ನೈಟಿ ಕಂಡ್ರೆ ಸೀರಿಯಲ್​ ನಟಿಯರಿಗೆ ಕೋಪವೇಕೆ? ಧಾರಾವಾಹಿಗಳಲ್ಲಿ ಹಾಕಲ್ಲವೇಕೆ? ತೆರೆ ಹಿಂದಿನ ಅಸಲಿ ಕಥೆ ಇಲ್ಲಿದೆ

Published : Sep 15, 2026, 09:19 PM IST

ಕನ್ನಡ ಧಾರಾವಾಹಿಗಳಲ್ಲಿ ಸ್ತ್ರೀ ಪಾತ್ರಗಳು ಸದಾ ರೇಷ್ಮೆ ಸೀರೆಗಳಲ್ಲಿ ಕಾಣಿಸಿಕೊಂಡರೂ, ಮಹಿಳೆಯರ ಅಚ್ಚುಮೆಚ್ಚಿನ ನೈಟಿಯನ್ನು ಯಾಕೆ ಧರಿಸುವುದಿಲ್ಲ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ. ಹೆಚ್ಚಿನ ಸೀರಿಯಲ್‌ಗಳು ಉತ್ತರ ಭಾರತದ ಧಾರಾವಾಹಿ ಆಧರಿಸಿರುವುದರಿಂದ, ಅಲ್ಲಿನ ಪಾತ್ರಗಳ ವೇಷಭೂಷಣ ಅನುಸರಿಸಲಾಗುತ್ತದೆ

PREV
16
ಮೈಮನ ಆವರಿಸಿರುವ ಧಾರಾವಾಹಿಗಳು

ಇಂದು ಸೀರಿಯಲ್​ಗಳು ಹಲವು ಮನೆಗಳ ಮನಗಳನ್ನು ಆವರಿಸಿಬಿಟ್ಟಿದೆ. ಇದೇ ಕಾರಣಕ್ಕೆ ಸಂಜೆಯಷ್ಟೇ ಪ್ರಸಾರವಾಗುತ್ತಿದ್ದ ಸೀರಿಯಲ್​ಗಳು ಮಧ್ಯಾಹ್ನವೂ ಪ್ರಸಾರ ಆಗುತ್ತಾ ದಶಕಗಳೇ ಕಳೆದಿವೆ. ಅಚ್ಚರಿಯೆಂದರೆ, ಮಧ್ಯಾಹ್ನದ ಡಬ್ಬಿಂಗ್ ಸೀರಿಯಲ್​ಗಳನ್ನೂ ಅಷ್ಟೇ ಕುತೂಹಲದಿಂದ ನೋಡುವ ದೊಡ್ಡ ಸ್ತ್ರೀವರ್ಗವೇ ಇದೆ.

26
ಸ್ತ್ರೀ ಪ್ರಧಾನ

ಅದೇ ರೀತಿ, ಸೀರಿಯಲ್​ಗಳಲ್ಲಿ ಸಾಮಾನ್ಯವಾಗಿ ಇರುವ ಪಾತ್ರಗಳು ಅವವೇ ಆಗಿರುತ್ತವೆ. ನಾಯಕ, ನಾಯಕಿ, ಅಲ್ಲೊಬ್ಬಳು ಲೇಡಿ ಅತ್ತಿಗೆನೋ, ನಾದಿನಿನೋ ವಿಲನ್​.... ಹೀಗೆ ಸ್ತ್ರೀ ಪಾತ್ರಗಳೇ ತುಂಬಿ ಹೋಗುತ್ತವೆ. ಇದಕ್ಕೆ ಕಾರಣ ಸ್ತ್ರೀಯರು ಹೆಚ್ಚಾಗಿ ಸೀರಿಯಲ್​ಗಳನ್ನು ಮೈಮೇಲೆ ಆಹ್ವಾನಿಸಿಕೊಂಡು ನೋಡುವ ಕಾರಣದಿಂದಾಗಿ.

36
ರೇಷ್ಮೆ ಸೀರೆ ಅಬ್ಬರ

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಶ್ರೀಮಂತರ ಮನೆ ಎಂದರೆ,, ಅವರು ಮಲಗುವಾಗ, ಅಡುಗೆ ಮಾಡುವಾಗನಿಂದ ಹಿಡಿದು ದಿನಪೂರ್ತಿ ರೇಷ್ಮೆ ಸೀರೆಗಳನ್ನು ಉಟ್ಟುಕೊಂಡು ಸಾಕಷ್ಟು ಬಾರಿ ಟ್ರೋಲ್​ ಆಗುವುದೂ ಇದೆ. ಅದೇನೇ ಇದ್ದರೂ ಸೀರಿಯಲ್​ಗಳ ಸ್ತ್ರೀಪಾತ್ರ ಎಂದರೆ, ಅದರಲ್ಲಿಯೂ ವಿವಾಹಿತೆಯರು ಎಂದಾಕ್ಷಣ, ಸೀರೆ ಬಹಳ ಮಹತ್ವ ಪಡೆದುಕೊಳ್ಳುತ್ತದೆ.

46
ಸೀರಿಯಲ್​ಗಳಲ್ಲಿ ನೈಟಿ ಕಾಣಲ್ಲ ಯಾಕೆ?

ಬೆರಳೆಣಿಕೆ ಹಾಸ್ಯದ ಸೀರಿಯಲ್​ಗಳಲ್ಲಿ ಬಿಟ್ಟರೆ, ಉಳಿದ ಯಾವುದೇ ಸೀರಿಯಲ್​ಗಳಲ್ಲಿ ತಾರೆಯರು ಹಲವು ಸ್ತ್ರೀಯರ ಫೆವರೆಟ್​ ಆಗಿರೋ ನೈಟಿ ಮಾತ್ರ ಹಾಕೋದೆ ಇಲ್ಲ ಎನ್ನೋದನ್ನು ಗಮನಿಸಿರುವಿರಾ? ಸೀರಿಯಲ್​ಗಳಲ್ಲಿ ಬರುವ ಸೀರೆಗಳ ಮೇಲೆ ಮಹಿಳಾ ವೀಕ್ಷಕರ ಕಣ್ಣು ನೆಡುವುದು ನಿಜವಾದರೂ, ನೈಟಿ ಮಾತ್ರ ಅವರು ಹಾಕೋದೇ ಇಲ್ಲ!

56
ನೈಟಿ ಫೆವರೆಟ್​

ಅಷ್ಟಕ್ಕೂ ಇಂದು ನೈಟಿ ಎನ್ನೋದು ಎಲ್ಲಾ ವಯಸ್ಸಿನ ಹೆಚ್ಚಿನ ಮಹಿಳೆಯರಿಗೂ ಫೆವರೆಟ್​. ಮನೆಯಲ್ಲಿ ಕಂಫರ್ಟ್​ ಆಗಿರಲಿ ಎನ್ನುವ ಕಾರಣಕ್ಕೆ ನೈಟಿ ಹಾಕಿಕೊಳ್ಳುವ ಕಾಲ ಈಗಿಲ್ಲ. ಅದನ್ನು ಹಾಕಿಕೊಂಡು ಎಲ್ಲಿ ಬೇಕಾದರೂ ಹೋಗುತ್ತಾರೆ. ಇಷ್ಟು ಫೇಮಸ್​ ಆಗಿದ್ದರೂ ಸೀರಿಯಲ್​ಗಳಲ್ಲಿ ಇದು ಕಾಣಿಸಲ್ಲ ಯಾಕೆ ಎನ್ನೋದು ಮಾತ್ರ ಪ್ರಶ್ನೆಯಾಗಿದೆ.

66
ನೈಟಿ ಹಾಕದ ಕಾರಣ ಇಲ್ಲಿದೆ

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಕನ್ನಡ ಸೇರಿದಂತೆ ದಕ್ಷಿಣದ ಬಹುತೇಕ ಸೀರಿಯಲ್​​ಗಳು ಉತ್ತರ ಭಾರತದ ಸೀರಿಯಲ್​ಗಳನ್ನು ಕಾಪಿ ಮಾಡುವುದು ಇದೆ. ರಿಯಾಲಿಟಿ ಷೋ ಸೇರಿದಂತೆ ಎಲ್ಲವೂ ಅಲ್ಲಿಯದ್ದೇ ಬಳುವಳಿ. ಅಲ್ಲಿರುವ ಪಾತ್ರಗಳೇ ಇಲ್ಲಿಯೂ ಇರುತ್ತದೆ. ಅದೇ ರೀತಿಯ ಕ್ಯಾರೆಕ್ಟರ್​ಗಳನ್ನೇ ಇಲ್ಲಿಯೂ ಹಾಕಲಾಗುತ್ತದೆ. ಅದರಲ್ಲಿಯೂ ಹಿಂದಿ ಸೀರಿಯಲ್​ಗಳು ಜನಪ್ರಿಯತೆ ಪಡೆಯುತ್ತಿದ್ದಂತೆಯೇ ಅದನ್ನೇ ಕಾಪಿಮಾಡಿ, ಅದನ್ನು ಇಲ್ಲಿಯೂ ರೀಮೇಕೋ ಅಥವಾ ಇನ್ನೇನೋ ಮಾಡುವ ಕಾರಣದಿಂದಾಗಿಯೇ ಅಲ್ಲಿ ಇರದ ನೈಟಿ ಇಲ್ಲಿ ಇಲ್ಲ, ಅಷ್ಟೇ. ಅದರಲ್ಲಿ ಹೊಸ ವಿಷಯವೇನೂ ಇಲ್ಲ ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories