ಕನ್ನಡ ಕಿರುತೆರೆ ಜನಪ್ರಿಯ ನಟಿ ಐಶ್ವರ್ಯ ಬಸ್ಪುರೆ ತಮ್ಮ ತಾಯಿ ಹುಟ್ಟು ಹಬ್ಬದಂದು ಭಾವುಕರಾಗಿದ್ದಾರೆ. ತಾಯಿ ನೆನೆದು ಕಣ್ಣೀರಿಟ್ಟಿದ್ದಾರೆ.
'ನಿನ್ನ ಮುಖ ನೋಡಿದ ಮೇಲೆ ನನ್ನ ದಿನ ಆರಂಭವಾಗುತ್ತಿತ್ತು. ನಿಮ್ಮ ಮುಖದಲ್ಲಿ ಆ ಪ್ರೀತಿ ಇತ್ತು ನನ್ನ ಪ್ರೀತಿಯ ಅಮ್ಮ. ಇಂದು ಮುಂದು ನಾನು ಏನೇ ಆಗಿದ್ದರೂ ಆಗಲು ಹೊರಟಿದ್ದರೂ ಅದರ ಕ್ರೆಡಿಟ್ ನಿನಗೆ ನೀಡೇಕು.
ನಿನಗಿರುವ ಒಳ್ಳೆ ಮನಸ್ಸು ಮತ್ತು ಬೆಟ್ಟದಷ್ಟು ಪ್ರೀತಿ ಕೊಟ್ಟು ಆರೈಕೆ ಮಾಡುವ ಗುಣ. ನೀನು ನನಗೆ ಕೊಟ್ಟಿರುವ ವಿದ್ಯೆ ಬುದ್ಧಿ ಸಮಾಜ ಜ್ಞಾನ ಮನುಷ್ಯತ್ವದ ಗುಣ ಎಂದೂ ಮರೆಯುವುದಿಲ್ಲ.
ನಾನು ಎಷ್ಟೇ ತಪ್ಪು ಮಾಡಿದ್ದರು ಅದನ್ನು ಸಹಿಸಿ ಕೊಂಡು ತಪ್ಪುಗಳನ್ನು ಸರಿ ಮಾಡಿಕೊಂಡು ನನ್ನ ಪರವಾಗಿದ್ದ ವ್ಯಕ್ತಿ ನೀನು. ನಾನು ಮಾಡುವ ಕೆಲಸಗಳು ಸಮಾಜದಲ್ಲಿ ಗುರುತಿಸಿಕೊಂಡಿದೆ ಅದರಿಂದ ಹೆಸರು ಮಾಡಿದ್ದೀನಿ ಅಂದ್ರೆ ಅದು ನಾನು ನಿನ್ನಿಂದ ಪಡೆದಿರುವ ಶಕ್ತಿ ಮತ್ತು ಗುಣ.
ನನ್ನ ಜೀವನದಲ್ಲಿ ನಾನು ನೋಡಿರುವ ಅತಿ ಸುಂದರವಾದ ಶುದ್ಧ ಮನಸ್ಸಿನ ವ್ಯಕ್ತಿ ಅಂದ್ರೆ ನೀನೇ ಅಮ್ಮ. ನಿನ್ನ ನಗುವೇ ಸುಂದರ ಎಂದು ಐಶ್ವರ್ಯ ಹೇಳಿದ್ದಾರೆ.
ನೀನಿದ್ದ ಅರ್ಧ ಭಾಗ ಆದರೂ ನಾನು ಒಳ್ಳೆ ವ್ಯಕ್ತಿಯಾಗಿ ಬದುಕಬೇಕು ಅಮ್ಮ. ಚಂದ್ರ ದೂರ ಇರುವಷ್ಟು ನಿನ್ನನ್ನು ಪ್ರೀತಿಸುವೆ ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ.
ನಿನ್ನ ಹುಟ್ಟುಹಬ್ಬ ಒಂದು ನೆನಪು. ಪದಗಳಲ್ಲಿ ಹೇಳಲು ಆಗದಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಅಮ್ಮ. ನಿನ್ನ ತಾಯಿಯಾಗಿ ಪಡೆಯಲು ನಾನು ಪುಣ್ಯ ಮಾಡಿರುವೆ.