ಬಿಗ್‌ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಸಂಚಿಕೆಯಲ್ಲಿ ಸ್ಪರ್ಧಿಗಳ ನಿಯಮ ಉಲ್ಲಂಘನೆ ಮತ್ತು ಅವಾಚ್ಯ ಪದಗಳ ಬಳಕೆಯ ಬಗ್ಗೆ ಸುದೀಪ್ ಗಂಭೀರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಗಿಡ ಮತ್ತು ಮನೆಯ ಉದಾಹರಣೆ ನೀಡಿರುವ ಅವರು, ಚರ್ಚೆಗಿಂತ ಕಠಿಣ ನಿರ್ಧಾರದ ಸುಳಿವು ನೀಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 13ರ ಈ ವಾರದ ವೀಕೆಂಡ್ ಸಂಚಿಕೆಗಾಗಿ ಇಡೀ ಕರುನಾಡು ಕಾಯುತ್ತಿದೆ. ಈ ವಾರದ ಮನೆಯಲ್ಲಿ ನಡೆದ ಘಟನೆಗಳನ್ನು ನೋಡಿದ್ದ ವೀಕ್ಷಕರ ಯಾರಿಗೆ ಕ್ಲಾಸ್ ಎಂಬುದರ ಬಗ್ಗೆ ಕುತೂಹಲ ಹೊಂದಿದ್ದಾರೆ. ಆದ್ರೆ ಬಿಡುಗಡೆಯಾದ ಪ್ರೋಮೋದ ಪ್ರಕಾರ, ಸುದೀಪ್ ಈ ಕುತೂಹಲಕ್ಕೆ ಮೆಗಾ ಟ್ವಿಸ್ಟ್ ನೀಡಿದ್ದಾರೆ.
25
ನಿರ್ಧಾರ ತೆಗೆದುಕೊಳ್ಳುವ ಸಮಯ
ಸ್ಪರ್ಧಿಗಳು ಆಟವಾಡುವ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಬಿಗ್‌ಬಾಸ್ ಮನೆಗೆ ಅವಮಾನಿಸಿದ್ದಾರೆ. ಸದ್ಯ ಈ ವಿಷಯವನ್ನು ಸುದೀಪ್ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ. ಹಾಗಾಗಿ ಸುದೀಪ್, ಇದು ನಿರ್ಧಾರ ತೆಗೆದುಕೊಳ್ಳುವ ಸಮಯ ಎಂದಿದ್ದಾರೆ.
35
ಏನು ನಿರ್ಧಾರ?
ನಾವು ವಾಸ ಮಾಡುವ ಚೆನ್ನಾಗಿರಲಿ ಎಂದು ಒಂದು ಗಿಡವನ್ನು ತಂದಿಡುತ್ತವೆ. ಆದ್ರೆ ಈ ಗಿಡ ಅಡ್ಡಾದಿಡ್ಡಿಯಾಗಿ ಬೆಳೆದು ಗೋಡೆಯನ್ನೇ ಒಡೆಯುವ ಹಂತಕ್ಕೆ ಹೋದ್ರೆ? ಈಗ ನಮ್ಮ ಮುಂದೆ ಬರುವ ಪ್ರಶ್ನೆ ಗಿಡನಾ ಅಥವಾ ಮನೆನಾ ಎಂದು ಬರುತ್ತದೆ ಎಂದು ಸುದೀಪ್ ಹೇಳಿದ್ದಾರೆ. ಈ ವಾರ ಚರ್ಚೆಗಿಂತ ನಿರ್ಧಾರ ಎಂದಿದ್ದಾರೆ.
ಅವಾಚ್ಯ ಪದಗಳ ಬಳಕೆಯಿಂದ ಬಿಗ್‌ಬಾಸ್ ಮನೆ ಸಂಪೂರ್ಣವಾಗಿ ಪ್ರಕ್ಷುಬ್ದವಾಗಿದೆ. ಸ್ಪರ್ಧಿಗಳಿಂದ ಮನೆಗೆ ಧಕ್ಕೆಯುಂಟಾಗಿದ್ದರಿಂದ ಬಿಗ್‌ಬಾಸ್ ಕೋಪಗೊಂಡಿದ್ದು, ನಿಯಮಗಳ ಉಲ್ಲಂಘನೆ ಮಾಡಿರೋ ಸ್ಪರ್ಧಿಗಳು ಔಟ್ ಆಗ್ತಾರಾ? ಅಥವಾ ಯಾವುದಾದ್ರೂ ಕಠಿಣ ಶಿಕ್ಷೆ ನೀಡ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
55
ಸ್ಪರ್ಧಿಗಳ ವಾದ
ಇನ್ನು ಮನೆಯಲ್ಲಿ ಇಷ್ಟೆಲ್ಲಾ ಜಗಳ ನಡೆದ್ರೂ ಸ್ಪರ್ಧಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಹ ಸ್ಪರ್ಧಿಗಳು ಘಟನೆ ಬಗ್ಗೆ ವಿವರಿಸಿದರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಸುದೀಪ್ ಮುಂದೆ ತಮ್ಮ ಅಭಿಪ್ರಾಯಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.