ಬಿಗ್ ಬಾಸ್ ಖ್ಯಾತಿ ಸನಾ ಆರೋಗ್ಯದಲ್ಲಿ ದಿಢೀರ್ ಏರುಪೇರು, ಆಸ್ಪತ್ರೆ ದಾಖಲು

Published : Jun 08, 2025, 06:41 PM IST

ಬಿಗ್‌ಬಾಸ್ ಖ್ಯಾತಿ ಸನಾ ಮಕ್ಬುಲ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರೆ. ಸನಾ ಆತ್ಮೀಯ ಸ್ನೇಹಿತೆ ಸನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ.

PREV
16

ಬಿಗ್ ಬಾಸ್ ಬಳಿಕ ಟಿವಿ ಧಾರವಾಹಿ ಸೇರಿದಂತೆ ಹಲವು ವೇದಿಕೆಗಳ ಮೂಲಕ ಜನಪ್ರಿಯವಾಗಿರುವ ಸನಾ ಮಕ್ಬುಲ್ ಆರೋಗ್ಯದಲ್ಲಿ ಏರುಪೇರಾಗಿದೆ. ಕುಟುಂಬದ ಜೊತೆ ಈದ್ ಹಬ್ಬದಲ್ಲಿ ಪಾಲ್ಗೊಂಡಿದ್ದ ಸನಾ ಮಕ್ಬುಲ್ ದಿಢೀರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರು ಸನಾ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

26

ಬಿಗ್ ಬಾಸ್ ಒಟಿಟಿ ಸೀಸನ್ 3 ವಿನ್ನರ್ ಆಗಿರುವ ಸನಾ ಮಕ್ಬುಲ್ ಆರೋಗ್ಯ ಕುರಿತು ಇದೀಗ ಹಲವರು ವಿಚಾರಿಸುತ್ತಿದ್ದಾರೆ. ಸನಾ ಆತ್ಮೀಯ ಸ್ನೇಹಿತ ಡಾ. ಅಶಾನಾ ಕಾಂಚ್ವಾಲ ಸೋಶಿಯಲ್ ಮೀಡಿಯಾ ಮೂಲಕ ಸನಾ ಆರೋಗ್ಯ ಮಾಹಿತಿ ಬಹಿರಂಗಪಡಿಸಿದ್ದರು. ಸನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಬಹಿರಂಗಪಡಿಸಿದ್ದರು. ಈ ಫೋಟೋ ಪೋಸ್ಟ್ ಬೆನ್ನಲ್ಲೇ ಹಲವರು ಸನಾಗೆ ಏನಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

36

ನನ್ನ ಆತ್ಮೀಯ ಸ್ನೇಹಿತೆ ಸದ್ಯ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ದಾಖಲಾಗಿದ್ದಾರೆ. ಆಕೆಯ ಧೈರ್ಯ ಹಾಗೂ ಹೋರಾಟದ ಮನೋಭಾವ ಆಕೆಯನ್ನು ಈ ಸಂಕಷ್ಟದಿಂದ ಹೊರತರಲಿದೆ. ಸನಾ ಮಕ್ಬುಲ್‌ ಸದ್ಯ ಎದುರಾಗಿರುವ ಈ ಸವಾಲನ್ನು ಮೆಟ್ಟಿ ಹೊರಬರುವ ವಿಶ್ವಾಸವಿದೆ. ಮತ್ತಷ್ಟು ಸ್ಟ್ರಾಂಗ್ ಆಗಿ ಸನಾ ಕಾಣಿಸಿಕೊಳ್ಳಲಿದ್ದಾರೆ. ದೇವರು ನಿಮ್ಮ ಜೊತೆಗಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗಿ ಎಂದು ಸ್ನೇಹಿತೆ ಡಾ. ಅಶಾನಾ ಕಾಂಚ್ವಾಲ ಹೇಳಿಕೊಂಡಿದ್ದಾರೆ.

46

ಸನಾ ಮಕ್ಬುಲ್ ಕೆಲ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 2020ರಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹೊಟ್ಟೆ ಹಾಗೂ ಕರುಳಿನ ಆರೋಗ್ಯ ಸಮಸ್ಯೆ ಜೊತೆಗೆ ಲಿವರ್ ಸಮಸ್ಯೆಗೂ ತುತ್ತಾಗಿದ್ದಾರೆ. 2020ರಿಂದ ನಿರಂತರವಾಗಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದರು. ಸದ್ಯ ಯಾವ ಕಾರಣಕ್ಕೆ ಆಸ್ಪತ್ರೆ ದಾಖಲಾಗಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿಲ್ಲ.

56

ಭಾರತಿ ಸಿಂಗ್ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಸನಾ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದರು. ಇದೇ ಕಾರಣದಿಂದ ತಾನು ಸಸ್ಯಾಹಾರಿಯಾಗಿ ಬದಲಾಗಿರುವುದಾಗಿ ಹೇಳಿದ್ದರು. ಲಿವರ್ ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಗಳು ನನ್ನ ಕಿಡ್ನಿ ಮೇಲೂ ಪರಿಣಾಮ ಬೀರಿತ್ತು. 2020ರಲ್ಲಿ ನನಗೆ ಆರೋಗ್ಯ ಸಮಸ್ಯೆ ಇದೆ ಎಂದು ಗೊತ್ತಾಯಿತು. ಯಾವುದೇ ಸೂಚನೆ ಇರಲಿಲ್ಲ. ನಾನು ಆರೋಗ್ಯವಾಗಿದ್ದೆ ಎಂದು ಸನಾ ಹೇಳಿದ್ದರು.

66

ಆರೋಗ್ಯ ಸುಧಾರಿಸಲು ಹಲವು ಚಿಕಿತ್ಸೆ ಪಡೆದಿದ್ದೇನೆ ಎಂದು ಸನಾ ಹೇಳಿಕೊಂಡಿದ್ದರು.ಇದೀಗ ಸನಾ ಮತ್ತೆ ತಮ್ಮ ಹೊಟ್ಟೆ, ಕರಳು ಹಾಗೂ ಲಿವರ್ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿರುವ ಸಾಧ್ಯತೆ ಇದೆ. ಸ್ಟಿರಾಯ್ಡ್ ಸೇರಿದಂತೆ ಹಲವು ಚಿಕಿತ್ಸೆಗೆ ಒಳಪಟ್ಟಿರುವ ಸನಾ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

Read more Photos on
click me!

Recommended Stories