ಪಾಯಿಂಟ್ ಪರಿಮಳ, ಸಲ್ಲಿ ಲಲ್ಲಿ, ಪಾರ್ವತಿ ಪರಮೇಶ್ವರ, ಪರಿಣಿತ, ಪಂಚರಂಗಿ ಪಾಂ ಪಾಂ, ಶ್ರೀಮಾನ್ ಶ್ರೀಮತಿ, ಗೃಹಲಕ್ಷ್ಮೀ ಮತ್ತು ಗೌರಿಪುರದ ಗಯ್ಯಾಳಿಗಳು ಧಾರಾವಾಹಿಗಳಲ್ಲಿ ನಟಿಸಿರುವ ಲೋಕೇಶ್ ಬಸವಟ್ಟಿ.
ಸೀರಿಯಲ್ ಲೋಕದಲ್ಲಿ ಸಖತ್ ಬ್ಯುಸಿಯಾಗಿರುವ ಲೋಕೇಶ್ ಬಸವಟ್ಟಿ ಮೊದಲ ಸಂಬಳ 750 ರೂ. ಆಗಿತ್ತಂತೆ. ಆದರ ಜೊತೆ 50 ಓಡಾಟದ ಖರ್ಚಿತ್ತಂತೆ.
ಸಿನಿಮಾ ಲೋಕದಲ್ಲಿ ಅವಕಾಶಗಳು ಸಿಗಬೇಕು ಅಂದ್ರೆ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಲೋಕೇಶ್ ಬಸವಟ್ಟಿ ಹೆಸರಿನಿಂದ ಆರ್ವ ಎಂದು ಮಾಡಿಕೊಂಡರು.
'ಅಯ್ಯೋ..ಹೆಸರು ಬದಲಾಯಿಸಿಕೊಂಡು ಬೈಯಿಸಿಕೊಂಡಿದ್ದು ಎಲ್ಲಾ ಆಯ್ತು. ನ್ಯೂಮರಾಲಜಿ ಜ್ಯೋತಿಷ್ಯವನ್ನು ನಂಬುತ್ತೇನೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಲೋಕೇಶ್ ಮಾತನಾಡಿದ್ದಾರೆ.
'ಯಾರೋ ಒಬ್ಬರು ಹೆದರು ಬದಲಾಯಿಸಿಕೊಳ್ಳಿ ಎಂದರು. ಅರ್ವ ಅಂತ ಹೆಸರು ಬದಲಾಯಿಸಿಕೊಂಡೆ ಆದರೆ ಅದರಿಂದ ಏನೂ ಉಪಯೋಗವಿಲ್ಲ' ಎಂದು ಲೋಕೇಶ್ ಹೇಳಿದ್ದಾರೆ.
'ತಂದೆ ತಾಯಿ ಇಟ್ಟ ಹೆಸರೇ ಶಾಶ್ವತ. ಹೀಗಾಗಿ ಮತ್ತೆ ಲೋಕೇಶ್ ಬಸವಟ್ಟಿ (Lokesh Basavatti) ಅಂತಲೇ ಇಟ್ಟುಕೊಂಡೆ' ಎಂದಿದ್ದಾರೆ ಲೋಕೇಶ್.