ನನಗೆ ಆಗಲ್ಲ ಎಂದು ಕೈಮುಗಿದ್ರೂ ಕೇಳ್ದೇ ರೋಲ್​​ ಕೊಟ್ರು: ದಿಲೀಪ್​ ರಾಜ್​ರನ್ನು ನೆನೆದ 'ಪಾರು'

Published : Jun 29, 2026, 05:24 PM IST

'ಪಾರು' ಖ್ಯಾತಿಯ ನಟಿ ಮೋಕ್ಷಿತಾ ಪೈ, ತಮಗೆ ನಟನೆಯೇ ಬರದಿದ್ದರೂ ದಿವಂಗತ ದಿಲೀಪ್ ರಾಜ್ ಹೇಗೆ ತಮ್ಮನ್ನು ನಾಯಕಿಯನ್ನಾಗಿ ಮಾಡಿದರು ಎಂಬುದನ್ನು ಸ್ಮರಿಸಿದ್ದಾರೆ. ತಮ್ಮ ವಿಕಲಚೇತನ ಸಹೋದರನ ಆರೈಕೆಯ ಜವಾಬ್ದಾರಿಯಿಂದಾಗಿ ತಮ್ಮ ಬಾಲ್ಯವು ಎಷ್ಟು ಜವಾಬ್ದಾರಿಯುತವಾಗಿತ್ತು ಎಂಬುದನ್ನು  ಹಂಚಿಕೊಂಡಿದ್ದಾರೆ.

PREV
16
'ಕರುಣೆಯ ಪೈರು, ನಮ್ಮ ಪಾರು...'

ಮೋಕ್ಷಿತಾ ಪೈ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. 'ಕರುಣೆಯ ಪೈರು, ನಮ್ಮ ಪಾರು...' ಎಂದಾಕ್ಷಣ ಪಾರು ನೆನಪಿಗೆ ಬರ್ತಾಳೆ. ಅವಳೇ ಮೋಕ್ಷಿತಾ ಪೈ. ಬಿಗ್​ಬಾಸ್​​ ಮೂಲಕವೂ ಫೇಮಸ್​ ಆಗಿದ್ದ ಮೋಕ್ಷಿತಾ ಪೈ (Mokshita Pai) ಅವರು ಈಗ ಜಗದ್ಧಾತ್ರಿ ಸೀರಿಯಲ್​ ಮೂಲಕ ತೆರೆಗೆ ಜಬರ್ದಸ್ತ್​ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

26
ಪಾರು ಆದ ಮೋಕ್ಷಿತಾ ಪೈ

ಇದರ ನಡುವೆಯೇ, ಮೋಕ್ಷಿತಾ ಪೈ, ನಟನೆಯೇ ಬರದಿದ್ದ ತಮ್ಮನ್ನು ಈಚೆಗೆ ನಿಧನರಾದ ದಿಲೀಪ್​ ರಾಜ್​ ಅವರು ಹೇಗೆ ಒತ್ತಾಯದಿಂದ ಪಾರು ಸೀರಿಯಲ್​ ನಾಯಕಿ ಮಾಡಿದ್ರು, ಹೇಗೆ ಅವರು ತಮ್ಮ ಮೇಲೆ ನಂಬಿಕೆ ಇಟ್ಟರು ಹಾಗೂ ಪಾರು ಹೇಗೆ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿತು ಎನ್ನುವ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

36
ದಿಲೀಪ್​ ರಾಜ್​ರನ್ನು ನೆನೆದ ನಟಿ

ನನಗೆ ನಟನೆ ಎಂದರೆ ಏನು ಎಂದೇ ತಿಳಿದಿರಲಿಲ್ಲ. ಆದರೆ ಪಾರು ಸೀರಿಯಲ್​ನ ಲೀಡ್​ ರೋಲ್​ಗೆ ದಿಲೀಪ್​ ರಾಜ್​ ಸರ್​ ಅವರು ಆಯ್ಕೆ ಮಾಡಿದರು. ಇದೆಲ್ಲಾ ನನ್ನ ಕೈಯಲ್ಲಿ ಆಗಲ್ಲ ಸರ್​ ಎಂದು ಕೈಮುಗಿದು ಬೇಡಿಕೊಂಡರೂ ಕೇಳಲಿಲ್ಲ. ಆಗತ್ತೆ ಬನ್ನಿ ಎಂದು ಧೈರ್ಯ ತುಂಬಿದ್ದ ಪರಿಣಾಮ ಇಂದು ಈ ಮಟ್ಟಿನ ಯಶಸ್ಸು ಸಿಕ್ಕಿದೆ ಎಂದಿದ್ದಾರೆ ನಟಿ ಮೋಕ್ಷಿತಾ ಪೈ.

46
ನೋವಿನ ಜೀವನ

ಅಂದಹಾಗೆ, ಮೋಕ್ಷಿತಾ ಪೈ ಅವರ ಜೀವನ ನೋವಿನಿಂದ ಕೂಡಿದೆ. ಮೋಕ್ಷಿತಾ ಪೈ ಅವರ ಸಹೋದರ ವಿಕಲಚೇತನ ಆಗಿದ್ದಾರೆ. 22 ವರ್ಷವಾಗಿದ್ದರೂ ಇಂದಿಗೂ ಅವರು 8 ವರ್ಷದ ಮಕ್ಕಳ ರೀತಿ ಇದ್ದರೆ, ಅವರ ಬುದ್ದಿ ಇನ್ನೂ 8 ತಿಂಗಳ ಮಗುವಿನ ಹಾಗೆ ಇದೆ. ಈ ಬಗ್ಗೆ ಬಿಗ್‌ ಬಾಸ್‌ ವೇದಿಕೆಯಲ್ಲೂ ಮೋಕ್ಷಿತಾ ಪೈ ಮಾತನಾಡಿದ್ದರು. ತಮ್ಮನ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುವ ಮೋಕ್ಷಿತಾ ಪೈ, ಬಿಗ್‌ ಬಾಸ್‌ ವೇದಿಕೆಯಲ್ಲೂ ಸುದೀಪ್‌ ಈ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಮ್ಮನಿಗೆ ನಾನು ಅಕ್ಕನೂ ಹೌದು, ಅಮ್ಮನೂ ಹೌದು. ಆತನ ಬಗ್ಗೆ ಹೆಚ್ಚು ಮಾತನಾಡೋದು ಇಷ್ಟವಿಲ್ಲ ಎಂದು ಹೇಳಿ ಸುಮ್ಮನಾಗಿದ್ದರು.

56
ಚಿಕ್ಕಂದಿನಿಂದಲೇ ಹೆಚ್ಚಿನ ಜವಾಬ್ದಾರಿ

'ನನ್ನ ಬಾಲ್ಯ ಎಲ್ಲರಿದ್ದ ಹಾಗೆ ಇದ್ದಿರಲೇ ಎಲ್ಲ. ಎಲ್ಲರ ಬಾಲ್ಯದಲ್ಲಿ, ತಮಾಷೆ, ತರಲೆಗಳು ಇರುತ್ತವೆ. ನನ್ನ ಬಾಲ್ಯದಲ್ಲಿ ಅಂಥ ಸಂಗತಿಗಳೇ ಇದ್ದಿರಲಿಲ್ಲ. ನನಗೆ ಬುದ್ಧಿಮಾಂದ್ಯನಾದ ಒಬ್ಬ ತಮ್ಮನಿದ್ದಾನೆ. ಆತನ ನೋಡಿಕೊಳ್ಳುವ ಕಾರಣದಿಂದಾಗಿ ಚಿಕ್ಕಂದಿನಿಂದಲೇ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಗಳಿದ್ದವು. ನಾನೇ ದೊಡ್ಡವಳಾಗಿದ್ದ ಕಾರಣಕ್ಕೆ ಆತನನ್ನೆ ನೋಡಿಕೊಳ್ಳಬೇಕಾಗುತ್ತಿತ್ತು. ಆತ ಒಂದು ಮಗು ಥರ ಇದ್ದಾನೆ' ಎಂದು ಈ ಹಿಂದೆ ನಟಿ ಹೇಳಿದ್ದರು.

66
8 ವರ್ಷದ ಬಾಲಕ

ಈಗಲೂ ಕೂಡ ಆತ ಒಂದು ಮಗು ಥರ. ಆತನಿಗೆ 19 ವರ್ಷವಾಗಿದ್ದರೂ, ಆತ ಇನ್ನೂ 8 ವರ್ಷದ ಮಗು ರೀತಿ ಇದ್ದಾನೆ. ಇನ್ನು ಆತನ ಬುದ್ದಿ 8 ತಿಂಗಳ ಮಗುವಿನ ರೀತಿ ಇದೆ. ಅವನನ್ನು ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಇದೇ ಕಾರಣಕ್ಕಾಗಿ ಬಾಲ್ಯದಲ್ಲಿ ಯಾವುದೇ ರೀತಿಯ ತರಲೆ, ತಮಾಷೆಗಳು ಮಾಡೋಕೆ ಸಾಧ್ಯವಾಗಲಿಲ್ಲ. ಮಾಡಿದ್ದರೂ ಅದರ ನೆನಪೂ ಇಲ್ಲ. ನನ್ನ ತಮ್ಮನನ್ನು ನೋಡಿಕೊಂಡು, ಅಮ್ಮನಿಗೆ ಸಹಾಯ ಮಾಡಿಕೊಂಡು ಬೆಳೆದಿದ್ದೆ ಎಂದು ಮೋಕ್ಷಿತಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories