Bigg Boss Season 13: ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ, ಕನ್ನಡಿಗಳಲ್ಲ, ಮುಂಬೈಕರ್, ವಾಪಾಸ್ ಮುಂಬೈಗೆ ಹೋಗು ಎನ್ನುವ ಹೇಳಿಕೆ ಬರುತ್ತಿರುವ ನಡುವೆ, ಕನಕದಾಸರ ಕೀರ್ತನೆ ಹಾಡಿ, ಕಿಡಿ ಕಾರುವವರ ಬಾಯಿ ಮುಚ್ಚಿಸಿದ್ದಾರೆ ಶೆಟ್ಟಿ ಡಾನ್
ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಸೌಂದರ್ಯ ಶೆಟ್ಟಿ ತಮ್ಮ ಆಟ, ಮಾತು ಮತ್ತು ಎನರ್ಜಿ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ‘ಶೆಟ್ಟಿ ಡಾನ್’ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿರುವ ಅವರು, ಇದೀಗ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಹಾಡಿನ ಮೂಲಕ ತಿರುಗೇಟು ನೀಡಿದ್ದಾರೆ. ಹಾಗಂತ ಇದು ನೇರವಾಗಿ ನೀಡಿದ ತೀರುಗೇಟು ಅಲ್ಲ, ಬದಲಾಗಿ ಕನ್ನಡ ಹಾಡನ್ನು ಸ್ಪಷ್ಟವಾಗಿ ಹಾಡುವ ಮೂಲಕ ತನಗೂ ಕನ್ನಡ ಗೊತ್ತಿದೆ, ನಾನು ಕನ್ನಡಿಗಳು ಎಂಬುದನ್ನು ತಮಗೆ ಗೊತ್ತಿಲ್ಲದೇ ನೀಡಿದ್ದಾರೆ. ಸದ್ಯ ಅವರ ಹಾಡು ಹಾಗೂ ನೆಟ್ಟಿಗರ ಕಾಮೆಂಟ್ ಗಳು ಗಮನ ಸೆಳೆಯುತ್ತಿದೆ.
25
ಕನ್ನಡಿಗಳಲ್ಲ ವೋಟ್ ಮಾಡಬೇಡಿ ಎಂದ ಜನ
ಸೌಂದರ್ಯ ಶೆಟ್ಟಿ ಅವರ ಆಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಅವರ ಉತ್ಸಾಹ ಮತ್ತು ಮನರಂಜನೆಯ ಶೈಲಿಯನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಅವರಿಗೆ ವೋಟ್ ಮಾಡಬೇಡಿ, ಆಕೆಗೆ ಕನ್ನಡ ಗೊತ್ತಿಲ್ಲ, ಆಕೆ ಕನ್ನಡತಿ ಅಲ್ಲ, ಮುಂಬೈ ಅವಳು, ಆಕೆಗೆ ವೋಟ್ ಮಾಡಿ ಪ್ರೋತ್ಸಾಹ ನೀಡಬೇಡಿ , ಗೋ ಬ್ಯಾಕ್ ಟು ಮುಂಬೈ ಎಂದು ಹೇಳುತ್ತಿದ್ದಾರೆ. ಇಂತಹ ಟೀಕೆಗಳ ನಡುವೆಯೇ ಸೌಂದರ್ಯ ಹಾಡಿರುವ ಹಾಡು ಅಭಿಮಾನಿಗಳ ಮನ ಗೆದ್ದಿದ್ದು, ಆಕೆಯ ವಿರುದ್ಧ ಕಿಡಿ ಕಾರುವವರಿಗೆ ಮುಟ್ಟಿ ನೋಡುವಂತೆ. ಅಭಿಮಾನಿಗಳೇ ಉತ್ತರ ನೀಡುತ್ತಿದ್ದಾರೆ.
35
ಸೌಂದರ್ಯ ಹಾಡಿರುವ ಹಾಡು ಯಾವುದು?
ಸೌಂದರ್ಯ ಮತ್ತು ಕಿರಣ್ ಶಾಸ್ತ್ರಿ ಜೊತೆ ಸೇರಿ ಹಾಡುತ್ತಿರುತ್ತಾರೆ. ಬಳಿಕ ಸೌಂದರ್ಯ ‘ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ. ತಾನಲ್ಲ ತನ್ನದಲ್ಲ, ತಾನಲ್ಲ ತನ್ನದಲ್ಲ, ಆಸೆ ಥರವಲ್ಲ ಮುಂದೆ ಬಾಹೋದಲ್ಲ, ದಾಸನಾಗು ವಿಶೇಷನಾಗು, ದಾಸನಾಗು ವಿಶೇಷನಾಗು’ ಎನ್ನುವ ಕನಕದಾಸರ ಕೀರ್ತನೆಯನ್ನು ಅಕ್ಷರ ತಪ್ಪಿಲ್ಲದೇ, ಸ್ಪಷ್ಟವಾಗಿ ಹಾಡಿದ್ದಾರೆ. ಇದಕ್ಕೂ ಮುನ್ನ ಕನ್ನಡ ನಾಡಗೀತೆಯನ್ನು ಸಹ ಹಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಸೌಂದರ್ಯ ಬೆಂಬಲಕ್ಕೆ ನಿಂತು, ವಿರುದ್ಧ ಮಾತನಾಡುವವರ ವಿರುದ್ಧ ಸಮರ ಸಾರಿದ್ದಾರೆ.
ಯಾರ್ಯಾರು ಕನ್ನಡದವಳಲ್ಲ ಅಂತ ಹೇಳ್ತಾರೋ, ಅವರೆಲ್ಲರಿಗೂ ಈ ಪ್ರೋಮೋ ಅರ್ಪಣೆ
ಕನ್ನಡ ಬರುವುದಿಲ್ಲ ಕನ್ನಡತಿ ಅಲ್ಲ ಎಂದು ಟೀಕೆ ಮಾಡಿದವರಿಗೆ ಒಳ್ಳೆಯ ಒಂದು ಸಂದೇಶ ಒಂದು ಉತ್ತರ. ಅಪ್ಪಟ ಕನ್ನಡತಿ ಮಾಣಿಕ್ಯ ಸೌಂದರ್ಯ ಶೆಟ್ಟಿ.
55
ಮುಂಬೈಕರ್' ಎಂದು ಕರೆಯುತ್ತಿದ್ದವರೆಲ್ಲ ಈಗ ಎಲ್ಲಿದ್ದಾರೆ?
ಕನ್ನಡ ಸರಿಯಾಗಿ ಬರಲ್ಲ ಅಂತ ಟೀಕೆ ಮಾಡೋ ಬದಲು, ಕನ್ನಡದ ಮೇಲಿರುವ ಅವಳ ಪ್ರೀತಿಯನ್ನು ನೋಡಿ. ಫುಟೇಜ್‌ಗಾಗಿ ಏನೇನೋ ವಿಷಯ ಹುಡುಕುವ ಬದಲು, ಅವರ ಆಟದ ಬಗ್ಗೆ ಮಾತನಾಡಿ! ನಮ್ಮ ಸೌಂದರ್ಯ ಅಪ್ಪಟ ಕನ್ನಡತಿ. ಹೆಮ್ಮೆ ಪಡುತ್ತೇವೆ ನಮ್ಮ ಕನ್ನಡದ ಹುಡುಗಿಯ ಬಗ್ಗೆ!
ಆಕೆಯನ್ನು 'ಮುಂಬೈಕರ್' ಎಂದು ಕರೆಯುತ್ತಿದ್ದವರೆಲ್ಲ ಈಗ ಎಲ್ಲಿದ್ದಾರೆ? ಅವಳಿಗೆ ನಿಮ್ಮೆಲ್ಲರಿಗಿಂತ ಚೆನ್ನಾಗಿ ಕನ್ನಡ ಬರುತ್ತದೆ!!!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.