ಹಲವು ಸವಾಲುಗಳ ಬಳಿಕ ನನಸಾದ ಕನಸು, ‘ಆದಿಲಕ್ಷ್ಮೀ ಪುರಾಣ’ ನಟಿ ಆಶಾ ಅಯ್ಯನಾರ್ ಭಾವುಕ ಪೋಸ್ಟ್

Published : Nov 03, 2026, 11:41 AM IST

Asha Ayyanar: ಕನ್ನಡ ಕಿರುತೆರೆ ನಟಿ ಆಶಾ ಅಯ್ಯನಾರ್ ಅವರಿಗೆ ‘ಆದಿ ಲಕ್ಷ್ಮಿ ಪುರಾಣ’ ಧಾರಾವಾಹಿಯ ಪಾತ್ರಕ್ಕಾಗಿ ಜೀ ಕನ್ನಡದ ‘ಬೆಸ್ಟ್ ಮಗಳು ಅವಾರ್ಡ್’ ದೊರೆತಿದೆ. ನಾಯಕಿಯಾಗುವ ತಮ್ಮ ಕನಸು ನನಸಾದ ಸಂಭ್ರಮವನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.

PREV
16
ಜೀ ಕುಟುಂಬ ಅವಾರ್ಡ್ಸ್

ಜೀ ಕನ್ನಡ ವಾಹಿನಿಯಲ್ಲಿ ವರ್ಷಂಪ್ರತಿ ನಡೆಯುವಂತಹ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಈ ಭಾರಿಯೂ ಅದ್ದೂರಿಯಾಗಿ ನಡೆದಿದೆ. ಧಾರಾವಾಹಿಗಳ ಪ್ರತಿ ನಟ-ನಟಿಯರಿಗೂ ಪ್ರಶಸ್ತಿಗಳು ಸಿಕ್ಕಿವೆ. ಈ ವರ್ಷ ಬೆಸ್ಟ್ ಮಗಳು ಪ್ರಶಸ್ತಿಯನ್ನು ನಟಿ ಆಶಾ ಅಯ್ಯನಾರ್ ಪಡೆದಿದ್ದಾರೆ.

26
ಆದಿಲಕ್ಷ್ಮೀ ಪುರಾಣ ನಟಿ ಆಶಾ

‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿಯಲ್ಲಿ ಆಶಾ ಅಯ್ಯನಾರ್ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಶಾ ನಾಯಕಿಯಾಗಿ ಅಭಿನಯಿಸಿದ ಧಾರಾವಾಹಿ ಇದಾಗಿದೆ. ಈ ಹಿಂದೆ ಆಶಾ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಪಾತ್ರದಲ್ಲಿ ನಟಿಸಿದ್ದರು.

36
ಭಾವುಕರಾದ ನಟಿ ಆಶಾ ಅಯ್ಯನಾರ್

ಜೀ ಕುಟುಂಬ ‘ಬೆಸ್ಟ್ ಮಗಳು’ ಪ್ರಶಸ್ತಿಯನ್ನು ನಟ ಪ್ರೇಮ್ ಅವರು ನೀಡಿದ್ದಾರೆ. ಪ್ರಶಸ್ತಿ ಬಗ್ಗೆ ನಟಿಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಆದರೆ ಲಕ್ಷ್ಮೀ ಹೆಸರು ಹೇಳಿದಾಗ ಅಚ್ಚರಿಗೊಂಡು,. ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪಯಣ, ಹಾಗೂ ಪ್ರಶಸ್ತಿ ಕುರಿತು ಭಾವುಕರಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ಏನು ಹೇಳಿದ್ದಾರೆ ನೋಡೋಣ.

46
ಕನ್ನಡ ಕಿರುತೆರೆ ನಟಿ ಆಶಾ ಅಯ್ಯನಾರ್‌ಗೆ ‘ಬೆಸ್ಟ್ ಮಗಳು’ ಪ್ರಶಸ್ತಿ

ಇದು ನನ್ನ ಜೀವನದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು! ನಾಯಕಿಯಾಗಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಇದೀಗ ಜೀ ಕನ್ನಡ ನನ್ನ ಆ ಕನಸನ್ನು ನನಸಾಗಿಸಿದೆ. ಹಲವು ಹೋರಾಟಗಳನ್ನು ಎದುರಿಸಿ, ಅಸಂಖ್ಯಾತ ಸವಾಲುಗಳನ್ನು ಮೆಟ್ಟಿ ನಿಂತ ಬಳಿಕ ಕೊನೆಗೂ ಒಂದು ಸಾಧನೆಯ ಹಂತವನ್ನು ತಲುಪಿದ್ದೇನೆ. ಇದು ಸಣ್ಣ ಮೈಲಿಗಲ್ಲಿನಂತೆ ಕಂಡರೂ, ನನ್ನ ಪಾಲಿಗೆ ಬಹಳ ದೊಡ್ಡದು. ಆದರೆ ಇದು ಕೇವಲ ಆರಂಭವಷ್ಟೇ. ಇನ್ನೂ ಸಾಕಷ್ಟು ಸಾಧಿಸಬೇಕಿದೆ, ಕಲಿಯಬೇಕಿದೆ ಮತ್ತು ನನ್ನನ್ನು ನಾನು ಸಾಬೀತುಪಡಿಸಬೇಕಿದೆ.

56
ನನ್ನ ಪರಿಶ್ರಮಕ್ಕೆ ಮನ್ನಣೆ ಸಿಕ್ಕಿದೆ

ಇಂದು ನನ್ನ ಪರಿಶ್ರಮಕ್ಕೆ ಸುಂದರವಾದ ಮನ್ನಣೆ ಸಿಕ್ಕಿದೆ. ಆದಿ ಲಕ್ಷ್ಮಿ ಪುರಾಣ ಧಾರಾವಾಹಿಯಲ್ಲಿ ನಾನು ನಿರ್ವಹಿಸಿದ ಪಾತ್ರಕ್ಕೆ ‘ಬೆಸ್ಟ್ ಮಗಳು ಅವಾರ್ಡ್’ ದೊರೆತಿದೆ. ಈ ಧಾರಾವಾಹಿ ಮತ್ತು ಪಾತ್ರ ನನ್ನ ಜೀವನವನ್ನೇ ಬದಲಿಸಿವೆ. ನನ್ನ ಪಾಲಿಗೆ ಹೊಸ ಅವಕಾಶಗಳ ಬಾಗಿಲು ತೆರೆದು, ಸುಂದರವಾದ ಪಯಣಕ್ಕೆ ನಾಂದಿ ಹಾಡಿವೆ.

66
ಎಲ್ಲರಿಗೂ ಧನ್ಯವಾದಗಳು

ನನ್ನ ಮೇಲೆ ನಂಬಿಕೆ ಇಟ್ಟ, ನನ್ನನ್ನು ಬೆಂಬಲಿಸಿದ ಹಾಗೂ ನಾಯಕಿಯಾಗಿ ನನ್ನ ಪ್ರತಿಭೆಯನ್ನು ಸಾಬೀತುಪಡಿಸಲು ಈ ಅದ್ಭುತ ಅವಕಾಶ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನನ್ನ ಮೇಲಿಟ್ಟಿರುವ ನಿಮ್ಮ ನಂಬಿಕೆ ಮತ್ತು ಪ್ರೀತಿಗೆ ನಾನು ಸದಾ ಕೃತಜ್ಞಳಾಗಿರುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ ಆಶಾ ಅಯ್ಯನಾರ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories