Karna Serial: ಬರೋಬ್ಬರಿ 22 ಎಪಿಸೋಡ್‌ ಬಂದ್ರೂ ನಿತ್ಯಾ ಪಾತ್ರದ ಸುಳಿವೇ ಇಲ್ಲ; ಅಂಥದ್ದೇನಾಯ್ತು?

Published : Jun 30, 2026, 12:44 PM IST

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿಧಿ ಸುತ್ತವೇ ಕಥೆ ಸಾಗುತ್ತಿದೆ. ಇವರಿಬ್ಬರ ಲವ್‌ಸ್ಟೋರಿಗೆ ನಿತ್ಯಾ ಸಮಸ್ಯೆ ಆಗಿದ್ದಳು. ಈಗ ಈ ಸಮಸ್ಯೆ ಬಗೆಹರಿದಿದೆ. ಆದರೆ ಈಗ ನಿತ್ಯಾ ಕಾಣಿಸ್ತಿಲ್ಲ. ಹೌದು, ಕಳೆದ 22 ಎಪಿಸೋಡ್‌ನಿಂದ ನಿತ್ಯಾ ಕಾಣಿಸ್ತಿಲ್ಲ.

PREV
15
ತೇಜಸ್‌ಗೆ ಮತ್ತೆ ಮದುವೆ ಆಯ್ತು!

ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಲವ್‌ ಮಾಡಿದ್ದರು. ಇವರಿಬ್ಬರು ಒಂದಾಗೋ ಟೈಮ್‌ಗೆ ಕರ್ಣ, ನಿತ್ಯಾ ಮದುವೆ ನಾಟಕ ಮಾಡುವೆ ಹಾಗೆ ಆಯ್ತು. ಇನ್ನೊಂದು ಕಡೆ ನಿತ್ಯಾ ಕೂಡ ತೇಜಸ್‌ ಮಗುವಿಗೆ ತಾಯಿಯಾಗಿದ್ದಳು. ತಂಗಿ ನಿಧಿ ಪ್ರೀತಿ ಕಥೆ ಗೊತ್ತಾಗೋ ಟೈಮ್‌ ಬಂದಾಗ ಅತ್ತ ತೇಜಸ್‌ ಕೂಡ ಇನ್ನೊಂದು ಮದುವೆ ಆಗಿದ್ದನು.

25
ನಿತ್ಯಾ ಬಗ್ಗೆ ಮಾತನಾಡುತ್ತಲೇ ಇಲ್ಲ

ಕೊನೆಗೂ ನಿಧಿ, ಕರ್ಣ ಮದುವೆ ಆಗಿದೆ. ಕರ್ಣನ ಮನೆಯಲ್ಲಿ ಸಾವಿರ ಸಮಸ್ಯೆ ಇದ್ದು, ಇದನ್ನು ಬಗೆಹರಿಸುವತ್ತ ಕಥೆ ಸಾಗುತ್ತಿದೆ. ಒಟ್ಟಿನಲ್ಲಿ ಇವರಿಬ್ಬರ ಮೇಲೆ ಕಥೆ ಹೋಗುತ್ತಿದೆ. ಆದರೆ ನಿತ್ಯಾ ಬಗ್ಗೆ ಸ್ವಲ್ಪವೂ ಮಾತಿಲ್ಲ.

35
ನಿತ್ಯಾ ಎಲ್ಲಿ ಹೋದಳು?

ನಿತ್ಯಾ ಎಲ್ಲಿದ್ದಾಳೆ? ಹೇಗಿದ್ದಾಳೆ? ಇವಳ ಕಥೆ ಏನು? ಪ್ರಗ್ನೆಂಟ್‌ ಲೇಡಿ ಬಗ್ಗೆ ಯಾರೂ ಏನೂ ಮಾತನಾಡುತ್ತಿಲ್ಲ. ಒಂದು ಕಡೆ ಶಾಂತಿಯನ್ನು ತೋರಿಸಿದರೂ ಕೂಡ ನಿತ್ಯಾಳನ್ನು ಮಾತ್ರ ತೋರಿಸುತ್ತಿಲ್ಲ. ನಿಧಿ ಹಾಗೂ ಕರ್ಣನ ಮದುವೆ ಬಳಿಕ ಇವಳ ಸುದ್ದಿಯೇ ಇಲ್ಲ.

45
ನಿತ್ಯಾ ಪಾತ್ರದ ಕಥೆ ಏನು?

ನಮ್ರತಾ ಗೌಡ ಅವರು ಕರ್ಣ ಧಾರಾವಾಹಿಯಿಂದ ಹೊರಗಡೆ ಬಂದರಾ? ಅಥವಾ ಸೀರಿಯಲ್‌ನಿಂದ ಬ್ರೇಕ್‌ ತಗೊಂಡಿದ್ದಾರಾ? ಎಂಬ ಬಗ್ಗೆ ಮಾಹಿತಿ ಇಲ್ಲ. ನಟಿ ನಮ್ರತಾ ಗೌಡ ಕೂಡ ಈ ಬಗ್ಗೆ ಮಾತನಾಡಿಲ್ಲ. ಹಾಗಾದರೆ ಮುಂದೆ ಏನು? ನಿತ್ಯಾ ಟ್ರಾಕ್‌ ಪ್ರಸಾರ ಆಗಲಿದೆಯಾ ಅಥವಾ ಕರ್ಣ-ನಿಧಿ ಮೇಲೆ ಕಥೆ ಸಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

55
ಟ್ರಿಪ್‌ ಮಾಡ್ತಿರೋ ನಟಿ!

ನಟಿ ನಮ್ರತಾ ಗೌಡ ಅವರು ಟ್ರಿಪ್‌ ಮಾಡುತ್ತಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories