ಸತ್ತು ಹೋದನೆಂದು ಭಾವಿಸಲಾಗಿದ್ದ ಜೈದೇವ್ ಮರಳಿ ಬಂದು ತಾಯಿ ಶಕುಂತಲಾಳನ್ನು ಭೇಟಿಯಾಗಿದ್ದಾನೆ. ಜೈದೇವ್ ಬದುಕಿ ಬಂದಿದ್ದರಿಂದ ಭೂಮಿಕಾ, ಜೀವಾ ಮತ್ತು ಮಲ್ಲಿ ಜೈಲು ಸೇರುವುದು ತಪ್ಪಿದೆ. ಕಾಡಿನಲ್ಲಿ ಸಿಸಿಟಿವಿ ಇಟ್ಟವರು ಯಾರು ಮತ್ತು ಧಾರಾವಾಹಿಯ ಮುಂದಿನ ಕಥೆ ಏನು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಸತ್ತು ಹೋದ ಅಂತ ಅನ್ಕೊಂಡಿದ್ದ ಜೈದೇವ್ ಮರಳಿ ಬಂದಿದ್ದಾನೆ. ತಾಯಿ ಶಕುಂತಲಾಳನ್ನು ಭೇಟಿಯಾಗಿ ತನ್ನ ವಿರುದ್ಧ ಭೂಮಿಕಾ, ಜೀವಾ ಮತ್ತು ಮಲ್ಲಿ ರಚಿಸಿದ್ದ ಷಡ್ಯಂತ್ರದ ವಿಷಯ ಹೇಳಿದ್ದಾನೆ. ಯಾರಿಗೂ ತಿಳಿಯದಂತೆ ಮನೆಯೊಳಗೆ ಎಂಟ್ರಿ ಕೊಟ್ಟ ಜೈದೇವ್‌ಗೆ ಭೂಮಿಕಾಳ ದರ್ಶನವಾಗಿದೆ.
25
ಎಚ್ಚರಿಕೆ ನೀಡಿದ ಭೂಮಿಕಾ
ಎಂದಿನಂತೆ ಜೈದೇವ್ ವಿರುದ್ಧ ಸೋತಿರುವ ಭೂಮಿಕಾ, ಅಬ್ಬರದ ಮಾತುಗಳನ್ನಾಡಿದ್ದಾಳೆ. ಆದ್ರೆ ಭೂಮಿಕಾಳ ಮಾತಿಗೆ ಜೈದೇವ್, ಡೋಂಟ್ ಕೇರ್ ಅಂದಿದ್ದಾನೆ. ಜೈದೇವ್ ಮುಂದೆ ಶಿಶುಪಾಲನ ಕತೆ ಹೇಳಿರುವ ಭೂಮಿಕಾ ಕೆಡಿಗೆ ಅಂತ್ಯದ ಎಚ್ಚರಿಕೆಯನ್ನು ನೀಡಿದ್ದಾಳೆ.
35
ಕ್ಯಾಮೆರಾ ಇಟ್ಟಿದ್ಯಾರು?
ಹೆಣ ಹೂತಿದ್ದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯನ್ನು ಗಮನಿಸಿದಾಗ ಜೈದೇವ್ ಬದುಕಿರೋದು ಗೊತ್ತಾಗಿದೆ. ಸಮಾಧಿಯಿಂದ ಎದ್ದು ಬಂದಿರುವ ಜೈದೇವ್, ಗುಂಡಿಯನ್ನು ಮುಚ್ಚಿ ಎಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸೀರಿಯಲ್‌ನಲ್ಲಿ ಈ ದೃಶ್ಯಗಳನ್ನು ನೋಡಿದ ವೀಕ್ಷಕರು, ಈ ಕಾಡಿನಲ್ಲಿ ಕ್ಯಾಮೆರಾ ಇಟ್ಟಿದ್ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಜೈದೇವ್ ಸತ್ತಿದ್ದಾನೆ ಎಂದು ತಿಳಿದು ಭೂಮಿಕಾ ಜೈಲು ಸೇರಲು ಮಾನಸಿಕವಾಗಿ ಸಿದ್ಧಳಾಗಿದ್ದಳು. ಮತ್ತೊಂದೆಡೆ ಮಧುರಾ ಮತ್ತು ಜೀವನಿಗೂ ಬಂಧನದ ಭೀತಿ ಎದುರಾಗಿತ್ತು. ಇನ್ನು ಮಲ್ಲಿಯಂತಲೂ ಮೂವರನ್ನು ಕಾಪಾಡೋದು ಹೇಗೆ ಅಂತ ವಿಲವಿಲ ಒದ್ದಾಡುತ್ತಿದ್ದಳು. ಜೈದೇವ್ ಬದುಕಿ ಬಂದಿರೋದರಿಂದ ಈ ನಾಲ್ಕು ಜನರ ಸಮಸ್ಯೆಗಳು ದೂರ ಆಗಿವೆ. ಹಾಗಾಗಿ ಜೈದೇವ್ ಗೆ ಇವರೆಲ್ಲರೂ ಥ್ಯಾಂಕ್ ಯು ಹೇಳಬೇಕಿತ್ತು.
55
ಸೀರಿಯಲ್ ಕಥೆ ಮುಂದೇನು?
ಸದ್ಯ ಜೈದೇವ್ ಹಿಂದಿರುಗಿ ಬಂದಿರೋದರಿಂದ ಸೀರಿಯಲ್ ಕತೆ ಮುಂದೆ ಹೇಗೆ ಮುಂದುವರಿಯುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಒಂದು ವೇಳೆ ಜೈದೇವ್ ಪಾತ್ರ ಅಂತ್ಯವಾದ್ರೆ ಸೀರಿಯಲ್ ಮುಗಿಯೋದು ಗ್ಯಾರಂಟಿ ಅನ್ನೋ ವಿಷಯ ತಿಳಿದಿದ್ದರಿಂದಲೇ ನಿರ್ದೇಶಕರು ಮತ್ತು ನಿರ್ಮಾಪಕರು ಕೆಡಿಗೆ ಪದೇ ಪದೇ ಮರುಜನ್ಮ ನೀಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.