ಗಿಲ್ಲಿ ಟ್ಯಾಟೂ ವಿವಾದ, ಅಭಿಮಾನಿಗಳ ಅತಿ ಪ್ರೀತಿ ಬಗ್ಗೆ ಕಾವ್ಯ ಹೇಳಿದ್ದೇನು?

Published : Feb 02, 2026, 10:36 AM IST

Bigg Boss contestant Kavya Shaiva : ಕಾವ್ಯ ಶೈವ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಅವರು, ಅಭಿಮಾನಿಗಳ ಟ್ಯಾಟೂ ಪ್ರೀತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 

PREV
16
ಅಭಿಮಾನಿಗಳ ಪ್ರೀತಿಗೆ ಋಣಿ

ಬಿಗ್ ಬಾಸ್ ಕಾವು ಅಲಿಯಾಸ್ ಕಾವ್ಯ ಅಭಿಮಾನಿಗಳ ಪ್ರೀತಿಗೆ ಋಣಿಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಇಷ್ಟೆಲ್ಲ ಪ್ರೀತಿ ಸಿಗುತ್ತೆ ಎನ್ನುವ ನಿರೀಕ್ಷೆಯನ್ನು ಕಾವ್ಯ ಮಾಡಿರಲಿಲ್ಲ. ಆದ್ರೆ ಬಿಗ್ ಬಾಸ್ ಮುಗಿದು ಎರಡು ವಾರವಾದ್ರೂ ಇನ್ನೂ ಕಾವ್ಯ ಹುಡುಕಿಕೊಂಡು ಫ್ಯಾನ್ಸ್ ಮನೆಗೆ ಬರ್ತಿದ್ದಾರೆ. ಕಾವ್ಯ ಸ್ವಭಾವ ಹೊಗಳ್ತಿದ್ದಾರೆ. ಇದು ಕಾವ್ಯ ಸಂತೋಷವನ್ನು ಡಬಲ್ ಮಾಡಿದೆ.

26
ಮಗಳಂತೆ ಕಾಣುವ ಫ್ಯಾನ್ಸ್

ಕಾವ್ಯ ಮನೆಗೆ ಬರುವ ಅನೇಕ ಪುರುಷರು, ತಮ್ಮ ಮಗಳನ್ನು ಕಾವ್ಯರಲ್ಲಿ ನೋಡ್ತಿದ್ದಾರೆ. ನನ್ನ ಮಗಳಂತೆ ಕಾಣ್ತೀರಾ ಎನ್ನುವ ಅನೇಕ ಫ್ಯಾನ್ಸ್, ಅವರಿಗೆ ಸೀರೆ, ಕುಂಕುಮ ನೀಡಿದ್ದಾರೆ. ಈ ಅಭಿಮಾನಕ್ಕೆ ನಾನು ಚಿರಋಣಿ ಅಂತ ಕಾವ್ಯ ಹೇಳಿದ್ದಾರೆ.

36
ಪಿಆರ್ ಓ ಇಲ್ಲದೆ ಪ್ರಸಿದ್ಧಿ

ಕಾವ್ಯ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಅನೇಕರು ಪಿಆರ್ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದರು. ಆದ್ರೆ ಕಾವ್ಯ ಅದಕ್ಕೆ ಮನಸ್ಸು ಮಾಡಿರಲಿಲ್ಲ. ಎಷ್ಟು ದಿನ ಆಗುತ್ತೋ ಅಷ್ಟು ದಿನ ಬಿಗ್ ಬಾಸ್ ನಲ್ಲಿ ಇದ್ದು ಬರ್ತೇನೆ ಅಂದ್ಕೊಂಡೇ ಹೋಗಿದ್ರು. ಆದ್ರೆ ಅಲ್ಲಿ ಆಗಿದ್ದು ಮ್ಯಾಜಿಕ್. ಕಾವ್ಯ ಪ್ರಸಿದ್ಧಿ ದಿನದಿಂದ ದಿನಕ್ಕೆ ಏರ್ತಾನೇ ಹೋಯ್ತು. ಪಿಆರ್ ಅವಶ್ಯಕತೆ ಕಾವ್ಯಗೆ ಬರಲಿಲ್ಲ. ಕಾವ್ಯ ಪರ ಅನೇಕರು ನಿಂತಿದ್ದರು. ಅವರ ವಿಡಿಯೋ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಮತ ಕೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಂಥ ಪ್ರಚಾರಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಅಷ್ಟೊಂದು ಸಮಯವನ್ನು ನನಗೆ ನೀಡಿದ ಫ್ಯಾನ್ಸ್ ಗೆ ನಾನು ಧನ್ಯವಾದ ಹೇಳ್ತೇನೆ ಅಂತ ಕಾವ್ಯ ಹೇಳಿದ್ದಾರೆ.

46
ಟ್ಯಾಟೂ ಬಗ್ಗೆ ಕಾವ್ಯ ಹೇಳಿದ್ದೇನು?

ಸದ್ಯ ಗಿಲ್ಲಿ ಟ್ಯಾಟೂ ವಿಚಾರ ಚರ್ಚೆಯಲ್ಲಿದೆ. ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗಿಲ್ಲಿ ಟ್ಯಾಟೂವನ್ನು ಅನೇಕ ಫ್ಯಾನ್ಸ್ ತಮ್ಮ ಮೈಮೇಲೆ ಹಾಕಿಸಿಕೊಂಡಿದ್ದಾರೆ. ಅದ್ರಲ್ಲಿ ಒಬ್ಬರು ಬಿಗ್ ಬಾಸ್ ಮನೆಗೂ ಬಂದಿದ್ರು. ಅಭಿಮಾನಿ ಕೈ ಮೇಲೆ ಟ್ಯಾಟೂ ನೋಡಿ ಗಿಲ್ಲಿ ಶಾಕ್ ಆಗಿದ್ರು. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಅವರನ್ನು ಭೇಟಿ ಮಾಡಿಲ್ಲ ಎನ್ನುವ ಆರೋಪವೊಂದಿದೆ. ಗಿಲ್ಲಿ ಇಷ್ಟು ದಿನವಾದ್ರೂ ತಮ್ಮನ್ನು ಭೇಟಿಯಾಗಿಲ್ಲ, ಅವರ ಟ್ಯಾಟೂ ಹಾಕಿಸಿಕೊಂಡು ತಪ್ಪು ಮಾಡ್ದೆ ಅಂತ ಫ್ಯಾನ್ಸ್ ಬೇಸರವ್ಯಕ್ತಪಡಿಸಿದ್ದರು. ಈ ಟ್ಯಾಟೂ ಬಗ್ಗೆ ಕಾವ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

56
ಟ್ಯಾಟೂ ಬೇಡ್ವೇಬೇಡ

ಅಭಿಮಾನ ಇರಲಿ ಆದ್ರೆ ಟ್ಯಾಟೂ ಬೇಡ ಅಂತ ಕಾವ್ಯ ಹೇಳಿದ್ದಾರೆ. ಟ್ಯಾಟೂವನ್ನು ನಾನು ಎಂದೂ ಪ್ರೋತ್ಸಾಹಿಸೋದಿಲ್ಲ. ಅಭಿಮಾನಿಗಳು ದೇಹದ ಮೇಲೆ ಟ್ಯಾಟೂ ಹಾಕಿಕೊಂಡ್ರೆ ಅದು ಪರ್ಮನೆಂಟ್ ಆಗಿರುತ್ತೆ. ಅದನ್ನು ತೆಗೆಯೋದು ಕಷ್ಟ. ಈ ಅಭಿಮಾನ ಬೇಡ. ನನ್ನನ್ನು ಪ್ರೀತಿಯಿಂದ ಮಾತನಾಡಿಸಿ. ಪೋಸ್ಟರ್, ಆಟೋ ಸ್ಟಿಕ್ಕರ್ ಎಲ್ಲ ನೋಡಿದ್ರೆ ನನಗೆ ಖುಷಿಯಾಗ್ತಿದೆ. ನನ್ನನ್ನು ಸಪೋರ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಯೂ ಅಂತ ಕಾವ್ಯ ಶೈವ ಹೇಳಿದ್ದಾರೆ.

66
ಬ್ಯುಸಿಯಾದ ಕಾವ್ಯ ಶೈವ

ಬಿಗ್ ಬಾಸ್ ಮನೆಯಿಂದ ಬಂದು ಇಷ್ಟು ದಿನವಾದ್ಮೇಲೆ ಕಾವ್ಯ ವಿಡಿಯೋ ಮಾಡಿದ್ದಾರೆ. ಅಭಿಮಾನಿಗಳು, ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿದ್ದಿದ್ದರಿಂದ ವಿಡಿಯೋ ಮಾಡಿ ಧನ್ಯವಾದ ಹೇಳಲು ಸಾಧ್ಯವಾಗ್ಲಿಲ್ಲ. ಕ್ಷಮಿಸಿ ಅಂತ ಕಾವ್ಯ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories