ಮುಕೇಶ್ ಅಂಬಾನಿ, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಸ್ಟಾರ್ ಸೆಲೆಬ್ರೆಟಿಗಳ ಮಕ್ಕಳಿಗೆ ಪಾಠ ಮಾಡಿದ ಟೀಚರ್ ಇದೀಗ ಕನ್ನಡ ದಾರವಾಹಿಯ ಫೇವರಿಟ್ ನಟಿಯಾಗಿ ಮಿಂಚುತ್ತಿದ್ದಾರೆ.
ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನ್ ಸ್ಕೂಲ್ನಲ್ಲಿ ಟೀಚರ್ ಆಗಿ ಸ್ಟಾರ್ ಸೆಲೆಬ್ರೆಟಿ ಮಕ್ಕಳಗೆ ಪಾಠ ಮಾಡುತ್ತಿದ್ದ ಮೈಸೂರಿನ ಪ್ರತಿಭೆ ಇದೀಗ ಕನ್ನಡ ಧಾರವಾಹಿಗಳ ಫೇವರಿಟ್ ನಟಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಮುಕೇಶ್ ಅಂಬಾನಿ, ಶಾರುಖ್ ಖಾನ್, ಸೈಫ್ ಆಲಿ ಖಾನ್, ಹೃತಿಕ್ ರೋಶನ್ ಸೇರಿದಂತೆ ಸ್ಟಾರ್ ಸೆಲೆಬ್ರೆಟಿಗಳ ಮಕ್ಕಳಿಗೆ ಪಾಠ ಮಾಡುತ್ತಿದ್ದ ಟೀಚರ್ ತಮ್ಮ ಲಕ್ಷ ಲಕ್ಷ ರೂಪಾಯಿ ಸ್ಯಾಲರಿ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮಿಷ್ಟದಂತೆ ನಟಿಯಾಗಿ ಮಿಂಚುತ್ತಿದ್ದಾರೆ. ಈ ಪ್ರತಿಭಾನ್ವಿತ ನಟಿ ಬೇರೆ ಯಾರು ಅಲ್ಲ ಅಕ್ಷತಾ ಗಣೇಶ್.
26
ಸಿಲ್ಲಿ ಲಲ್ಲಿ 2 ಖ್ಯಾತಿಯ ಲಲಿತಾಂಬ
ಸಿಲ್ಲಿ ಲಲ್ಲಿ 2 ಆವೃತ್ತಿಯ ಲಲಿತಾಂಬ ಖ್ಯಾತಿಯ ಅಕ್ಷತಾ ಗಣೇಶ್ ಸದ್ಯ ಕನ್ನಡ ದಾರವಾಹಿಯಲ್ಲಿ ನಿರಂತವಾಗಿ ಸಾಗುತ್ತಿದೆ. ಮೈಸೂರಿನ ಅಕ್ಷತಾ ಗಣೇಶ್ ಮುಂಬೈನಲ್ಲಿರುವ ಧೀರೂಬಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ನ ಇಂಗ್ಲೀಷ್ ಟೀಚರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಕ್ಷತಾ ಪಾಠ ಮಾಡುವ ರೀತಿ, ವಿದ್ಯಾರ್ಥಿಗಳಿಗೆ ಅರ್ಥೈಸುವ ರೀತಿ, ವಿದ್ಯಾರ್ಥಿಗಳ ಇಂಗ್ಲೀಷ್ ಸಂವಹನ ಎಲ್ಲರನ್ನು ಮೋಡಿ ಮಾಡಿದೆ. ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಅಕ್ಷತಾಗೆ ನಟಿಯಾಗಬೇಕೆಂಬ ಕನಸು.
36
ಪೇರೆಂಟ್ಸ್ ಮೀಟಿಂಗ್ನಲ್ಲಿ ಟೀಚರ್ ಜೊತೆ ಸ್ಟಾರ್ ಸೆಲೆಬ್ರೆಟಿಗಳ ಚರ್ಚೆ
ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟ್ ದಿಗ್ಗಜರು, ಉದ್ಯಮಿಗಳ ಮಕ್ಕಳು ಧೀರೂಬಾಯಿ ಅಂಬಾನಿ ಶಾಲೆಯಲ್ಲೇ ಕಲಿಯುತ್ತಾರೆ. ಇದು ದೇಶದ ಪ್ರತಿಷ್ಠಿತ ಸ್ಕೂಲ್. ಈ ಶಾಲೆಯಲ್ಲಿ ಸ್ಟಾರ್ ಸೆಲೆಬ್ರೆಟಿಗಳ ಮಕ್ಕಳಿಗೆ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ವಿಶೇಷ ಅಂದರೆ ಅಂಬಾನಿಯ ಮನೆಗೆ ತೆರಳಿ ಅನಂತ್ ಅಂಬಾನಿಗೆ ಪಾಠ ಮಾಡಿದ ದಿನಗಳೂ ಇವೆ. ಪೇರೆಂಟ್ಸ್ ಮೀಟಿಂಗ್ ಸಂದರ್ಭದಲ್ಲಿ ಈ ಖ್ಯಾತ ಸೆಲೆಬ್ರೆಟಿಗಳು ಅಕ್ಷತಾ ಗಣೇಶ್ ಭೇಟಿಯಾಗಿ ತಮ್ಮ ಮಕ್ಕಳ ಪ್ರೊಗ್ರೆಸ್ಸೀವ್ ರಿಪೋರ್ಟ್, ವಿದ್ಯಾಭ್ಯಾಸದ ಕುರಿತು ಚರ್ಚಿಸುತ್ತಿದ್ದರು.
ಟೀಚರ್ ವೃತ್ತಿಯಲ್ಲಿದ್ದರೂ ನಟಿಯಾಗಬೆಕೆಂಬ ಕನಸು. ಹೀಗಾಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಸ್ಕೂಲ್ಗೆ ಸೇರಿ ನಟನೆ ಕಲಿತುಕೊಂಡರು. ನಟ ಅನುಪಮ್ ಖೇರ್ ಗರಡಿಯಲ್ಲಿ ತರಬೇತಿ ಪಡೆದಿದ್ದಾರೆ. ಬಾಲಿವುಡ್ ನಟ ಇರ್ಫಾನ್ ಖಾನ್ ಜೊ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಕ್ಷತಾ, ಬಾಲಿವುಡ್ನ ಹೇಟ್ ಸ್ಟೋರಿ ಸೀರಿಸ್, ರಾಝ್ 3 ಸೇರಿ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ.
56
ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ
ಸಿಲ್ಲಿ ಲಲ್ಲಿ ಮೂಲಕ ಕನ್ನಡ ಕಿರುತರೆಗೆ ಎಂಟ್ರಿಕೊಟ್ಟ ಅಕ್ಷತಾ ಗಣೇಶ್, ಲಲಿತಾಂಬ ಪಾತ್ರದ ಮೂಲಕ ಜನರಿಗೆ ಹತ್ತಿರವಾದರು. ಅಂತರಪಟ, ಶ್ರಾವಣಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಆಗ್ನಿಸಾಕ್ಷಿ ಸೇರಿದಂತೆ ಹಲವು ದಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
66
ಸ್ಟಾರ್ ನಟಿಯಾದ ಅಕ್ಷತಾ ಗಣೇಶ್
ನಿಶಾಂತ್ ನಾಗಾವರ್ ವಿವಾಹವಾಗಿರುವ ಅಕ್ಷತಾ ಗಣೇಶ್ಗೆ ಅನ್ಯವ್ ನಾಗಾವರ್ ಪುತ್ರನಿದ್ದಾನೆ. ಭಾರತದ ಪ್ರಮುಖ ಅಂಬಾನಿ ಸ್ಕೂಲ್ನಲ್ಲಿ ಟೀಚರ್ ಆಗಿ ಸ್ಟಾರ್ ಸೆಲೆಬ್ರೆಟಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಅಕ್ಷತಾ ಗಣೇಶ್ ಅಂದುಕೊಂಡಿದ್ದು ಸಾಧಿಸಿದ ಛಲಗಾತಿ. ಮುಂಬೈನಲ್ಲಿ ನೆಲೆಸಿದ್ದ ಅಕ್ಷತಾ ಇದೀಗ ತವರಿಗೆ ಮರಳಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.