ಒಂಬತ್ತು, ಒಂಬತ್ತು ತೋಳ ಹಳ್ಳಕ್ಕೆ ಬಿತ್ತು; ಜೈದೇವ್‌ಗೆ ಭೂಮಿಕಾ ಕಿಲ್ಲಿಂಗ್ ಲುಕ್

Published : Nov 04, 2026, 12:02 PM IST

ಅಮೃತಧಾರೆ ಸೀರಿಯಲ್ ಅಂತಿಮ ಹಂತದಲ್ಲಿದ್ದು, ಶತ್ರುಗಳಾದ ಜೈದೇವ್ ಮತ್ತು ಶಕುಂತಲಾಳ ಅಸಲಿ ಮುಖ ಗೌತಮ್‌ಗೆ ತಿಳಿದಿದೆ. ಭೂಗತನಾಗಿರುವ ಜೈದೇವ್‌ನನ್ನು ಹಿಡಿಯಲು ಭೂಮಿಕಾ ಮತ್ತು ಅವಳ ತದ್ರೂಪಿ ದೀಪಿಕಾ ಮೂಲಕ ಗೌತಮ್ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಈ ಅವಳಿ ರಹಸ್ಯ ಯಾವಾಗ ಬಯಲಾಗುತ್ತದೆ ಎಂಬ ಕುತೂಹಲ ಮೂಡಿದೆ.

PREV
15
Amruthadhaare

ಅಮೃತಧಾರೆ ಸೀರಿಯಲ್ (Amruthadhaare Serial) ಅಂತಿಮ ಹಂತದಲ್ಲಿದ್ದು, ಗೌತಮ್ ಮತ್ತು ಭೂಮಿಕಾಗೆ ತಮ್ಮ ಶತ್ರುಗಳು ಯಾರು ಅನ್ನೋದು ಗೊತ್ತಾಗಿದೆ. ಇಷ್ಟು ದಿನ ಜೈದೇವ್ ಮಾತ್ರ ತಮ್ಮ ಶತ್ರು ಅಂದ್ಕೊಂಡಿದ್ದರು. ಇದೀಗ ಶಕುಂತಲಾ ಬದಲಾಗಿಲ್ಲ, ಜೈದೇವ್‌ ಜೊತೆಯಲ್ಲಿದ್ದಾಳೆ ಎಂಬ ವಿಷಯ ಗೌತಮ್‌ಗೂ ಗೊತ್ತಾಗಿದೆ. ಆದ್ರೆ ಜೈದೇವ್ ಎಲ್ಲಿದ್ದಾನೆ ಎಂಬ ವಿಷಯ ಗೊತ್ತಿಲ್ಲ.

25
ಭೂಗತನಾಗಿರುವ ಜೈದೇವ್

ತನ್ನ ಬಂಡವಾಳ ಬಯಲಾಗುತ್ತಿದ್ದಂತೆ ಭೂಗತನಾಗಿರುವ ಜೈದೇವ್‌ನನ್ನು ಹೊರಗಡೆ ಕರೆದುಕೊಂಡು ಬರಲು ಭೂಮಿಕಾ ಜೊತೆಗೂಡಿ ಗೌತಮ್ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ವಿದೇಶಕ್ಕೆ ತೆರಳುವ ಮುನ್ನ ತನ್ನೆಲ್ಲಾ ಆಸ್ತಿಯ power of attorneyಯನ್ನು ಭೂಮಿಕಾ ಹೆಸರಿಗೆ ಮಾಡಿದ್ದನು. ಭೂಮಿಕಾ ಹೆಸರಿನಲ್ಲಿರುವ ಆಸ್ತಿಯನ್ನು ದೀಪಿಕಾ ಮೂಲಕ ಪಡೆದುಕೊಳ್ಳಲು ಜೈದೇವ್ ಪ್ಲಾನ್ ಮಾಡಿದ್ದನು.

35
ಮಾಲ್‌ನಲ್ಲಿ ಭೂಮಿಕಾ-ದೀಪಿಕಾ

ಇದೀಗ ಜೈದೇವ್ ಪ್ಲಾನ್ ಎಲ್ಲಾ ಉಲ್ಟಾ ಆಗಿದ್ದು, ಮುಂದೇನು ಮಾಡ್ತಾನೆ ಅನ್ನೋದು ಸದ್ಯದ ಕುತೂಹಲವಾಗಿದೆ. ಗೌತಮ್ ಪ್ಲಾನ್‌ನಂತೆ ಭೂಮಿಕಾ ಮತ್ತು ದೀಪಿಕಾ ಒಂದೇ ರೀತಿಯಲ್ಲಿ ರೆಡಿಯಾಗಿ ಮಾಲ್‌ಗೆ ಬಂದಿದ್ದಾರೆ. ಇಲ್ಲಿಗೆ ತನ್ನ ರೌಡಿಗಳೊಂದಿಗೆ ಜೈದೇವ್ ಬಂದಿದ್ದಾನೆ. ಇಲ್ಲಿ ಭೂಮಿಕಾಳನ್ನು ದೀಪಿಕಾ ಎಂದು ಜೈದೇವ್ ಮಾತನಾಡಲು ಆರಂಭಿಸಿದ್ದಾನೆ.

45
ಅವಳಿ ರಹಸ್ಯ

ಮತ್ತೊಂದೆಡೆ ದೀಪಿಕಾಗೆ ರೌಡಿಗಳು ಎದುರಾಗಿದ್ದಾರೆ. ಹಾಗಾಗಿ ಇಂದಿನ ಸಂಚಿಕೆ ತೀವ್ರ ಕುತೂಹಲವನ್ನು ಮೂಡಿಸಿದೆ. ಮತ್ತೊಂದೆಡೆ ದೀಪಿಕಾ ಮತ್ತು ಭೂಮಿಕಾ ಅವಳಿ ಸೋದರಿಯರು ಸತ್ಯ ಯಾವಾಗ ಹೊರಗೆ ಬರಲಿದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಸದ್ಯ ಈ ವಿಷಯವನ್ನು ಸೊಸೆ ಮಹಿಮಾ ಮುಂದೆ ಅತ್ತೆ ಮಂದಾಕಿನಿ ಹಂಚಿಕೊಂಡಿದ್ದಾಳೆ.

55
ಭೂಮಿಕಾಳಂತೆ ತದ್ರೂಪಿ ದೀಪಿಕಾ

ಬಹುಶಃ ಜೈದೇವ್ ಮತ್ತು ಶಕುಂತಲಾಳ ಅಸಲಿ ಮುಖ ಎಲ್ಲರ ಮುಂದೆ ಬಯಲಾದ್ರೆ ದೀಪಿಕಾಳನ್ನು ಎಲ್ಲರ ಮುಂದೆ ಕರೆದುಕೊಂಡು ಬರಬಹುದು. ಸದ್ಯ ಗೌತಮ್ ಗೆಳೆಯ ಆನಂದ್-ಅಪರ್ಣಾ ಮನೆಯಲ್ಲಿ ದೀಪಿಕಾ ಆಶ್ರಯ ಪಡೆದುಕೊಂಡಿದ್ದಾಳೆ. ಭೂಮಿಕಾಳಂತೆ ತದ್ರೂಪಿ ದೀಪಿಕಾ ಎಂಬಾಕೆ ಇರೋ ವಿಷಯ ಗೌತಮ್, ಜೀವ, ಮಲ್ಲಿ ಮತ್ತು ಅಪರ್ಣಾಗೆ ಮಾತ್ರ ತಿಳಿದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories