Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌

Published : May 04, 2026, 04:00 PM IST

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್‌ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್‌ ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್‌ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ. 

PREV
14
ಎಸ್ಕೇಪ್‌ ಆದ ದಿಯಾ

ಹೆಣ್ಣಿನ ಕಣ್ಣೀರಿಗೆ ಕಾರಣವಾದವರು ಉಳಿದ ಚರಿತ್ರೆಯೇ ಇಲ್ಲ. ಕಟ್ಟಿಕೊಂಡ ಹೆಂಡ್ತಿ ಮಲ್ಲಿಗೆ ಮೋಸ ಮಾಡಿ ಜಯದೇವ್‌, ಇನ್ನೊಂದು ಮದುವೆ ಆದನು. ಯಾರು ಎಷ್ಟೇ ಹೇಳಿದರೂ ಕೂಡ ಅವನು ಕೇಳದೆ, ದಿಯಾಳನ್ನು ಮದುವೆ ಆದನು. ತನ್ನ ಕುತಂತ್ರದಿಂದ ಬಹುತೇಕ ಆಸ್ತಿಯನ್ನು ಜಯದೇವ್‌ ಕಳೆದುಕೊಂಡಿದ್ದನು. ಒಂದಿಷ್ಟು ಆಸ್ತಿ, ಹಣ, ಬಂಗಾರ ಎಲ್ಲ ಮನೆಯಲ್ಲಿತ್ತು. ಆ ಹಣವನ್ನು ದಿಯಾ ತಗೊಂಡು ಹೋಗಿದ್ದಾಳೆ.

24
ದಿವಾನ್‌ ಸಾಮ್ರಾಜ್ಯ ಮರಳಿ ಪಡೆದ ಗೌತಮ್‌

ಅರಸನಕೋಟೆ ಅಖಿಲಾಂಡೇಶ್ವರಿ ಸಹಾಯ ಪಡೆದು ಗೌತಮ್ ದಿವಾನ್‌, ಹರಾಜಿಗೆ ಬಂದ ದಿವಾನ್‌ ಮನೆ, ಕಂಪೆನಿಯೆಲ್ಲವನ್ನು ಮರಳಿ ಪಡೆದಿದ್ದಾನೆ. ಈಗ ಅವನು ಹೊಸ ಮನೆಗೆ ಕಾಲಿಡಬೇಕು. ಅದೇ ಟೈಮ್‌ನಲ್ಲಿ ಇನ್ನೊಂದು ವಿಷಯ ಗೊತ್ತಾಗಿದೆ.

34
ಗೌತಮ್‌ ಜೀವಕ್ಕೆ ಅಪಾಯ

ಗೌತಮ್‌ಗೆ ಜನಿಸಿದ ಮಗಳಿಂದ ಅವನ ಪ್ರಾಣಕ್ಕೆ ಅಪಾಯ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಇದರಿಂದ ಭೂಮಿಕಾ ಟೆನ್ಶನ್‌ ಮಾಡಿಕೊಂಡಿದ್ದರೆ, ಗೌತಮ್‌ ಮಾತ್ರ, “ನಮ್ಮ ಮಗಳು ಇನ್ನೂ ಬದುಕಿದ್ದಾಳೆ ಎಂದು ಅರ್ಥ ಆಯಿತು” ಎಂದು ಖುಷಿ ಹೊರಹಾಕಿದ್ದಾನೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

44
ವೀಕ್ಷಕರು ಏನು ಹೇಳ್ತಾರೆ?
  • ಇದೊಂದು ಮುಗಿಯದ ಗೋಳು ಮತ್ತೆ ಬೋರ್ ಹೊಡೆಸೋಕೆ ಶುರು ಮಾಡಿದ ಡೈರೆಕ್ಟರ್
  • ಜೆಡಿ ಅಹಂ ಇಳಿದಿಲ್ಲ, ಗೌತಮ್ ಭೂಮಿಕಾಗೆ ಕಷ್ಟ ತಪ್ಪಲಿಲ್ಲ, ಅಮೃತಧಾರೆ ಟೈಟಲ್‌ಗೆ ಅರ್ಥವೇ ಇಲ್ಲ.
  • ಯಾರ ಜಾತಕದಲ್ಲೂ ಕಂಠಕ ಬರಲ್ಲ..ಕಂಟಕ ಬರುವುದು ಮನುಷ್ಯ ಜಾತಿಯ ರಾಕ್ಷಸರಿಂದ
  • ಇಟ್ಕೊಂಡ್ ಇರೋಳು ಇರೋತನಕ, ಕಟ್ಟಿಕೊಂಡು ಇರೋಳು ಕೊನೆತನಕ
  • ಜಯದೇವಗೆ ಬುದ್ದಿ ಕಲಿಸಬೇಕಿತ್ತು.ಅವನು ಸೋಲಬೇಕು.ಆಗ ಧರ್ಮ ಜಾತಿ ಸಾಧಿಸಿದಂತೆ.ಇಲ್ಲದಿದ್ದರೆ ಕೆಟ್ಟವರಿಗೆ ಒಳ್ಳೆಯದಾಗುತ್ತದೆ ಎಂಬ ದುಷ್ಟ ಸಂದೇಶ ಹೋಗಿಬಿಡುತ್ತದೆ
  • ಇದುವರೆಗೂ ಹೆಣ್ಣು ಮಗುವಿಗೆ ಒಂದು closure ಕೊಟ್ಟಿರಲಿಲ್ಲ. ಅದಕ್ಕೇ ಕಂಟಕ ಕಥೆ
  • ಕೇಡಿ ಜಯ ದೇವ ಗೆ ಸರಿಯಾಗಿ ಆಗಿದೆ ನೋಡಿ ಬೇಬಿ ಬೇಬಿ ಅಂತ ಇದಾ ಬೇಬಿ ಸರಿಯಾಗಿ ಮಾಡಿದ್ದಾಳೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories