ಸೀಮಂತದ ಬಳಿಕ ಹಾಟ್​ ಲುಕ್​ನಲ್ಲಿ Karna Serial ನಿತ್ಯಾ: ನಟಿ ನಮ್ರತಾ ಗೌಡ ​ ಕ್ಯೂಟ್​ ಫೋಟೋಸ್​ ಇಲ್ಲಿವೆ

Published : Oct 22, 2026, 01:34 PM IST

'ಕರ್ಣ' ಧಾರಾವಾಹಿಯಲ್ಲಿ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ, ಮಾಡರ್ನ್ ಡ್ರೆಸ್‌ನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ನಮ್ರತಾ ರೈತರ ಪರ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

PREV
16
ಕರ್ಣ ಸೀರಿಯಲ್​ ಸ್ಟೋರಿ

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಸ್ಟೋರಿಯೇ ಫುಲ್​ ಬದಲಾಗಿ ಹೋಗಿದೆ. ಆರಂಭದಲ್ಲಿ ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತಲೂ ಸುತ್ತುತ್ತಿದ್ದ ಸ್ಟೋರಿ ಬೇರೆ ರೂಪ ಪಡೆದುಕೊಂಡಿದೆ. ಕಣ್ಮರೆಯಾಗಿದ್ದ ನಿತ್ಯಾ ಮಧ್ಯೆ ಮತ್ತೆ ಕಾಣಿಸಿಕೊಂಡಿದ್ದಳು, ಅವಳ ಸೀಮಂತ ನೆರವೇರಿದೆ. ಈಗೇನಿದ್ದರೂ ಕರ್ಣ ಅಮ್ಮ-ಮಗನ ಸೆಂಟಿಮೆಂಟ್​ ಸ್ಟೋರಿ.

26
ನಿತ್ಯಾ ರೋಲ್​

ಆರಂಭದಲ್ಲಿ ನಿತ್ಯಾ ಇದ್ದಾಗ ಸೀರಿಯಲ್​ ಅನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಿತ್ಯಾನ್ನು ಕರ್ಣ ಅನಿವಾರ್ಯವಾಗಿ ಮದುವೆಯಾದಾಗ, ಮುಂದೇನು ಎನ್ನುವ ತವಕ ಇತ್ತು. ಕೊನೆಗೆ ಈಗ ನಿತ್ಯಳನ್ನು ಸಂಪೂರ್ಣ ದೂರ ಮಾಡಿದ್ದು, ನಿತ್ಯಾ ಪಾತ್ರಧಾರಿಯಾಗಿದ್ದ ನಮ್ರತಾ ಗೌಡ (Namratha Gowda) ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ ಆ್ಯಕ್ಟೀವ್​ ಆಗಿದ್ದಾರೆ.

36
ಸಿನಿಮಾದಲ್ಲಿ ನಾಯಕಿಯಾಗಿ

ಅಷ್ಟಕ್ಕೂ ನಟಿ ನಮ್ರತಾ ಗೌಡ ಸದ್ಯ ಪಿಸಿ. ಶೇಖರ್ ನಿರ್ದೇಶನದ ʻಮಹಾನ್ʼ ಸಿನಿಮಾದಲ್ಲಿ ನಗರದಿಂದ ಹಳ್ಳಿಗೆ ಮರಳಿ ರೈತರ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾವಂತ ಯುವತಿಯಾಗಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಇದರ ಫಸ್ಟ್​ ಲುಕ್​ ಬಿಡುಗಡೆ ಮಾಡಿದೆ. ನಟ ಶಿವರಾಜ್‌ಕುಮಾರ್ ಹಾಗೂ ವಿಜಯ ರಾಘವೇಂದ್ರ ಅವರಂತಹ ದೊಡ್ಡ ನಟರ ಜೊತೆ ನಮ್ರತಾ ಅವರ ಈ ಹೊಸ ಅವತಾರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

46
ಹಾಟ್​ ವಿಡಿಯೋಶೂಟ್​

ಇದೀಗ ನಟಿ ಹಾಟ್​ ವಿಡಿಯೋಶೂಟ್​ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರು, ಮಿನಿ ಡ್ರೆಸ್​ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಈ ಮೂಲಕ ನಟಿ, ಸೀರೆಗೂ ಸೈ, ಮಾಡರ್ನ್​ ಡ್ರೆಸ್​ಗೂ ಸೈ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.

56
ಸಿನಿಮಾ ಕುರಿತು

ಇನ್ನು ನಮ್ರತಾ ಗೌಡ ಅವರು ನಟಿಸುತ್ತಿರುವ ಸಿನಿಮಾ ಕುರಿತು ಹೇಳುವುದಾದರೆ, ಇಲ್ಲಿ ನಟಿ ಸಮಾಜಕ್ಕೆ ಪ್ರೇರಣೆಯಾಗುವಂತಹ ಅತ್ಯಂತ ಜವಾಬ್ದಾರಿಯುತ ಪಾತ್ರದಲ್ಲಿದ್ದಾರೆ. ನಗರದಲ್ಲಿ ಉನ್ನತ ವಿದ್ಯಾಭ್ಯಾಸವನ್ನ ಪೂರೈಸಿ, ನಂತರ ಹಳ್ಳಿಗೆ ಮರಳಿ ರೈತರ ಕಷ್ಟ-ನಷ್ಟಗಳಿಗೆ ಹೆಗಲು ಕೊಡುವ ಹಾಗೂ ಅವರ ಹಕ್ಕುಗಳಿಗಾಗಿ ಧ್ವನಿಯಾಗುವ ಕಳಕಳಿಯುಳ್ಳ ವಿದ್ಯಾವಂತ ಯುವತಿಯಾಗಿ ಮಿಂಚಿದ್ದಾರೆ.

66
ಬಾಲ ನಟಿಯಾಗಿ ಎಂಟ್ರಿ

ಇನ್ನು ನಮ್ರತಾ ಗೌಡ ಕುರಿತು ಹೇಳುವುದಾದರೆ, ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್​ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್​ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್​ ಸಿಕ್ಕಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್​ ರಾಜ್​ಕುಮಾರ್​ (Puneet Rajkumar) ಅವರ ಅಭಿಮಾನಿ ಕೂಡ. ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories