ಏಕಕಾಲಕ್ಕೆ ಎರಡು ಕನ್ನಡ ಧಾರಾವಾಹಿಗಳಿಂದ ಹೊರಬರ್ತಾರಾ ಈ ನಟಿ? ಅನಿವಾರ್ಯತೆ ಇದೆ!

Published : Feb 02, 2026, 11:44 AM IST

Kannada Serial Actress: ಓರ್ವ ನಟಿಯೋರ್ವರು ಏಕಕಾಲಕ್ಕೆ ಎರಡು ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈಗ ಎರಡೂ ಧಾರಾವಾಹಿಯಿಂದ ಹೊರಬರುವ ಅಥವಾ ಬ್ರೇಕ್‌ ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

PREV
15
ತಾತ್ಕಾಲಿಕ್‌ ಬ್ರೇಕ್

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಮೂಲಕ ಜನಪ್ರಿಯತೆ ಪಡೆದಿರುವ ನಟಿ ಮಾನಸಾ ಮನೋಹರ್ ಅವರು ಶೀಘ್ರದಲ್ಲೇ ನಟನೆಯಿಂದ ತಾತ್ಕಾಲಿಕ ವಿರಾಮ ಪಡೆಯುವ ಸಾಧ್ಯತೆ ಹೆಚ್ಚಿದೆ.

25
ಮಗುವಿನ ಕಡೆ ಗಮನ ಕೊಡಬೇಕು

ಮಾನಸಾ ಮನೋಹರ್‌ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಗರ್ಭಿಣಿಯಾಗಿದ್ದು, ಮಗುವಿನ ಆರೋಗ್ಯ, ಅವರ ಆರೋಗ್ಯದ ಕಡೆಗೆ ಗಮನ ಕೊಡಬೇಕಿದೆ. ಮಗುವಿನ ಜೊತೆ ಸಮಯ ಕಳೆಯಲು, ಅವರು ಸ್ವಲ್ಪ ದಿನಗಳ ಕಾಲ ಶೂಟಿಂಗ್‌ನಿಂದ ದೂರ ಸರಿಯಲಿದ್ದಾರೆ ಎನ್ನಲಾಗ್ತಿದೆ.

35
'ನೀಲು' ಪಾತ್ರದ ಅನಿವಾರ್ಯತೆ

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಮಾನಸಾ ಅವರು 'ನೀಲು' ಎಂಬ ನೆಗೆಟಿವ್ ಶೇಡ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ನೀಲು ಪಾತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಅದರ ಸುತ್ತ ಕತೆ ಸಾಗುತ್ತಿದೆ.

45
ನೀಲು ಪಾತ್ರ ಅಂತ್ಯ ಆಗಲಿದೆಯಾ?

ಮಾನಸಾ ಅವರು ಬ್ರೇಕ್‌ ತಗೊಳ್ಳಬೇಕಿದ್ದು, ಹೀಗಾಗಿ ಸ್ವಲ್ಪ ದಿನಗಳ ಕಾಲ ಪಾತ್ರ ಬಂದರೂ ಬರಬಹುದು, ಪಾತ್ರ ಅಂತ್ಯ ಮಾಡಲೂಬಹುದು. ಇದೇ ರೀತಿ 'ಶಾಂಭವಿ' ಧಾರಾವಾಹಿಯಲ್ಲೂ ಅವರ ಪಾತ್ರ ಪ್ರಮುಖವಾಗಿದೆ.

55
ಏನು ಮಾಡುತ್ತಾರೆ?

ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಕಲಾವಿದರು ತಂಡದಿಂದ ಹೊರಹೋದಾಗ ಬೇರೆಯವರನ್ನು ಕರೆತರುವುದು ಅಥವಾ ಪಾತ್ರ ಅಂತ್ಯ ಮಾಡುವುದೇ ಜಾಸ್ತಿ. ಈಗ ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories