ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ದೀಪಿಕಾ ಅವರ ಅದಲು-ಬದಲು ಆಟ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೈದೇವ್ ಮತ್ತು ಶಕುಂತಲಾ ಅವರ ಪ್ಲಾನ್ ತಿಳಿಯಲು ಭೂಮಿಕಾ ದೀಪಿಕಾಳಾಗಿ ದಿವಾನ್ ಮನೆಗೆ ಹೋಗುತ್ತಿದ್ದಾಳೆ. ಇವರಿಬ್ಬರು ಅವಳಿ-ಜವಳಿ ಎಂಬ ಸತ್ಯ ತಿಳಿದು ಮಂದಾಕಿನಿ ಕಣ್ಣೀರು ಹಾಕುತ್ತಿದ್ದಾಳೆ.
ಅಮೃತಧಾರೆ ಸೀರಿಯಲ್ ನಿರ್ದೇಶಕರ ಅದಲು-ಬದಲು ಕಥೆಗೆ ವೀಕ್ಷಕರು ಫುಲ್ ಕಂಗಾಲು ಆಗಿದ್ದಾರೆ. ತದ್ರೂಪಿ ಭೂಮಿಕಾ-ದೀಪಿಕಾ ಆಟವನ್ನೇ ಬದಲಿಸಲು ನಿರ್ದೇಶಕರು ಮುಂದಾಗಿದ್ದಾರೆ. ಈಗಾಗಲೇ ಕಥೆಯಲ್ಲಾಗುತ್ತಿರುವ ಬದಲಾವಣೆಗಳಿಂದ ಗೊಂದಲದಲ್ಲಿರುವ ವೀಕ್ಷಕರ ತಲೆಗೆ ಹೊಸ ಹುಳುವೊಂದನ್ನು ಬಿಟ್ಟಿದ್ದಾರೆ.
24
ದೀಪಿಕಾ ಸ್ಥಾನಕ್ಕೆ ಭೂಮಿಕಾ
ಭೂಮಿಕಾಳನ್ನು ಆಸ್ಪತ್ರೆಗೆ ಕಳುಹಿಸಿ ಆ ಸ್ಥಾನಕ್ಕೆ ದೀಪಿಕಾಳನ್ನು ಕರೆದುಕೊಂಡು ಬರಲಾಗಿತ್ತು. ಜೈದೇವ್ ಜೊತೆ ಶಕುಂತಲಾ ಸೇರಿಕೊಂಡಿರುವ ಮಹಾಸತ್ಯ ಮಲ್ಲಿ ಮತ್ತು ಭೂಮಿಕಾಗೆ ಗೊತ್ತಾಗಿದೆ. ಹಾಗಾಗಿ ಜೈದೇವ್ ಮತ್ತು ಶಕುಂತಲಾ ಅವರ ಮುಂದಿನ ಪ್ಲಾನ್ ಏನು ಎಂಬುದನ್ನು ತಿಳಿದುಕೊಳ್ಳಲು ಭೂಮಿಕಾ ಹೊಸ ಯೋಜನೆಯೊಂದನ್ನು ಹಾಕೊಂಡಿದ್ದಾಳೆ.
34
ಅದಲು-ಬದಲು ಆಟ
ಇದೀಗ ದಿವಾನ್ ಮನೆಯಲ್ಲಿರುವ ದೀಪಿಕಾಳನ್ನು ಹೊರಗೆ ತಂದು ಆ ಸ್ಥಾನಕ್ಕೆ ಭೂಮಿಕಾ ಹೊರಟಿದ್ದಾಳೆ. ಜೈದೇವ್ ಮತ್ತು ಶಕುಂತಲಾ ಮುಂದೆ ದೀಪಿಕಾಳಾಗಿ ಭೂಮಿಕಾ ಹೊರಟಿದ್ದಾಳೆ. ಈಗ ಇವರಿಬ್ಬರ ಅದಲು-ಬದಲು ಆಟ ನೋಡಿ ವೀಕ್ಷಕರೇ ಕನ್ಫ್ಯೂಸ್ ಆಗುತ್ತಿದ್ದಾರೆ.
ಮತ್ತೊಂದೆಡೆ ಭೂಮಿಕಾ ಮತ್ತು ದೀಪಿಕಾ ಅವಳಿ-ಜವಳಿ ಅನ್ನೋ ಸತ್ಯ ವೀಕ್ಷಕರಿಗೆ ಗೊತ್ತಾಗಿದ್ದು, ಸೊಸೆಗೆ ಅವಳಿ ಮಕ್ಕಳು ಎಂಬ ಸತ್ಯ ತಿಳಿದ ಮಂದಾಕಿನಿ ತನ್ನ ಒಡಲಿನ ಸತ್ಯವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.