ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್

Published : May 05, 2026, 01:11 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಪಾತ್ರವು ಬೀದಿಗೆ ಬಂದು ತಿರುಕನಂತಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇತ್ತ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾನೆ.

PREV
15
ಅಮೃತಧಾರೆ ಸೀರಿಯಲ್

ಅಮೃತಧಾರೆ ಸೀರಿಯಲ್ ಕೊನೆಯ ಹಂತದಲ್ಲಿದೆ ಎಂದು ಹೇಳಲಾಗುತ್ತಿದ್ದು, ವೀಕ್ಷಕರು ಮುಂದೆ ಕಥೆ ವಿಸ್ತರಣೆ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಸೀರಿಯಲ್‌ನಲ್ಲಿರೋ ವಿಲನ್‌ಗಳೆಲ್ಲಾ ಒಳ್ಳೆಯವರು ಆಗ್ತಿದ್ದಾರೆ. ಬಾಕಿ ಉಳಿದಿರೋದು ಮಾತ್ರ ಕೆಡಿ ಜೈದೇವ್ ಮಾತ್ರ.

25
ಜೈದೇವ್ ಪಾತ್ರ

ಆರಂಭದಿಂದಲೂ ಜೈದೇವ್ ಪಾತ್ರವನ್ನು ತುಂಬಾನೇ ಸ್ಟೈಲಿಶ್ ಆಗಿ ತೋರಿಸಿಕೊಂಡು ಬರಲಾಗಿತ್ತು. ಗೌತಮ್ ಮತ್ತು ಭೂಮಿಕಾ ಮುಂದೇ ಪದೇ ಪದೇ ಸೋತ್ರೂ ಜೈದೇವ್ ಸ್ವ್ಯಾಗ್ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ರೆ ಇದೀಗ ಜೈದೇವ್‌ ಪಾತ್ರವನ್ನು ತಿರುಕನಂತೆ ತೋರಿಸಲಾಗ್ತಿದೆ. ಇದಕ್ಕೆ ಜೈದೇವ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೈದೇವವ್ ನಟನೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

35
ಮುಂದೇನು ಮಾಡ್ತಾನೆ?

ತನ್ನ ಪಾಪಕೃತ್ಯಗಳಿಂದ ಬೀದಿಗೆ ಬಂದಿರೋ ಜೈದೇವ್, ಸದ್ಯ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ಬಂದಿದ್ದಾನೆ. ಕೈಯಲ್ಲಿ ಬಿಡಿಗಾಸು ಇಲ್ಲದಿದ್ರೂ ಜೈದೇವ್‌ಗೆ ಫಾಸ್ಟ್‌ಫುಡ್ ತಿನ್ನೋ ಆಸೆ. ಆದ್ರೆ ಮುಂಗಡ ಹಣ ನೀಡದ ಕಾರಣ ಜೈದೇವ್‌ಗೆ ಇಷ್ಟದ ಆಹಾರ ಸಿಕ್ಕಿಲ್ಲ. ಇದೀಗ ರಸ್ತೆ ಬದಿಯಲ್ಲಿರುವ ಅಂಗಡಿಗೆ ಬಂದು ಊಟ ಮಾಡಿದ್ದಾನೆ. ಆದ್ರೆ ಈ ಊಟದ ಹಣ ನೀಡಲು ಜೈದೇವ್ ಬಳಿ ಒಂದು ರೂಪಾಯಿಯೂ ಇಲ್ಲ. ಮುಂದೇನು ಮಾಡ್ತಾನೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

45
ಬೀಡಿ ಸೇದಿದ ಜೈದೇವ್

ರಾಜನಂತಿದ್ದ ಜೈದೇವ್‌, ತಿರುಕುನಾಗಿರುವ ಪ್ರೋಮೋವನ್ನು ಇಂದು ಬಿಡುಗಡೆ ಮಾಡಲಾಗಿದೆ. ಅಂಗಡಿಯೊಂದರ ಮುಂದೆ ಮಲಗಿದ್ದ ಜೈದೇವ್ ಧರಿಸಿದ್ದ ವಾಚ್, ಉಂಗುರಗಳನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ. ಇತ್ತ ಬೇಬಿ ದಿಯಾ ಮನೆ ಮುಂದಿರೋ ಸೆಕ್ಯುರಿಟಿ ಬಳಿ ಬೀಡಿ ಪಡೆದು ಸೇದಿ ತನ್ನ ಚಟ ತೀರಿಸಿಕೊಂಡಿದ್ದಾರೆ. ಕಾಲಲ್ಲಿ ಚಪ್ಪಲಿ ಇಲ್ಲದೇ ಜೈದೇವ್ ಓಡಾಡುತ್ತಿದ್ದಾನೆ.

55
ಗೌತಮ್ ಬೇಸರ

ಈ ಎಲ್ಲಾ ಬೆಳವಣಿಗೆ ನಡುವೆ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆತನದ ಮನೆಗೆ ಹಿಂದಿರುಗುತ್ತಿದ್ದು, ಇದಕ್ಕಾಗಿ ಪೂಜೆ ಸಹ ಏರ್ಪಾಟು ಮಾಡಿದ್ದಾನೆ. ತಾಯಿ ಶಕುಂತಲಾಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತೇನೆ ಎಂಬ ಪಾರ್ಥ ಮತ್ತು ಮಹಿಮಾ ಮಾತಿಗೆ ಗೌತಮ್ ಬೇಸರ ವ್ಯಕ್ತಪಡಿಸಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories