ಜೈದೇವ್ ಕಣ್ಮರೆ, ಶಕುಂತಲಾ ಹುಡುಕಾಟ; ಸೀರಿಯಲ್ ಬಿಟ್ರಾ ಗೌತಮ್ ದಿವಾನ್? ಇದೇನಾ ಹೊಸ ಅಧ್ಯಾಯ

Published : Sep 08, 2026, 11:43 AM IST

ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು! ಜೈದೇವ್ ಹತ್ಯೆಯ ರಹಸ್ಯವನ್ನು ಮುಚ್ಚಿಟ್ಟ ಭೂಮಿಕಾ-ಜೀವಾ. ಮಗನನ್ನು ಹುಡುಕಿ ಬಂದ ಶಕುಂತಲಾ ಸತ್ಯವನ್ನು ಪತ್ತೆ ಹಚ್ಚುತ್ತಾಳಾ? ಮುಂದೇನಿದೆ ತಿಳಿಯಿರಿ.

PREV
15
ಅಮೃತಧಾರೆ ಸೀರಿಯಲ್ ರೋಚಕ ತಿರುವು

ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುವ ಜೊತೆಗೆ ಹೊಸ ಅಧ್ಯಾಯ ಶುರುವಾಗಲಿದೆ ಎಂಬ ಮಾಹಿತಿಯನ್ನು ಧಾರಾವಾಹಿ ತಂಡ ಹೇಳಿಕೊಂಡಿದೆ. ಸೋಮವಾರದ ಎಪಿಸೋಡ್‌ನಲ್ಲಿ ಜೀವಾ ಹೊಡೆದ ಏಟಿನಿಂದ ಜೈದೇವ್‌ ಪ್ರಾಣ ಹೋಗಿರೋದನ್ನು ತೋರಿಸಲಾಗಿತ್ತು. ಇಂದಿನ ಪ್ರೋಮೋದಲ್ಲಿ ಜೈದೇವ್‌ನನ್ನು ಹುಡುಕಿಕೊಂಡು ಆತನ ಮನೆಗೆ ತಾಯಿ ಶಕುಂತಲಾ ಬಂದಿದ್ದಾಳೆ.

25
ಭೂಮಿಕಾಳಲ್ಲಾದ ಬದಲಾವಣೆ

ಮತ್ತೊಂದೆಡೆ ರಾತ್ರಿಯಿಡೀ ನಿದ್ದೆಯಿಲ್ಲದೇ ಆತಂಕದಲ್ಲಿರುವ ಭೂಮಿಕಾಳಲ್ಲಾದ ಬದಲಾವಣೆಯನ್ನು ಗೌತಮ್ ಕಂಡು ಹಿಡಿದಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಗೌತಮ್, ನನ್ನಿಂದ ಏನೋ ವಿಷಯ ಮುಚ್ಚಿಡುತ್ತಿದ್ದೀರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ. ಮಣ್ಣಲ್ಲಿ ಮಣ್ಣಾದ ಜೈದೇವ್‌ನನ್ನು ಶಕುಂತಲಾ ಪತ್ತೆ ಮಾಡುತ್ತಾಳಾ ಎಂಬುವುದು ಮುಂದಿನ ಸಂಚಿಕೆಯಲ್ಲಿನ ತಿಳಿಯಲಿದೆ.

35
ಎಮೋಷನಲ್ ಬ್ಲ್ಯಾಕ್‌ಮೇಲ್

ಜೈದೇವ್ ಸಾವನ್ನಪ್ಪಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡೋಣ ಎಂದು ಭೂಮಿಕಾ ಹೇಳುತ್ತಾಳೆ. ಆದ್ರೆ ಇದಕ್ಕೆ ವಿರೋಧಿಸುವ ಜೀವಾ, ಒಂದು ವೇಳೆ ನೀನು ಜೈಲಿಗೆ ಹೋದ್ರೆ ಅಪ್ಪ-ಅಮ್ಮಾ, ಗೌತಮ್ ಅವರಿಗೆ ಆಘಾತದ ಜೊತೆ ಅವಮಾನ ಆಗುತ್ತೆ. ಮತ್ತೊಂದೆಡೆ ಮಕ್ಕಳು ತನ್ನ ತಾಯಿ ಕೊಲೆಗಾರ್ತಿ ಅಂತ ತಿಳಿದ್ರೆ ಹೇಗಾಗುತ್ತೆ ಎಂದು ಜೀವಾ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

45
ಭಯದಲ್ಲಿ ಭೂಮಿಕಾ

ಅಂತಿಮವಾಗಿ ಪೊಲೀಸರಿಗೆ ವಿಷಯ ತಿಳಿಸದೇ ಜೀವಾ ಮತ್ತು ಮಧುರಾ ಜೊತೆಯಾಗಿ ಕಾಡಿನಲ್ಲಿ ಜೈದೇವ್‌ ಹೆಣವನ್ನು ಹೂತಿದ್ದಾರೆ. ಅಲ್ಲಿಂದ ಎಲ್ಲರೂ ಕಾಲ್ಕಿತ್ತಿದ್ದಾರೆ. ಆದ್ರೆ ಈ ಭಯದಲ್ಲಿರುವ ಭೂಮಿಕಾಗೆ ರಾತ್ರಿಯಿಡೀ ನಿದ್ದೆಯೇ ಬಂದಿಲ್ಲ. ಮುಂದೇನು ಆಗುತ್ತೆ ಎಂಬ ಭಯದಲ್ಲಿ ಭೂಮಿಕಾ ಸಿಲುಕಿದ್ರೆ, ಮತ್ತೊಂದೆಡೆ ಜೈದೇವ್‌ನನ್ನು ಬಂಧಿಸಲು ಮಲ್ಲಿ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದಾಳೆ.

55
ರಾಜೇಶ್‌ ನಟರಂಗ

ಸೋಮವಾರ ಬಿಡುಗಡೆಯಾದ ಪ್ರೋಮೋದಿಂದ ಅಮೃತಧಾರೆ ಸೀರಿಯಲ್ ನಿಂದ ರಾಜೇಶ್‌ ನಟರಂಗ ಹೊರಗೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಧಾರಾವಾಹಿಯಲ್ಲಿ ಗೌತಮ್‌, ಬ್ಯುಸಿನೆಸ್ ಸಂಬಂಧ ವಿದೇಶ ಪ್ರವಾಸದಲ್ಲಿದ್ದಾನೆ. ಹಾಗಾಗಿ ಧಾರಾವಾಹಿಯಲ್ಲಿ ಗೌತಮ್ ಪಾತ್ರ ಕಡಿಮೆ ಕಾಣಿಸುತ್ತಿದೆ. ಇತ್ತ ಜೈದೇವ್ ಪಾತ್ರ ಮುಕ್ತಾಯದ ಬೆನ್ನಲ್ಲೇ ಮಧುರಾ ಮಿಸ್ ಆಗಿದ್ದಾಳೆ. ಹಾಗಾದ್ರೆ ಮಧುರಾ ಎಲ್ಲಿ ಹೋದ್ಳು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories