ಜೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ ನಕಲಿ ಸೀತಾಳಾಗಿ ಬಂದಿದ್ದ ಹೆಲೆನ್ ರಹಸ್ಯವನ್ನು ಸಂಜಯ್ ಮತ್ತು ಸುಮತಿ ಬಯಲು ಮಾಡಿದ್ದಾರೆ. ಇದರಿಂದ ತಾರಾಗೆ ದೊಡ್ಡ ಆಘಾತವಾಗಿದ್ದು, ನಿಧಿ ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿದ್ದಾಳೆ. ಇನ್ನೊಂದೆಡೆ ಭುವನೇಶ್ವರಿ ಮತ್ತು ಕರ್ಣ ಒಬ್ಬರಿಗೊಬ್ಬರು ಹತ್ತಿರವಾಗುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಕರ್ಣ ಸೀರಿಯಲ್‌ನ ಇಂದಿನ ಸಂಚಿಕೆ ರೋಚಕ ತಿರುವು ಪಡೆದುಕೊಳ್ಳಲಿದೆ. ಹೌದು, ಕರ್ಣನ ಅಮ್ಮ ಎಂದು ಹೇಳಿಕೊಂಡು ಹೆಲೆನ್ ಬಂದಿದ್ದು, ತಾರಾ ತನ್ನ ಆಟ ಮುಂದುವರಿಸಿದ್ದಳು. ಇದೀಗ ತಾರಾಳ ತೆರೆ ಹಿಂದಿನ ಆಟಕ್ಕೆ ಸಂಜಯ್ ಮತ್ತು ಸುಮತಿ ಬ್ರೇಕ್ ಹಾಕಿದ್ದಾರೆ.
25
ನಕಲಿ ಸೀತಾಳ ಅಪಹರಣ
ಸೀತಾ ಈ ಮನೆಯಲ್ಲಿರಬೇಕು ಅಂದ್ರೆ ಗಂಡನೊಂದಿಗೆ ಆಕೆಯ ಮದುವೆ ಮಾಡಿಸಬೇಕು ಅನ್ನೋದು ಕರ್ಣನ ತಾಯಿ ಮಾಲತಿ ಅಭಿಪ್ರಾಯವಾಗಿವೆ. ಮಾಲತಿ ಮಾತಿಗೆ ಅಜ್ಜಿ ಅನ್ನಪೂರ್ಣ ಸಹ ಸಹಮತ ವ್ಯಕ್ತಪಡಿಸುತ್ತಿದ್ದಾಳೆ. ಒಂದು ವೇಳೆ ಮನೆಯಲ್ಲಿರುವ ಸೀತಾ ಮದುವೆ ತಂದೆಯೊಂದಿಗೆ ನಡೆದ್ರೆ ತನ್ನ ಮುಂದಿನ ಭವಿಷ್ಯಕ್ಕೆ ಅಡ್ಡಿ ಎಂದು ಭಾವಿಸಿ ಸೂರಜ್ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ.
35
ಸತ್ಯ ಒಪ್ಪಿಕೊಂಡ ಹೆಲೆನ್
ಸಂಜಯ್‌ನ ಈ ಕೆಲಸಕ್ಕೆ ಚಿಕ್ಕಮ್ಮ ಸುಮತಿ ಸಹ ಸಾಥ್ ನೀಡಿದ್ದಾಳೆ. ಸುಮತಿ ಮತ್ತು ಸಂಜಯ್ ಜೊತೆಯಾಗಿ ಸೀತಾಳನ್ನು ಕಿಡ್ನ್ಯಾಪ್ ಮಾಡೋದನ್ನು ನೋಡಿದ ನಿಧಿ, ಮೂವರನ್ನು ಫಾಲೋ ಮಾಡಿದ್ದಾಳೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಸೀತಾಳನ್ನು ಬಂಧಿಸಿಟ್ಟು ಬೆದರಿಸಿದ್ದಾರೆ. ಸಂಜಯ್ ಚಾಕು ಹಿಡಿಯುತ್ತಿದ್ದಂತೆ ಬಂಧನದಲ್ಲಿದ್ದ ಹೆಲೆನ್, ನಾನು ಸೀತಾ ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.
ಈ ವಿಷಯ ತಿಳಿಯುತ್ತಿದ್ದಂತೆ ನೇರವಾಗಿ ಹೆಲೆನ್‌ಳನ್ನು ಮನೆಗೆ ಕರೆದುಕೊಂಡು ಬಂದಿರೋ ಸಂಜಯ್, ಈಕೆ ಕರ್ಣನ ಅಮ್ಮ ಅಲ್ಲ ಎಂಬ ಸತ್ಯವನ್ನು ಎಲ್ಲರ ಮುಂದೆ ಸ್ಪೋಟಿಸಿದ್ದಾನೆ. ಈ ವಿಷಯ ಕೇಳುತ್ತಿದ್ದಂತೆ ಅಲ್ಲಿಯೇ ನಿಂತಿದ್ದ ತಾರಾಗೆ ಬಿಗ್ ಶಾಕ್ ಆಗಿದೆ. ಮತ್ತೊಂದೆಡೆ ನಡೆದ ಎಲ್ಲ ಘಟನೆಗೂ ನಿಧಿ ಸಾಕ್ಷಿ ಆಗ್ತಾಳಾ ಅನ್ನೋದು ಕುತೂಹಲ ಮೂಡಿಸಿದೆ.
55
ಮಗನ ಹುಡುಕಾಟದಲ್ಲಿ ಭುವನೇಶ್ವರಿ
ಇತ್ತ ಹೆಸರು ಬದಲಿಸಿಕೊಂಡು ಭುವನೇಶ್ವರಿ ಆಗಿರೋ ಸೀತಾ ಮತ್ತು ಕರ್ಣ ಒಬ್ಬರಿಗೊಬ್ಬರು ಹತ್ತಿರವಾಗುತ್ತಿದ್ದಾರೆ. ಕರ್ಣನ ಹೆಂಡತಿ ನಿಧಿ ತನ್ನ ಸ್ವಂತ ಅಣ್ಣನ ಮಗಳು ಎಂದು ತಿಳಿದಿರುವ ಭುವನೇಶ್ವರಿ, ಮನೆಗೆ ಕರೆಸಿ ರುಚಿಯಾದ ಊಟ ಸಹ ಹಾಕಿಸಿದ್ದಾಳೆ. ಕರ್ಣನಲ್ಲಿ ತನ್ನ ಮಗನನ್ನು ಕಾಣುತ್ತಿರೋ ಭುವನೇಶ್ವರಿಗೆ ಅವನೇ ತನ್ನ ಪುತ್ರ ಎಂಬ ಸತ್ಯ ಯಾವಾಗ ತಿಳಿಯುತ್ತೆ ಅನ್ನೋದನ್ನು ನಿರ್ದೇಶಕರು ಹೇಳಬೇಕಿದೆ.
ಸುಮತಿ ಮತ್ತು ಸಂಜಯ್ ಮಾಡಿದ ಈ ಪ್ಲಾನ್‌ನಿಂದಲೇ ನಕಲಿ ಸೀತಾಳ ಡ್ರಾಮಾ ಬಯಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.