Bigg Boss ​ ಮನೆಯಲ್ಲಿ ಮೊದಲ ದಿನವೇ ಹೊತ್ತಿಕೊಂಡ ಕಿಡಿ! ಗಗನ್​-ಮಂಜು ನಡುವೆ ಕಿತ್ತಾಟ, ಓಪನ್ ಚಾಲೆಂಜ್​

Published : Sep 07, 2026, 04:58 PM IST

ಬಿಗ್​ಬಾಸ್​ ಕನ್ನಡ 13ರ ಮೊದಲ ದಿನವೇ, ಟಾಸ್ಕ್ ವಿಚಾರವಾಗಿ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ಮಂಜುನಾಥ್ ನಡುವೆ ತೀವ್ರ ಜಗಳ ಶುರುವಾಗಿದೆ. ಮಂಜುನಾಥ್ ಅವರ 'ಧಗ ಧಗ ಧಗ' ಎಂಬ ಡೈಲಾಗ್ ವೈರಲ್ ಆಗಿದ್ದು, ಇಬ್ಬರ ನಡುವಿನ ಕಿತ್ತಾಟ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

PREV
16
ಮೊದಲ ದಿನವೇ ಶುರುವಾಯ್ತು ಕಿತ್ತಾಟ

ಬಿಗ್​ಬಾಸ್​ 13 (Bigg Boss Kannada 13) ಆರಂಭಗೊಂಡ ಬೆನ್ನಲ್ಲೇ, ಮೊದಲ ದಿನವೇ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಅದು ಸೀತಾರಾಮ ಸೀರಿಯಲ್​​ ಖ್ಯಾತಿಯ ರಾಮ ಉರ್ಫ್​ ಗಗನ್​ ಚಿನ್ನಪ್ಪ ಮತ್ತು ಕಾಮನ್​ ಮ್ಯಾನ್​ ಆಗಿ ಎಂಟ್ರಿ ಕೊಟ್ಟಿರುವ, ಅಗ್ನಿಪರೀಕ್ಷೆಯಲ್ಲಿ ಅರ್ಧ ತಲೆ ಬೋಳಿಸಿಕೊಂಡು ಸುದ್ದಿಯಾಗಿದ್ದ ಮಂಜುನಾಥ್​ ಅವರ ನಡುವೆ.

26
ಕಿಡಿ ಹೊತ್ತಿಸಿದ ಟಾಸ್ಕ್​

ಅಷ್ಟಕ್ಕೂ, ಇವರಿಬ್ಬರ ನಡುವೆ ಕಿಡಿ ಹೊತ್ತುಕೊಂಡದ್ದು, ಬಿಗ್​ಬಾಸ್​ ಕೊಟ್ಟಿರುವ ಟಾಸ್ಕ್​ನಿಂದಾಗಿ. ಮೊದಲ ದಿನವೇ ತಮಗೆ ಇಷ್ಟವಾಗದ ಪ್ರಯಾಣಿಕರನ್ನು ಹೊರಹಾಕುವಂತೆ ಬಿಗ್​ಬಾಸ್​​ ಹೇಳಿತ್ತು. ಆ ಸಮಯದಲ್ಲಿ ಉಂಟಾದ ಕಿತ್ತಾಟ ಇದು.

36
ಗಗನ್​ ವಿರುದ್ಧ ಮಂಜು

ಈ ಸಮಯದಲ್ಲಿ ಮಂಜು ಅವರು ಗಗನ್​ ಅವರನ್ನು ಉದ್ದೇಶಿಸಿ ಕೆಟ್ಟದ್ದಾಗಿ ಮಾತನಾಡಿದ್ದು, ಅದಕ್ಕೆ ಗಗನ್​ ಅವರು ತುಂಬಾ ಮಾತನಾಡಬೇಡ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಮಂಜುನಾಥ್​, ನನಗೆ ಉರ್ಸೋದು ಎಂದರೆ ಇಷ್ಟ, ಅದರ ಮಜಾನೇ ಬೇರೆ ಎಂದಿದ್ದಾರೆ.

46
ಇಬ್ಬರ ನಡುವೆ ಜಟಾಪಟಿ

ಅಲ್ಲಿಗೆ ಅವರಿಬ್ಬರ ನಡುವೆ ಜಟಾಪಟಿ ನಡೆದಿದೆ. ಮಂಜು ಅವರು ಧಗ ಧಗ ಧಗ... ನನಗೆ ಉರಿಸೋದು ಅಂದ್ರೆ ತುಂಬಾ ಖುಷಿ ಎಂದಿದ್ದಾರೆ.

56
ಮಂಜುನಾಥ್ ಉರ್ಸಿದ್ದು ನಿಜಾನಾ? ಗಗನ್ ಉರ್ಕೊಂಡಿದ್ದು ಸುಳ್ಳಾ?

ಇದರ ಪ್ರೊಮೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿಕೊಂಡಿದೆ. ಮಂಜುನಾಥ್ ಉರ್ಸಿದ್ದು ನಿಜಾನಾ? ಗಗನ್ ಉರ್ಕೊಂಡಿದ್ದು ಸುಳ್ಳಾ ಎಂದು ಇದಕ್ಕೆ ಕ್ಯಾಪ್ಷನ್​ ನೀಡಲಾಗಿದೆ.

66
ಜಾಲತಾಣದಲ್ಲಿ ವೈರಲ್​

ಮಂಜು ಅವರ ಧಗಧಗಧಗ ಡೈಲಾಗ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಅವರಿಗೆ ಮೊದಲ ದಿನವೇ ಧಗ ಧಗ ಧಗ ಎಂದು ಬಿರುದು ಕೊಡಲಾಗಿದೆ. ಒಟ್ಟಿನಲ್ಲಿ ಮೊದಲ ದಿನವೇ ವೀಕ್ಷಕರು ಕುತೂಹಲದಿಂದ ಷೋ ನೋಡುವಂತೆ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories