ಗಂಡನ ಮೊಬೈಲ್‌ನಲ್ಲಿದ್ದ ಆ ಫೋಟೋ..ಮಗು ವಿಷ್ಯ..ಕಣ್ಣೀರಿನ ರಾತ್ರಿ: Jodi No 1 ಸೆಲೆಬ್ರಿಟಿ ದಾಂಪತ್ಯದಲ್ಲಿ ಸಮಸ್ಯೆ

Published : Jun 10, 2026, 01:01 PM IST

Zee Kannada Jodi No 1 Show: ಜೋಡಿ ನಂ 1 ಶೋನಲ್ಲಿ ಈ ವಾರ ದಂಪತಿಗಳು ತಮ್ಮ ನಡುವಿನ ಸಮಸ್ಯೆ ಏನು ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ನಿಜಕ್ಕೂ ಸಮಸ್ಯೆ ಏನು? ಆಮೇಲೆ ಏನು ಪರಿಹಾರ ಸಿಕ್ಕಿತು ಎಂದು ಕೂಡ ಅವರು ಹೇಳಿದ್ದಾರೆ. 

PREV
17
ಮಿಮಿಕ್ರಿ ಗೋಪಿಗೆ ಬೇಸರ ತಂದ ವಿಷಯ ಯಾವುದು?

“ನೀವು ಎರಡನೇ ಮದುವೆ ಆಗ್ತೀರಾ? ಎಂದು ಪತ್ನಿ ಪ್ರಶ್ನೆ ಕೇಳಿದಳು. ಆ ಮಾತು ಬೇಸರ ತಂದಿದೆ” ಎಂದು ಮಿಮಿಕ್ರಿ ಗೋಪಿ ಅವರು ಹೇಳಿದ್ದಾರೆ. ಮಗುವಿನ ವಿಚಾರಕ್ಕೆ ಈ ದಂಪತಿ ಬಹಳ ಸಮಸ್ಯೆಯನ್ನು ಎದುರಿಸಿತ್ತು. ಪದೇ ಪದೇ ಗರ್ಭಪಾತ ಸೇರಿದಂತೆ ಈ ದಂಪತಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಿದ್ದರ ಬಗ್ಗೆ ಹೇಳಿಕೊಂಡಿತ್ತು.

27
ಗೀತಾಭಾರತಿ ಭಟ್‌ಗೆ ಯಾಕೆ ಬೇಸರ?

“ದೂರ ತಳ್ಳಬಹುದು, ಎಷ್ಟೋ ಬಾರಿ ಅತ್ತಿಕೊಂಡು ಮಲಗಿದ್ದೇನೆ, ದಯವಿಟ್ಟು ಅತ್ತಿಕೊಂಡು ಮಲಗೋಕೆ ಬಿಡಬೇಡಿ” ಎಂದು ಗೀತಾಭಾರತಿ ಭಟ್‌ ಅವರು ಹೇಳಿದ್ದಾರೆ. ಗೀತಾಭಾರತಿ ಭಟ್‌ ಅವರು ಸಾರ್ವಜನಿಕರಿಂದ ಬಾಡಿ ಶೇಮಿಂಗ್‌ ಆಗುವ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ರಾಜಾರಾಮ್‌ ಭಟ್‌ ಎನ್ನುವವರನ್ನು ಮದುವೆಯಾಗಿದ್ದರು.

37
ನಟಿ ರಜನಿ

ಅಮೃತವರ್ಷಿಣಿ ಧಾರಾವಾಹಿ ನಟಿ ರಜನಿ ಅವರು “ಬಾಡಿಬಿಲ್ಡಿಂಗ್‌ ಮಾಡೋರಿಗೆ ಲೈಫ್‌ಟೈಮ್‌ ಕಡಿಮೆ ಎನ್ನುತ್ತಾರೆ. ಅದಕ್ಕೆ ಭಯ” ಎಂದು ಹೇಳಿದ್ದಾರೆ. ಆಗ ಅವರ ಪತಿ ಅರುಣ್‌ ಅವರು, “ಈ ಕ್ಷಣ ನಮ್ಮದು, ಎಂಜಾಯ್‌ ಮಾಡೋಣ” ಎಂದು ಹೇಳಿದ್ದಾರೆ.

ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ದೇವಸ್ಥಾನವೊಂದರಲ್ಲಿ ಬಹಳ ಸಿಂಪಲ್‌ ಆಗಿ ಮದುವೆ ಆಗಿ, ಎಲ್ಲರಿಗೂ ಮದುವೆ ಆಗಿದೆ. 

47
ನಟ ಅಭಿಲಾಷ್‌

ಲವ್‌ ಮಾಕ್ಟೇಲ್‌ ಸಿನಿಮಾ ಖ್ಯಾತಿಯ ನಟ ಅಭಿಲಾಷ್‌ ಅವರು ವಾರದಲ್ಲಿ ಮೂರು ದಿನ ಪಾರ್ಟಿ ಮಾಡ್ತಾರೆ, ಇದರಿಂದ ಆರೋಗ್ಯ ಏನಾಗಬೇಕು ಎಂದು ಪತ್ನಿ ಅಪೂರ್ವ ಅವರು ಬೇಸರ ಹೊರಹಾಕಿದ್ದಾರೆ.

57
ಕೋಟೆ ಪ್ರಭಾಕರ್‌ ಕುಟುಂಬದಲ್ಲಿ ಏನಾಗಿದೆ?

“ಫೋನ್‌ನಲ್ಲಿ ಒಂದು ಫೋಟೋ ನೋಡಿದೆ, ನನಗೆ ಅದು ಇಷ್ಟ ಆಗಲಿಲ್ಲ” ಎಂದು ನಟ ಕೋಟೆ ಪ್ರಭಾಕರ್‌ ಪತ್ನಿ ಹೇಳಿದ್ದಾರೆ. “ಆ ಫೋಟೋ ತೋರಿಸಿ ಒಂದು ಬಿಟ್ಟಳು. ಅವತ್ತೊಂದು ಕೆಟ್ಟ ನಿರ್ಧಾರ ತಗೊಂಡೆ ಅದೊಂದು ಇಷ್ಟ ಆಗಲಿಲ್ಲ” ಎಂದು ಕೋಟೆ ಪ್ರಭಾಕರ್‌ ಹೇಳಿದ್ದಾರೆ.

67
ಜಗಪ್ಪ ಹಾಗೂ ಸುಷ್ಮಿತಾ ಸಂಸಾರದಲ್ಲಿ ಏನಾಗಿದೆ?

“ನೀನು ಎಷ್ಟು ದುಡಿತಿದ್ದೀಯೋ ಅಷ್ಟೇ ನಾನು ದುಡಿಯುತ್ತಿದ್ದೇನೆ” ಎಂದು ಜಗಪ್ಪ ಹೇಳಿದ್ದಾರೆ. ಸುಷ್ಮಿತಾ ಅವರು “ಅಷ್ಟೇನಾ?” ಎಂದು ಹೇಳಿದ್ದಾರೆ. ಸುಷ್ಮಿತಾ ಹಾಗೂ ಜಗಪ್ಪ ಅವರು ಕನ್ನಡ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದು, ಧಾರಾವಾಹಿ-ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.

77
ಗಿಣಿರಾಮ ಧಾರಾವಾಹಿ ನಟಿ ಬಯಕೆ ಏನು?

ನನಗೆ ಮಗು ಬೇಕು ಎಂದಿದೆ, ಆದರೆ..ಎಂದು ಗಿಣಿರಾಮ ಧಾರಾವಾಹಿ ನಟಿ ನಯನಾ ನಾಗರಾಜ್‌ ಅವರು ಹೇಳಿದ್ದಾರೆ. ಆಗ ಸುಹಾಸ್‌ ಅವರು, “ಪ್ರೈವೇಟ್‌ ಆಗಿ ಮಾತನಾಡೋಣ, ನಿರ್ಧಾರಕ್ಕೆ ಬರೋಣ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories