Amruthadhaare Serial ರಣರೋಚಕ ಟ್ವಿಸ್ಟ್​: ಸಿಸಿಟಿವಿಯಲ್ಲಿ ಕಂಡುಬಂದ ಜೈದೇವ ಸಮಾಧಿಯ ಭಯಾನಕ ದೃಶ್ಯ

Published : Sep 16, 2026, 12:06 PM IST

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನ ಸಾವಿನ ನಂತರ ಆತನ ಶವವನ್ನು ಹೂತುಹಾಕಲಾಗಿತ್ತು. ಆದರೆ ಸಮಾಧಿಯಿಂದ ಶವ ನಾಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಆತನ ಕೈ ಹೊರಬಂದಿರುವುದು ಸೆರೆಯಾಗಿದೆ. ಜೈದೇವನನ್ನು ಅಲ್ಲಿಂದ ಯಾರು ಕರೆದೊಯ್ದರು ಎಂಬ ರಹಸ್ಯ ಇನ್ನಷ್ಟೇ ಬಯಲಾಗಬೇಕಿದೆ.

PREV
16
ಸಮಾಧಿಯ ಸಿಸಿಟಿವಿ ದೃಶ್ಯ

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಈಗ ರಣಭಯಂಕರ ಟ್ವಿಸ್ಟ್​ ಸಿಕ್ಕಿದೆ. ಜೈದೇವನ ಸಮಾಧಿಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೀರಿಯಲ್​ ಇನ್ನಷ್ಟು ರೋಚಕತೆಯಿಂದ ಕೂಡಿ ಬರುವ ನಿರೀಕ್ಷೆ ಇದೆ.

26
ಸಾವನ್ನಪ್ಪಿದ ಜೈದೇವ

ಮಿಂಚುವನ್ನು ಕಿಡ್​ನ್ಯಾಪ್​ ಮಾಡಿದ್ದ ಜೈದೇವನಿಂದ ಮಿಂಚುವನ್ನು ಕಾಪಾಡುವ ಸಲುವಾಗಿ ಜೀವ ಆತನಿಗೆ ಹೊಡೆದ ಪರಿಣಾವಾಗಿ ಜೈದೇವ ಸಾವನ್ನಪ್ಪಿದ್ದ.

36
ಜೈದೇವನ ಸಮಾಧಿ

ಆತ ಸತ್ತಿರುವುದಾಗಿ ಮಧುರಾ ಹೇಳಿದ ಹಿನ್ನೆಲೆಯಲ್ಲಿ, ಎಲ್ಲರೂ ಸೇರಿ ಆತನ ಶವವನ್ನು ಹೊಂಡದಲ್ಲಿ ಹೂತು ಹಾಕಿ ಮಣ್ಣು ಹಾಕಿ ಮುಚ್ಚಿದ್ದರು.

46
ಮಾಯವಾದ ಶವ

ಆದರೆ, ಪೊಲೀಸರಿಗೆ ಶರಣಾಗಲು ಬಯಸಿದ್ದ ಭೂಮಿಕಾ, ಶವವನ್ನು ತೆಗೆಯಲು ಹೋದಾಗ ಅಲ್ಲಿ ಶವ ಇರಲಿಲ್ಲ. ಕೊನೆಗೆ ಎಲ್ಲಾ ವಿಷಯವನ್ನೂ ಮಲ್ಲಿಗೆ ತಿಳಿಸಿದಳು ಭೂಮಿಕಾ.

56
ಸಿಸಿಟಿವಿ ಫುಟೇಜ್​

ಆ ಜಾಗದ ಸಿಸಿಟಿವಿ ಫುಟೇಜ್​ ಪರಿಶೀಲಿಸಿದ ಮಲ್ಲಿಗೆ ಶಾಕ್​ ಕಾದಿತ್ತು. ಅಲ್ಲಿ ಜೈದೇವನ ಸಮಾಧಿಯಿಂದ ಶವ ತೆಗೆದದ್ದು ಯಾರು ಎನ್ನುವ ಬಗ್ಗೆ ನೋಡುವಾಗ, ಜೈದೇವನ ಕೈ ಮೇಲೆ ಬಂದು ಕಾಪಾಡುವಂತೆ ಸನ್ನೆ ಮಾಡಿರುವುದು ಕಾಣಿಸಿತು.

66
ಜೈದೇವನನ್ನು ತೆಗೆದುಕೊಂಡು ಹೋಗಿದ್ದು ಯಾರು

ಆದರೆ, ಜೈದೇವನನ್ನು ಅಲ್ಲಿಂದ ಹೊತ್ತುಕೊಂಡು ಹೋಗಿದ್ದು ಯಾರು ಎನ್ನುವ ಪ್ರಶ್ನೆ ಸದ್ಯಕ್ಕಿದೆ. ಅದರ ಪ್ರೊಮೋ ಇನ್ನೂ ಬಿಡುಗಡೆಯಾಗಲಿಲ್ಲ. ಜೈದೇವನನ್ನು ತೆಗೆದುಕೊಂಡು ಹೋಗಿದ್ದು ಯಾರು ಎಂದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories