬ್ಯಾಟಿಂಗ್‌

ನಿತ್ಯಾಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ಕರ್ಣ ಗ್ರಹಚಾರ ಬಿಡಿಸಿದ್ದಾನೆ. ಇದು ಇಬ್ಬರೂ ಅಜ್ಜಿಯಂದಿರಿಗೆ ಖುಷಿಯಾಗಿದೆ. ನಿತ್ಯಾ ಮಾತ್ರ ಸುಮ್ಮನೆ ನಿಂತಿದ್ದರೆ, ರಮೇಶ್‌ ಮಾತ್ರ ಫುಲ್‌ ಸೈಲೆಂಟ್‌ ಆಗಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

55
ಪಾತ್ರಧಾರಿಗಳು

ಕರ್ಣ ಧಾರಾವಾಹಿಯಲ್ಲಿ ಕರ್ಣ ಪಾತ್ರದಲ್ಲಿ ಕಿರಣ್‌ ರಾಜ್‌, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ, ನಿಧಿ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ರಮೇಶ್‌ ಪಾತ್ರದಲ್ಲಿ ನಾಗಾಭರಣ ನಟಿಸಿದ್ದು, ಉಳಿದಂತೆ ಆಶಾರಾಣಿ, ಗಾಯತ್ರಿ ಪ್ರಭಾಕರ್‌ ಕೂಡ ನಟಿಸಿದ್ದಾರೆ.

Read more Photos on
click me!

Recommended Stories