Jayashree Raj Bigg Boss: ನಟಿ ಜಯಶ್ರೀ ರಾಜ್ ಅವರು ತಮ್ಮ ಬದುಕಿನ ಅತ್ಯಂತ ಕಷ್ಟದ ಹಂತದಲ್ಲಿ 'ಬಿಗ್ ಬಾಸ್' ಮನೆ ಪ್ರವೇಶಿಸಿದ ಹಿಂದಿನ ಅಸಲಿ ಕಾರಣ ಹಾಗೂ ಆ ಸಂದರ್ಭದಲ್ಲಿ ತಮಗಿದ್ದ ಭಾವನಾತ್ಮಕ ಮನಸ್ಥಿತಿಯನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ ಅಸಲಿ ಕಾರಣ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮನೆಗೆ ಹೋಗಲು ಸ್ಪರ್ಧಿಗಳು ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಆದರೆ, ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಖ್ಯಾತ ನಟಿ ಜಯಶ್ರೀ ರಾಜ್ ಅವರು ತಮ್ಮ ಬದುಕಿನ ಅತ್ಯಂತ ಕರಾಳ ದಿನಗಳಲ್ಲೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು! ಹೌದು. ತಂದೆ ತೀರಿಕೊಂಡ ಕೇವಲ 15 ದಿನಗಳಲ್ಲೇ ತಾವು ಬಿಗ್ ಬಾಸ್ ಮನೆಗೆ ಹೋದ ಅಸಲಿ ಕಾರಣ ಮತ್ತು ಆ ಸಂದರ್ಭದಲ್ಲಿದ್ದ ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.
24
ಅಪ್ಪ ಹೋದ 15 ದಿನಕ್ಕೆ ಬಂದ ಆಫರ್
ಅಪ್ಪ ಹೋದ 15 ದಿನಕ್ಕೆ ಬಂದ ಆಫರ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಜಯಶ್ರೀ ರಾಜ್, "ಅಪ್ಪ ತೀರಿಕೊಂಡಾಗ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತೋಚದ ಪರಿಸ್ಥಿತಿಯಲ್ಲಿದ್ದೆ. ಅಪ್ಪ ಹೋಗಿ ಕೇವಲ 15 ದಿನಗಳಾಗಿದ್ದಾಗ ನನಗೆ ಬಿಗ್ ಬಾಸ್ ಶೋಗೆ ಬರುವಂತೆ ಆಫರ್ ಬಂತು. ಆ ದುಃಖದ ಸಮಯದಲ್ಲಿ ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋಗುವುದು ನನಗೆ ನಿಜಕ್ಕೂ ಕಷ್ಟವಾಗಿತ್ತು. ಆದರೆ ನನ್ನ ತಾಯಿ ತುಂಬಾ ಗಟ್ಟಿ ಮನಸ್ಸಿನವರು. 'ನೀನು ಹೋಗು, ಇಲ್ಲಿ ಎಲ್ಲವನ್ನೂ ನಾನು ಸಂಭಾಳಿಸಿಕೊಳ್ಳುತ್ತೇನೆ' ಎಂದು ಧೈರ್ಯ ತುಂಬಿ ಕಳುಹಿಸಿಕೊಟ್ಟರು," ಎಂದು ಹೇಳಿದ್ದಾರೆ.
34
"ನನ್ನನ್ನು ಯಾರೂ ಮಾತನಾಡಿಸಬಾರದು ಅಂತ ಅಲ್ಲಿಗೆ ಹೋದೆ"
“ನನ್ನನ್ನು ಯಾರೂ ಮಾತನಾಡಿಸಬಾರದು ಅಂತ ಅಲ್ಲಿಗೆ ಹೋದೆ” ಬಿಗ್ ಬಾಸ್ ಮನೆಗೆ ಹೋದ ಉದ್ದೇಶವನ್ನು ವಿವರಿಸಿದ ಅವರು, "ಆ ಸಮಯದಲ್ಲಿ ನನಗೆ ಯಾರಿಗೂ ಮುಖ ತೋರಿಸಲು ಇಷ್ಟವಿರಲಿಲ್ಲ. ಯಾರೂ ನನ್ನನ್ನು ಮಾತನಾಡಿಸಬಾರದು, ನನ್ನ ಬಗ್ಗೆ ಯಾರೂ ಏನನ್ನೂ ಕೇಳಬಾರದು ಅನ್ನೋ ಜಾಗಕ್ಕೆ ನಾನು ಹೋಗಬೇಕಿತ್ತು. ಅದೇ ಕಾರಣಕ್ಕಾಗಿ ಹೊರಜಗತ್ತಿನ ಸಂಪರ್ಕವೇ ಇಲ್ಲದ ಬಿಗ್ ಬಾಸ್ ಮನೆಗೆ ಹೋಗಲು ನಿರ್ಧರಿಸಿದೆ," ಎಂದು ತಮ್ಮ ಅಂದಿನ ನೋವಿನ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
“ಒಂದೂ ಎಪಿಸೋಡ್ ನೋಡಿರಲಿಲ್ಲ, ಕಾನ್ಸೆಪ್ಟೇ ಗೊತ್ತಿರಲಿಲ್ಲ!” ಶೋ ಬಗ್ಗೆ ತಮಗಿದ್ದ ಅರಿವಿನ ಬಗ್ಗೆ ಸ್ವತಃ ನಗುತ್ತಲೇ ಮಾತನಾಡಿದ ನಟಿ, "ನಿಜ ಹೇಳಬೇಕೆಂದರೆ ಅದಕ್ಕೂ ಮುಂಚೆ ಪ್ರತಿಯೊಂದು ಸೀಸನ್‌ನಲ್ಲೂ ನನ್ನನ್ನು ಕರೆದಿದ್ದರು. ಆದರೆ ನನಗೆ ಆ ಶೋ ಕನೆಕ್ಟ್ ಆಗುತ್ತಿರಲಿಲ್ಲ. ನಾನು ಬಿಗ್ ಬಾಸ್‌ನ ಒಂದೇ ಒಂದು ಎಪಿಸೋಡ್ ಕೂಡ ನೋಡಿರಲಿಲ್ಲ, ಇವತ್ತಿನವರೆಗೂ ನನ್ನ ಎಪಿಸೋಡ್‌ಗಳನ್ನು ಕೂಡ ನಾನು ನೋಡಿಲ್ಲ! ಬಹುಶಃ ಶೋನ ಕಾನ್ಸೆಪ್ಟೇ ಗೊತ್ತಿಲ್ಲದೆ, ಪೂರ್ತಿ ಬ್ಲೈಂಡ್ ಆಗಿ, ಪೆದ್ದಿಯಂತೆ ಬಿಗ್ ಬಾಸ್ ಮನೆಗೆ ಹೋದ ಏಕೈಕ ವ್ಯಕ್ತಿ ನಾನೇ ಇರಬೇಕು," ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.