ಆಸ್ಪತ್ರೆ ದಾಖಲಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್

Published : Jan 17, 2026, 02:59 PM IST

ಆಸ್ಪತ್ರೆ ದಾಖಲಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕಣ್ಣಿನ ಸಮಸ್ಯೆಯಿಂದ ಬಿಗ್ ಬಾಸ್ ಖ್ಯಾತಿಯ ನಿಕ್ಕಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ನಿಕ್ಕಿ ಆರೋಗ್ಯ ಹೇಗಿದೆ? ಈ ಕುರಿತು ನಿಕ್ಕಿ ಬಾಯ್‌ಫ್ರೆಂಡ್ ಮಾಹಿತಿ ನೀಡಿದ್ದಾರೆ.

PREV
16
ಆಸ್ಪತ್ರೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿಗೆ ಚಿಕಿತ್ಸೆ

ಕರ್ನಾಟಕದಲ್ಲಿ ಬಿಗ್ ಬಾಸ್ ಕಾವು ಪಡೆದುಕೊಳ್ಳುತ್ತಿದೆ. 12ನೇ ಆವೃತ್ತಿ ಫಿನಾಲೆಗೆ ಕೆಲವೇ ದಿನಗಳು ಮಾತ್ರ ಬಾಕಿ. ರಾಜ್ಯದ್ಯಂತ ಯಾರು ಗೆಲ್ಲುತ್ತಾರೆ ಅನ್ನೋ ಚರ್ಚೆಗಳು ಶುರುವಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ ನಡುವೆ ಪೈಪೋಟಿಗಳು ತೀವ್ರಗೊಂಡಿದೆ. ಇದೇ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಹಿಂದಿ ಬಿಗ್ ಬಾಸ್ ಮೂಲಕ ಜನಪ್ರಿಯವಾಗಿರುವ ನಟಿ ನಿಕ್ಕಿ ತಾಂಬೋಲಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

26
ನಟಿ ಕಣ್ಣಿಗೆ ಏನಾಯ್ತು?

ಬಿಗ್ ಬಾಸ್ ಖ್ಯಾತಿಯ ನಟಿ ನಿಕ್ಕಿ ತಾಂಬೋಲಿ ಕಣ್ಣಿನ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಮುಂಬೈನ ಖಾಸಗಿ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಕಣ್ಣಿನ ಚಿಕಿತ್ಸೆ ಪಡೆದು ಮರಳುತ್ತಿದ್ದಂತೆ ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಆರೋಗ್ಯದ ಕುರಿತು ಕೇಳಿದ್ದಾರೆ. ಕಣ್ಣಿನಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಹೀಗಾಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ ಎಂದಿದ್ದಾರೆ.

36
ಬಾಯ್‌ಫ್ರೆಂಡ್ ಜೊತೆಗೆ ಆಸ್ಪತ್ರೆ ದಾಖಲಾಗಿದ್ದ ನಿಕ್ಕಿ

ನಿಕ್ಕಿ ತಾಂಬೋಲಿ ಬಾಯ್‌ಫ್ರೆಂಡ್ ಅರ್ಬಾಜ್ ಪಟೇಲ್ ಜೊತೆ ಆಸ್ಪತ್ರೆ ದಾಖಲಾಗಿದ್ದರು. ನುರಿತ ವೈದ್ಯರ ಭೇಟಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ನಿಕ್ಕಿ ತಾಂಬೋಲಿ ಕಣ್ಮಿಗೆ ಬ್ಯಾಂಡೇಜ್ ಹಾಕಲಾಗಿದೆ. ನಿಕ್ಕಿ ಬ್ಯಾಂಡೇಜ್ ಫೋಟೋ, ವಿಡಿಯೋ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ನಿಕ್ಕಿ ಆರೋಗ್ಯ ಕುರಿತು ವಿಚಾರಿಸಿದ್ದಾರೆ.

46
ನಿಕ್ಕಿ ಹೆಲ್ತ್ ಅಪ್‌ಡೇಟ್ ನೀಡಿದ ಅರ್ಬಾಜ್ ಪಟೇಲ್

ನಿಕ್ಕಿ ತಾಂಬೋಲಿ ಆರೋಗ್ಯ ಕುರಿತು ಬಾಯ್‌ಫ್ರೆಂಡ್ ಅರ್ಬಾಜ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ನಿಕ್ಕಿಗೆ ಕಣ್ಣಿನ ಇನ್‌ಫೆಕ್ಷನ್ ಆಗಿದೆ. ಹೀಗಾಗಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಒಂದು ಕಣ್ಣಿಗೆ ಬ್ಯಾಂಡೇಜ್ ಹಾಕಿದ್ದಾರೆ. ನಿಕ್ಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇತರ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಪಟೇಲ್ ಸ್ಪಷ್ಟನೆ ನೀಡಿದ್ದಾರೆ.

56
ಬಿಗ್ ಬಾಸ್ ಸೆಕೆಂಡ್ ರನ್ನರ್ ಅಪ್

ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ 14ನೇ ಆವೃತ್ತಿಯಲ್ಲಿ ನಿಕ್ಕಿ ತಾಂಬೋಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ನಡೆದ ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿಕ್ಕಿ ತಾಂಬೋಲಿ ಅತೀ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಬಿಗ್ ಬಾಸ್ ಟ್ರೋಫಿ ಗೆಲ್ಲುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಸೆಕೆಂಡ್ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.

ಬಿಗ್ ಬಾಸ್ ಸೆಕೆಂಡ್ ರನ್ನರ್ ಅಪ್

66
ದಕ್ಷಿಣ ಭಾರತ ಸಿನಿಮಾದಲ್ಲಿ ಸೈ ಎನಿಸಿಕೊಂಡ ನಟಿ

ನಿಕ್ಕಿ ತಾಂಬೋಲಿ ಹಿಂದಿಗಿಂತ ಹೆಚ್ಚು ತಮಿಳು ಹಾಗೂ ತೆಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಕಾಂಚನ 3, ತೆಲುಗಿನ ತಿಪ್ಪಾರ ಮೀಸಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೆ. ಪಂಜಾಬಿ, ಹಿಂದಿ ಸೇರಿದಂತೆ ಕೆಲ ಭಾಷೆಗಳಲ್ಲಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ವಿಶೇಷ ಅಂದರೆ ಮರಾಠಿ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಸೆಕೆಂಡ್ ರನ್ನರ್ ಅಪ್ ಆಗಿದ್ದರು.

ದಕ್ಷಿಣ ಭಾರತ ಸಿನಿಮಾದಲ್ಲಿ ಸೈ ಎನಿಸಿಕೊಂಡ ನಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories