Amruthadhaare Serial: ಸೀಮಂತದ ಖುಷಿಯಲ್ಲಿರೋ ಭೂಮಿಗೆ ಕಾದಿದೆ ದೊಡ್ಡ ಶಾಕ್!‌ ಗೌತಮ್‌ ಏನ ಮಾಡ್ತಾನೆ?

Published : Jun 09, 2025, 12:47 PM ISTUpdated : Jun 09, 2025, 12:51 PM IST

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ತನ್ನ ಎಲ್ಲ ಆಸ್ತಿಯನ್ನು ಪತ್ನಿ ಭೂಮಿಕಾ, ಮಗು ಹೆಸರಿಗೆ ಬರೆದಿದ್ದಾನೆ. ಪಾರ್ಥ, ಜಯದೇವ್‌ ಮುಂತಾದವರಿಗೆ ಸ್ವಲ್ಪವೇ ಸ್ವಲ್ಪ ಆಸ್ತಿ ಬರೆದಿದ್ದನು. ಇದು ಜಯದೇವ್‌ಗೆ ಸಿಟ್ಟು ತರಿಸಿದೆ.

PREV
15

ಇಡೀ ಕಂಪೆನಿಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗಬೇಕು ಅಂತ ಗೌತಮ್‌ ಆಸೆ ಪಟ್ಟಿದ್ದಾನೆ. ದಿವಾನ್‌ ಗ್ರೂಪ್‌ ಆಫ್‌ ಕಂಪೆನಿಸ್‌ ಒಂದೇ ಹೆಸರಿನಲ್ಲಿರಬೇಕು, ಅದು ಒಡೆದು ಚೂರು ಚೂರಾಗಬಾರದು ಅಂತ ಗೌತಮ್‌ ಅಂದುಕೊಂಡಿದ್ದನು.

25

ಈ ಮಾತು ಶಕುಂತಲಾ, ಜಯದೇವ್‌ಗೆ ದೊಡ್ಡ ಶಾಕ್‌ ಕೊಟ್ಟಿದೆ. ಹೀಗಾಗಿ ಭೂಮಿಕಾ ಮಗುವನ್ನು ಸಾಯಿಸಬೇಕು ಅಂತ ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ.

35

ಇಷ್ಟುದಿನವಾದರೂ ಜಯದೇವ್‌ಗೆ ಬುದ್ಧಿ ಬಂದಿಲ್ಲ. ಆಸ್ತಿಗೋಸ್ಕರ ಅವರು ಗೌತಮ್‌ ಸಾವನ್ನು ಕೂಡ ಬಯಸುತ್ತಿದ್ದಾನೆ. ಈಗ ಗೌತಮ್‌ ಮಗು ಭೂಮಿಗೆ ಬರಬಾರದು, ಹುಟ್ಟದೇ ಇರೋ ಮಗುವಿಗೆ ಇಷ್ಟೊಂದು ಬಿಲ್ಡಪ್‌ ಬೇಕಾ ಎನ್ನೋದು ಅವನ ವಾದ.

45

ಈಗ ಗೌತಮ್‌ ತನ್ನ ಮಗುವನ್ನು ಕಾಪಾಡಿಕೊಳ್ತಾನಾ? ಜಯದೇವ್‌ ಕೊಬ್ಬನ್ನು ಭೂಮಿ ಮುರಿಯುತ್ತಾಳಾ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ. ಅಂದಹಾಗೆ ಭೂಮಿಕಾ ಸೀಮಂತದ ತಯಾರಿ ಕೂಡ ನಡೆದಿದೆ. 

55

ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ

ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌

ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ನಟಿಸಿದ್ದಾರೆ.

Read more Photos on
click me!

Recommended Stories