Bigg Boss 12: ನುಡಿದಂತೆ ನಡೆಯುತ್ತಾರಾ ವರ್ತೂರು ಸಂತೋಷ್? ರನ್ನರ್ ಅಪ್ ರಕ್ಷಿತಾಗೆ ಸಿಗುತ್ತಾ 2 ಲಕ್ಷ?

Published : Jan 19, 2026, 12:34 PM IST

ಬಿಗ್ ಬಾಸ್ ಕನ್ನಡ ಸೀಸನ್ 12ರ ಕಪ್ ಗಿಲ್ಲಿ ಕೈಸೇರಿದೆ. ಫಸ್ಟ್ ರನ್ನರ್ ಅಪ್ ಆಗಿ ರಕ್ಷಿತಾ ಸಂಭ್ರಮಿಸಿದ್ರೆ ಎರಡನೇ ರನ್ನರ್ ಅಪ್ ಆಗಿ ಅಶ್ವಿನಿ ಗೌಡ ತೃಪ್ತಿ ಪಟ್ಕೊಂಡಿದ್ದಾರೆ. ಬಿಗ್ ಬಾಸ್ ಆರಂಭದಲ್ಲಿ ರನ್ನರ್ ಅಪ್ ಗೆ 10 ಲಕ್ಷ ಕೊಡ್ತೇನೆ ಎಂದಿದ್ದ ವರ್ತೂರು ಸಂತೋಷ್ ಬಗ್ಗೆ ಈಗ ಚರ್ಚೆ ಆಗ್ತಿದೆ.

PREV
15
ರನ್ನರ್ ಅಪ್ ಗೆ ವರ್ತೂರು ಬಹುಮಾನ?

ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್, ಬಿಗ್ ಬಾಸ್ ಆರಂಭದಲ್ಲಿಯೇ ಈ ಬಾರಿಯ ರನ್ನರ್ ಅಪ್ ಗೆ ಬಹುಮಾನ ನೀಡೋದಾಗಿ ಘೋಷಣೆ ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ರಿಸಲ್ಟ್ ಅನೌನ್ಸ್ ಆಗಿದೆ. ಹಾಗಾಗಿ ಈಗ ಎಲ್ಲರ ಕಣ್ಣು ವರ್ತೂರು ಸಂತೋಷ್ ಮೇಲಿದೆ.

25
10 ಲಕ್ಷ ಬಹುಮಾನ ಘೋಷಣೆ

ವರ್ತೂರು ಸಂತೋಷ್, ಬಿಗ್ ಬಾಸ್ 12ರ ಶೋ ಶುರುವಾಗಿ ಒಂದು ತಿಂಗಳ ನಂತ್ರ ರನ್ನರ್ ಅಪ್ ಗೆ 10 ಲಕ್ಷ ನೀಡೋದಾಗಿ ಹೇಳಿಕೆ ನೀಡಿದ್ದರು. ಆದ್ರೆ ಒಂದು ಬೇಡಿಕೆ ಇಟ್ಟಿದ್ದರು. ಹಳ್ಳಿಕಾರ್ ಹಸುವನ್ನು ಬಿಗ್ ಬಾಸ್ ವೇದಿಕೆ ಮೇಲೆ ಕರೆತರುವ ಅವಕಾಶ ಸಿಗಬೇಕು, ಇಡೀ ಕರ್ನಾಟಕದ ಜನತೆಗೆ ಹಳ್ಳಿಕಾರ್ ಹಸುವನ್ನು ಪರಿಚಯಿಸಬೇಕು ಅಂತ ವರ್ತೂರ್ ಹೇಳಿದ್ದರು. ಆದ್ರೆ ಕಲರ್ಸ್ ಕನ್ನಡ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

35
ಬದಲಾಗಿದ್ದ ಬಹುಮಾನದ ಮೊತ್ತ

ಕಲರ್ಸ್ ಕನ್ನಡ, ವರ್ತೂರು ಸಂತೋಷ್ ಬೇಡಿಕೆಯನ್ನು ನಿರಾಕರಿಸಿತ್ತು. ಹಾಗಾಗಿ ವರ್ತೂರು ತಮ್ಮ ಬಹುಮಾನದ ಮೊತ್ತವನ್ನು 10 ಲಕ್ಷದಿಂದ 2 ಲಕ್ಷಕ್ಕೆ ಇಳಿಸಿದ್ದರು. ಈ ಬಾರಿ ರನ್ನರ್ ಅಪ್ ಗೆ ಎರಡು ಲಕ್ಷ ನೀಡ್ತೇನೆ, ಮುಂದಿನ ಬಾರಿ 10 ಲಕ್ಷ ನೀಡ್ತೇನೆ ಎಂದಿದ್ದರು.

45
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಈಗಾಗಲೇ ರನ್ನರ್ ಅಪ್ ಘೋಷಣೆಯಾಗಿದೆ. ಮೊದಲ ರನ್ನರ್ ಅಪ್ ರಕ್ಷಿತಾ ಆದ್ರೆ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ. ವರ್ತೂರು ತಮ್ಮ ಒಂದು ವಿಡಿಯೋದಲ್ಲಿ ಎರಡನೇ ರನ್ನರ್ ಅಪ್ ಅಂತ ಹೇಳಿದ್ದರು. ಈಗ ಎರಡನೇ ಅಂದ್ರೆ ಅಶ್ವಿನಿ ಗೌಡಗೆ 2 ಲಕ್ಷ ಸಿಗ್ಬೇಕು. ಅದೇ ರನ್ನರ್ ಅಪ್ ಅಂತಾದ್ರೆ ರಕ್ಷಿತಾಗೆ ಸಿಗ್ಬೇಕು. ವರ್ತೂರು ಯಾರಿಗೆ ನಗದು ನೀಡ್ತಾರೆ, ಯಾವಾಗ ನೀಡ್ತಾರೆ ಎನ್ನುವ ಕುತೂಹಲ ಫ್ಯಾನ್ಸ್ ಗಿದೆ. ವರ್ತೂರ್ ಹೇಳಿದಂತೆ ನಡೆದುಕೊಳ್ತಾರೆ, ಅವರು ಹಣ ನೀಡೇ ನೀಡ್ತಾರೆ ಎನ್ನುವ ಭರವಸೆಯನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

55
ವರ್ತೂರು ಸಂತೋಷ್ ಗೆ ಅನ್ಯಾಯ?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಅವರಿಗೆ ನಿಮ್ಮ ಆಸೆ ಏನು ಅಂತ ಕೇಳಲಾಗಿತ್ತು. ಈ ವೇಳೆ ಬಿಗ್ ಬಾಸ್ ನೋಡ್ಬೇಕು ಅಂತ ವರ್ತೂರು ಹೇಳಿದ್ದರು. ಆದ್ರೆ ಆಗ ಅದು ಸಾಧ್ಯವಾಗಿರಲಿಲ್ಲ. ಈಗ ಹಳ್ಳಿಕಾರ್ ಹಸು, ಬಿಗ್ ಬಾಸ್ ಮನೆಗೆ ಬರಲಿಲ್ಲ. ಬಿಗ್ ಬಾಸ್ ವರ್ತೂರು ಎರಡೂ ಆಸೆಯನ್ನು ಈಡೇರಿಸಲಿಲ್ಲ ಎನ್ನುವ ನೋವು ಅವರ ಅಭಿಮಾನಿಗಳಿಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories