ಬಿಗ್‌ಬಾಸ್ ಕನ್ನಡ 12ರ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ, ಇನ್‌ಸ್ಟಾಗ್ರಾಂ ಲೈವ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ತಾನು ಸೈಲೆಂಟ್ ಆಗಿ ಹೋಗುವುದಿಲ್ಲ, ಬದಲಿಗೆ ವೈಲೆಂಟ್ ಆಗಿ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳುವುದಾಗಿ ಹೇಳಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ತೆರೆ ಬಿದ್ದಿದ್ದು, ದೊಡ್ಡ ಅರಮನೆ ಖಾಲಿ ಖಾಲಿಯಾಗಿದೆ. ಸೀಸನ್ 12 ಟ್ರೋಫಿಯೊಂದಿಗೆ ಗಿಲ್ಲಿ ನಟ ವಿಜಯಮಾಲೆಯೊಂದಿಗೆ ಹೊರ ಬಂದಿದ್ದಾರೆ. ಇದೀಗ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
25
ಲೈವ್ ಬಂದ್ರು ರಾಜಮಾತೆ
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದು ಮಾತನಾಡಿರುವ ಅಶ್ವಿನಿ ಗೌಡ, ಸೈಲೆಂಟ್ ಆಗಿ ಹೋಗಿದ್ದೇನೆ ಅಂತ ಅಂದುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ವೈಲೆಂಟ್ ಆಗಿ ಬರುತ್ತೇನೆ. ನನಗಾಗಿ ಮತ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು. ಗುರುಗಳಾದ ನಾರಾಯಣ ಗೌಡರಿಗೂ ಅಶ್ವಿನಿ ಗೌಡ ಧನ್ಯವಾದಗಳನ್ನು ತಿಳಿಸಿದರು.
35
ಕಾಣುವ ದೇವರು ಬಿಗ್‌ಬಾಸ್
ಇದೇ ವೇಳೆ ಬಿಗ್‌ಬಾಸ್ ಮನೆಯಲ್ಲಿ ಕಾಣದ ದೇವರು ಅಂದ್ರೆ ಬಿಗ್‌ಬಾಸ್, ಕಾಣುವ ದೇವರು ಅಂದ್ರೆ ಸುದೀಪ್. ಈ ಕಾರ್ಯಕ್ರಮದ ಬಳಿಕ ನಾನು ಸುದೀಪ್ ಅವರನ್ನು ಸಹ ಗುರುಗಳಾಗಿ ಸ್ವೀಕರಿಸಿದ್ದೇನೆ. ರಿಯಾಲಿಟಿ ಶೋನಲ್ಲಿ ನಮ್ಮ ತಪ್ಪುಗಳನ್ನು ಸರಿ ಮಾಡಿದ ಸುದೀಪ್ ಅವರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನನ್ನ ಹೊಸ ಪ್ರಾಜೆಕ್ಟ್ ಜೊತೆ ಬರುತ್ತೇನೆ ಎಂದು ತಿಳಿಸಿದರ.
ಲೈವ್‌ನಲ್ಲಿ ಮುಂದುವರಿದು ಮಾತನಾಡಿದ ಅಶ್ವಿನಿ ಗೌಡ, ನನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳದಿದ್ರೆ ತಪ್ಪಾಗುತ್ತದೆ. ಈ ಕಾರಣದಿಂದ ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಶೀಘ್ರದಲ್ಲಿಯೇ ನಿಮ್ಮಲ್ಲರನ್ನು ಭೇಟಿಯಾಗುತ್ತೇನೆ. ನಿಮ್ಮ ಪ್ರೀತಿಯಿಂದಲೇ ನಾನು ಫಿನಾಲೆವರೆಗೂ ಬಂದಿದ್ದೇನೆ ಎಂದು ಹೇಳಿದರು.
ಟ್ರೋಫಿ ಇರೋದು ಒಂದೇ. ಹಾಗಾಗಿ ಟ್ರೋಫಿ ಒಬ್ಬರಿಗೆ ಮಾತ್ರ ಸಿಕ್ಕಿದೆ. ನನಗೆ ಟ್ರೋಫಿ ಸಿಗದೇ ಇರಬಹುದು. ನಿಮ್ಮೆಲ್ಲರ ಪ್ರೀತಿಯಿಂದಲೇ ಫಿನಾಲೆವರೆಗೂ ಬಂದಿದ್ದೇನೆ. ಇಷ್ಟು ದೊಡ್ಡ ಪ್ರೀತಿ ಸಿಕ್ಕಿರೋದು ನನ್ನ ಗೆಲುವು ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.