ಒಂದೇ ಬಾರಿ ಗರ್ಭಿಣಿಯಾದ ಸೊಸೆ ಗುಂಡಮ್ಮ- ಅತ್ತೆ ಲೀಲಾ; ಜಿಮ್‌ ಸೀನ-ಮಾದಪ್ಪಗೆ ಶಾಕ್!

Published : Nov 16, 2026, 10:59 AM IST

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿಯಲ್ಲಿ ಮಾದಪ್ಪನ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಅತ್ತೆ ಲೀಲಾ ಹಾಗೂ ಸೊಸೆ ರಶ್ಮಿ ಇಬ್ಬರೂ ಒಂದೇ ಬಾರಿ ಗರ್ಭಿಣಿಯಾಗಿದ್ದು ಶಿವು ಸೇರಿದಂತೆ ಎಲ್ಲರಿಗೂ ಆಘಾತ ಹಾಗೂ ಅಚ್ಚರಿ ಮೂಡಿಸಿದೆ.

PREV
15
ಮಾದಪ್ಪನ ಮನೆಯಲ್ಲಿ ಡಬಲ್ ಸಂಭ್ರಮ

ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ನಲ್ಲಿ ವಿಶೇಷವಾದ ಘಟನೆಯೊಂದು ನಡೆದಿದೆ. ಹೌದು, ಮಾದಪ್ಪನ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಜಿಮ್ ಸೀನನ ಹೆಂಡ್ತಿ ಗುಂಡಮ್ಮ (ರಶ್ಮಿ), ಅತ್ತ ಮಾದಪ್ಪನ ಹೆಂಡ್ತಿ ಲೀಲಾ ಸಹ ಗರ್ಭಿಣಿಯಾಗಿದ್ದಾರೆ.

25
ಜಿಮ್ ಸೀನ್

ಜಿಮ್ ಸೀನ್ ಬದಲಾದಂತೆ ನಟಿಸುತ್ತಿದ್ದು, ಆಸ್ತಿಯೆಲ್ಲಾ ಸಿಕ್ಕರೆ ಪಿಂಕಿಯನ್ನು ಹೆಂಡ್ತಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಆದ್ರೆ ಪಿಂಕಿಯ ಮೋಸದಾಟ ಲೀಲಾ ಕಣ್ಮುಂದೆ ಬಂದಿದೆ. ಹಾಗಾಗಿ ರಶ್ಮಿಯನ್ನೇ ತನ್ನ ಸೊಸೆ ಎಂದು ಲೀಲಾ ಒಪ್ಪಿಕೊಂಡಿದ್ದಾಳೆ.

35
ಫಸ್ಟ್‌ನೈಟ್

ಈ ಹಿಂದೆ ರಶ್ಮಿ ಜೊತೆಗಿನ ಮಗನ ಫಸ್ಟ್‌ನೈಟ್ ಹಾಳಾಗ್ಲಿ ಎಂದು ಲೀಲಾ ಗಿಡಮೂಲಿಕೆಯ ಔಷಧಿಯನ್ನು ಮಗನ ಹಾಲಿಗೆ ಸೇರಿಸಿ ಕುಡಿಸಿದ್ದಳು. ಇದೇ ಗಿಡಮೂಲಿಕೆ ಔಷಧಿ ಮಾದಪ್ಪನ ಮಜ್ಜಿಗೆಗೆ ಸೇರಿತ್ತು. ಆದ್ರೂ ಈ ಔಷಧಿ ಕುಡಿದ ಬಳಿಕ ತಂದೆ-ಮಗ ಇಬ್ಬರೂ ರೊಮ್ಯಾಂಟಿಕ್ ಮೂಡ್‌ಗೆ ಬಂದಿದ್ದರು. ಇದೆಲ್ಲದರ ಪರಿಣಾಮ ರಶ್ಮಿ ಮತ್ತು ಲೀಲಾ ಗರ್ಭಿಣಿಯಾಗಿದ್ದಾರೆ.

45
ಶಿವು, ರಶ್ಮಿ ಸೇರಿದಂತೆ ಎಲ್ಲರೂ ಶಾಕ್

ರಶ್ಮಿ ಅನಾರೋಗ್ಯದ ವಿಷಯ ತಿಳಿದು ಮನೆಗೆ ಪಾರು ಜೊತೆ ಶಿವು ಓಡೋಡಿ ಬಂದಿದ್ದಾನೆ. ಈ ಸಂದರ್ಭದಲ್ಲಿ ಲೀಲಾ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ವೈದ್ಯರು ಇಬ್ಬರನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಅತ್ತೆ ಮತ್ತು ಸೊಸೆ ಒಂದೇ ಬಾರಿಗೆ ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿದ್ದಾರೆ. ಈ ವಿಷಯ ಕೇಳುತ್ತಿದ್ದಂತೆ ಶಿವು, ರಶ್ಮಿ ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ.

55
ಇದೆಂತ ಟ್ವಿಸ್ಟ್ ಯಪ್ಪಾ?

ಇಂದಿನ ಪ್ರೋಮೋ ನೋಡಿದ ಅಣ್ಣಯ್ಯ ಸೀರಿಯಲ್ ವೀಕ್ಷಕರು. ಮಾದಪ್ಪನ ಫ್ಯಾಮಿಲಿಗೆ ಇಬ್ಬರು ಅತಿಥಿಗಳು ಬರ್ತಿದ್ದಾರೆ. ಇದೆಂತ ಟ್ವಿಸ್ಟ್ ಯಪ್ಪಾ? ಮರಿ ಜಿಮ್ ಸೀನ, ಮರಿ ಮಿಲ್ಟ್ರಿ ಮ್ಯಾನ್ ಇಬ್ಬರಿಗೂ ವೆಲ್‌ಕಮ್. ಇಂದಿನ ಸಂಚಿಕೆ ಸಖತ್ ಆಗಿರುತ್ತೆ ಎಂದು ಕಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories