Amruthadhaare: ಗಂಡನ ಜೊತೆ ಬಾಳಲು ಭೂಮಿಕಾ ನಿರ್ಧಾರ: ಗೌತಮ್‌ಗಾಗಿ ಮಮ್ಮಲ ಮರುಗಿದ ವೀಕ್ಷಕರು

Published : Jan 17, 2026, 02:26 PM IST

ಐದು ವರ್ಷಗಳಿಂದ ದೂರವಿದ್ದ ಗೌತಮ್ ಮತ್ತು ಭೂಮಿಕಾ ಇದೀಗ ಒಂದಾಗುವ ಕಾಲ ಸನ್ನಿಹಿತವಾಗಿದೆ. ವಠಾರಕ್ಕೆ ಬಂದಿರುವ ತಂದೆ ಸದಾಶಿವ ಅವರ ಮಾತಿಗೆ ಒಪ್ಪಿ, ಭೂಮಿಕಾ ಮತ್ತೆ ಗೌತಮ್ ಜೊತೆ ಜೀವನ ನಡೆಸಲು ಮುಂದಾಗಿದ್ದಾಳೆ. ಈ ಪ್ರೋಮೋ ನೋಡಿ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

PREV
16
ಒಂದೇ ವಠಾರ

ಶಕುಂತಲಾ ಭಯ ಸೇರಿದಂತೆ ಹಲವು ಕಾರಣಗಳಿಂದ ಗಂಡನಿಂದ ಭೂಮಿಕಾ ದೂರವಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಗೌತಮ್ ಮಾತ್ರವಲ್ಲ ಪೋಷಕರಿಂದಲೂ ಭೂಮಿಕಾ ದೂರವಾಗಿದ್ದಳು. ಸದ್ಯ ಗೌತಮ್ ಮತ್ತು ಭೂಮಿಕಾ ಒಂದೇ ವಠಾರದಲ್ಲಿದ್ರೂ ಇಬ್ಬರು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು. ಇದೀಗ ಇಬ್ಬರು ಒಂದಾಗುವ ಕಾಲ ಸನ್ನಿಹಿತವಾಗಿದೆ.

26
ವಠಾರಕ್ಕೆ ಬಂದಿರುವ ಸದಾಶಿವ

ಮಿಂಚು ಮತ್ತು ಅಪ್ಪು ಜೊತೆ ವಠಾರಕ್ಕೆ ಬಂದಿರುವ ಸದಾಶಿವ, ಮಗಳು ಭೂಮಿಕಾಳನ್ನು ನೋಡಿ ಭಾವುಕರಾಗಿದ್ದಾರೆ. ಹಾಗೆಯೇ ಅಪ್ಪು ತನ್ನ ಮೊಮ್ಮಗ ಎಂಬ ಸತ್ಯ ತಿಳಿದು ಸದಾಶಿವ ಖುಷಿಯಾಗಿದ್ದಾರೆ. ಈ ಹಿಂದೆಯೇ ಅಜ್ಜ-ಅಜ್ಜಿಯೊಂದಿಗೆ ಅಪ್ಪು ಸಮಯ ಕಳೆಯುವಂತೆ ಮಲ್ಲಿ ಪ್ಲಾನ್ ಮಾಡಿದ್ದಳು. ಇತ್ತ ಅಪ್ಪುಗೆ ಸಹ ಗೌತಮ್ ತನ್ನ ತಂದೆ ಎಂಬ ಸತ್ಯ ಗೊತ್ತಾಗಿದೆ. ಆದ್ರೆ ಅಮ್ಮನ ಒಪ್ಪಿಗೆಗಾಗಿ ಅಪ್ಪು ಕಾಯ್ತಿದ್ದಾನೆ.

36
ಭೂಮಿಕಾ ಮತ್ತು ಗೌತಮ್

ಕಳೆದ ಐದು ವರ್ಷಗಳಿಂದ ಭೂಮಿಕಾ ಮತ್ತು ಗೌತಮ್ ಪ್ರತ್ಯೇಕವಾಗಿ ವಾಸವಾಗಿದ್ದರು. ಪತ್ನಿ ಮತ್ತು ಮಗನೊಂದಿಗೆ ಜೀವನ ನಡೆಸಬೇಕೆಂದು ಗೌತಮ್ ಹಂಬಲಿಸುತ್ತಿದ್ದಾನೆ. ಎಷ್ಟೇ ಮನವಿ ಮಾಡಿಕೊಂಡ್ರೂ ಭೂಮಿಕಾ ಮಾತ್ರ ಒಪ್ಪಿರಲಿಲ್ಲ. ಇದರಿಂದ ಎದುರಿನ ಮನೆಯಲ್ಲಿಯೇ ಗೌತಮ್ ವಾಸವಾಗಿದ್ದಾನೆ. ಈ ಹಿಂದೆ ಗೌತಮ್ ತಾಯಿ, ಗೆಳೆಯ ಆನಂದ್ ಹೇಳಿದ್ರೂ ಭೂಮಿಕಾ ಒಪ್ಪಿಕೊಂಡಿರಲಿಲ್ಲ

46
ಭೂಮಿಕಾ ಖುಷಿ

ಇದೀಗ ವಠಾರಕ್ಕೆ ಬಂದಿರುವ ತಂದೆಯನ್ನು ನೋಡಿದ ಭೂಮಿಕಾ ಖುಷಿಯಿಂದ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾಳೆ. ನಿನಗೆ ಗೌತಮ್ ಕಾಯುತ್ತಿದ್ದಾನೆ. ಗೌತಮ್ ಜೊತೆ ನಿನ್ನ ಜೀವನ ಸಾಗಬೇಕು ಎಂದು ಸಲಹೆ ನೀಡಿದ್ದಾರೆ. ಅಂತಿಮವಾಗಿ ತಂದೆಯ ಮಾತನ್ನು ಒಪ್ಪಿರುವ ಗೌತಮ್‌ ಜೊತೆ ಜೀವನ ನಡೆಸಲು ಭೂಮಿಕಾ ಮುಂದಾಗಿದ್ದಾಳೆ.

56
ಪ್ರೋಮೋ

ಈ ಪ್ರೋಮೋ ನೋಡಿದ ನೆಟ್ಟಿಗರು, ಗೌತಮ್ ಪರಿಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ಭೂಮಿಕಾ ಮತ್ತೆ ಗಂಡನ ಬಳಿಗೆ ಬರುತ್ತಿರೋದು ಸಂತೋಷದ ವಿಷಯ. ಆದ್ರೆ ಪಾಪ ಗೌತಮ್, ತನ್ನದ್ಯಾವುದೇ ತಪ್ಪಿಲ್ಲದಿದ್ರೂ ಐದು ವರ್ಷ ಒಂಟಿಯಾಗಿ ಜೀವನ ಕಳೆಯುವಂತಾಗಿದೆ. ಈಗಲಾದ್ರೂ ಇಬ್ಬರು ಸೇರುತ್ತಿರೋದಕ್ಕೆ ಸಂತಸವಾಗುತ್ತಿದೆ ಎಂದು ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

66
ಅಮೃತಧಾರೆ ಸೀರಿಯಲ್‌

ಮತ್ತೊಂದೆಡೆ ಅಮೃತಧಾರೆ ಸೀರಿಯಲ್‌ನನ್ನು ಕನ್ನಡದ ಮನೆದೇವ್ರು ಸಿನಿಮಾ ಕಥೆಗೆ ಹೋಲಿಕೆ ಮಾಡಲಾಗುತ್ತದೆ. ಈ ಹಿಂದೆ ಕೆಲವು ದೃಶ್ಯಗಳನ್ನು ಸೂರ್ಯವಂಶ ಸಿನಿಮಾದ ರೀತಿಯಲ್ಲಿ ತೋರಿಸಲಾಗಿತ್ತು. ಗೌತಮ್-ಭೂಮಿಕಾ ಒಂದಾಗುವ ಪ್ರೋಮೋಗೆ, ಈ ದೃಶ್ಯ ಸೀರಿಯಲ್‌ನಲ್ಲಿ ನೋಡಲು ವರ್ಷ ಕಾಯಬೇಕು. ಈ ಸಮಯದಲ್ಲಿ ನಿರ್ದೇಶಕರು ಮತ್ತೆ ಏನಾದ್ರೂ ಟ್ವಿಸ್ಟ್ ಕೊಡಬಹುದು ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories