ಭಾಗ್ಯ ನಟನೆಯನ್ನು ಶರಪಂಜರ ಸಿನಿಮಾ ಕಲ್ಪನಾಗೆ ಹೋಲಿಸಿದ ವೀಕ್ಷಕರು

First Published | Nov 18, 2024, 12:40 PM IST

ಭಾಗ್ಯಾಳ ಮುಂದೆ ತಾಂಡವ್ ನ ಎಲ್ಲಾ ಬಣ್ಣ ಬಯಲಾಗಿದೆ. ತಾನು ಇಷ್ಟು ದಿನಗಳ ಕಾಲ ಮೋಸ ಹೋಗಿರೋದನ್ನ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ ಭಾಗ್ಯ. ವೀಕ್ಷಕರು ಭಾಗ್ಯ ನಟನೆಯನ್ನು ನಟಿ ಕಲ್ಪಾನಾಗೆ ಹೋಲಿಕೆ ಮಾಡ್ತಿದ್ದಾರೆ. 
 

ಭಾಗ್ಯ ಲಕ್ಷ್ಮೀ (Bhagyalakshmi) ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಕಾಯುತ್ತಿದ್ದ ದಿನ ಬಂದೆ ಬಿಟ್ಟಿದೆ. ಇಷ್ಟು ದಿನಗಳಿಂದ ಭಾಗ್ಯಾಳ ಕಣ್ಣ ಮುಂದೆ ಎಲ್ಲಾ ನಡೆಯುತ್ತಿದ್ದರೂ, ಭಾಗ್ಯ ಅಮಾಯಕಳಂತೆ ತನ್ನ ಗಂಡ ತನಗೆ ಆ ರೀತಿ ಮೋಸ ಮಾಡೋದಕ್ಕೆ ಸಾಧ್ಯಾನೆ ಇಲ್ಲ ಎನ್ನುವ ನಂಬಿಕೆಯಿಂದ ತಾಂಡವ್ ಅದೆಷ್ಟೇ ಕೆಟ್ಟ ರೀತಿಯಲ್ಲಿ ತನ್ನನ್ನು ನಡೆಸಿಕೊಂಡರೂ, ಆತನನ್ನು ಅತಿಯಾಗಿ ನಂಬಿದ್ದಳು ಭಾಗ್ಯ. 
 

ಇದೀಗ ತಾಂಡವ್ ನ ನಿಜ ಬಣ್ಣ ಭಾಗ್ಯ ಮುಂದೆ ಸಂಪೂರ್ಣವಾಗಿ ಬಯಲಾಗಿದೆ. ಭಾಗ್ಯಾಗೆ ಸಿಕ್ಕ ಕಪಲ್ ಟ್ರಾವೆಲ್ ಪ್ಯಾಕೇಜ್ ಹಿಡಿದು ಕೊಂಡ ಶ್ರೇಷ್ಠಾ ಜೊತೆ ಎಂಜಾಯ್ ಮಾಡುತ್ತಿರುವ ತಾಂಡವ್ ಗೆ, ಆ ಹೊಟೇಲ್ ನಲ್ಲಿ ಎಲ್ಲಾ ಅರೇಂಜ್ ಮೆಂಟ್ ಮಾಡಿದ್ದು ಭಾಗ್ಯ ಅನ್ನೋ ಸಣ್ಣ ಸುಳಿವು ಕೂಡ ಸಿಗೋದಿಲ್ಲ. ಅಷ್ಟೇ ಅಲ್ಲ ಭಾಗ್ಯಳಿಗೂ ಕೂಡ ತಾನು ಇಷ್ಟೆಲ್ಲಾ ಮಾಡ್ತಿರೋದು ತನ್ನ ಗಂಡನಿಗೆ ಅನ್ನೋದು ಗೊತ್ತಿರೋದಿಲ್ಲ. 
 

Tap to resize

ತಾಂಡವ್ ಮತ್ತು ಶ್ರೇಷ್ಠಾ, ಪಾರ್ಟಿ ಎಂಜಾಯ್ ಮಾಡ್ತಾ ಕಂಠ ಪೂರ್ತಿ ಕುಡಿದು, ನಾವಿಬ್ಬರು ಮದ್ವೆ ಆಗ್ಬೇಕು ಅಂತಾಳೆ ಶ್ರೇಷ್ಠಾ, ಅದಕ್ಕೆ ತಾಂಡವ್ ಮೊದಲಿಗೆ ಒಪ್ಪದಿದ್ದರೂ ನಂತರ ಕುಡಿದ ಅಮಲಿನಲ್ಲಿ ಅದಕ್ಕೂ ಒಪ್ಪಿಗೆ ಸೂಚಿಸುತ್ತಾನೆ. ಬಂದ ಜೋಡಿಯಾಗಿ ಆ ತಡರಾತ್ರಿಯಲ್ಲಿ ತಾನೇ ಅರಶಿನ ಕೊಂಬು, ದಾರ ಬಳಸಿ ತಾಳಿ ತಯಾರಿಸಿದ ಭಾಗ್ಯ ಅದನ್ನ ಜೋಡಿಗೆ ಕೊಡೋದಕ್ಕೆ ತಾನೆ ಖುದ್ದಾಗಿ ಹೊರಟಿದ್ದಾಳೆ. 
 

ಕಂಠಪೂರ್ತಿ ಕುಡಿದಿದ್ದ ತಾಂಡವ್​ ಮತ್ತು ಶ್ರೇಷ್ಠಾ ರೊಮ್ಯಾಂಟಿಕ್ ಮೂಡ್ ನಲ್ಲಿದ್ದು, ಶ್ರೇಷ್ಠಾ ಮಾತಿನಂತೆ ತಾಂಡವ್ I LOVE YOU ಎಂದಿದ್ದಾನೆ. ಭಾಗ್ಯಳನ್ನು ತನ್ನ ಜೀವನದಿಂದ ಆದಷ್ಟು ಬೇಗ ದೂರ ಮಾಡೊದಾಗಿ ಹೇಳಿದ್ದಾನೆ, ಅಷ್ಟೇ ಅಲ್ಲ ಭಾಗ್ಯಳಂತ ಎಮ್ಮೆಯ ಜೊತೆ ಸಂಸಾರ ಮಾಡೋಕೆ ತನಗೆ ಸಾಧ್ಯವೇ ಇಲ್ಲ ಅನ್ನೋದನ್ನು ಸಹ ಹೇಳಿದ್ದಾನೆ ತಾಂಡವ್. 
 

ಇಲ್ಲಿವರೆ ಏನು ಆಗಬಾರದು ಎಂದು ಕುಸುಮಾ ಮತ್ತು ಮನೆಯವರು ಅಂದುಕೊಂಡಿದ್ರೋ ಅದೆಲ್ಲಾ ಈಗ ಆಗಿಯೇ ಹೋಗಿದೆ. ತನ್ನ ಗಂಡನ ನಿಜ ರೂಪ ಕಂಡು, ತಾನು ಇಲ್ಲಿವರೆಗೆ ಕಟ್ಟಿಕೊಂಡು ಬಂದಿದ್ದ ನಂಬಿಕೆ ಸೌದ ಮುರಿದು ಹೋಗುತ್ತದೆ. ಜೋರಾದ ಮಳೆಯಲ್ಲಿ ಭಾಗ್ಯ, ಅಳುತ್ತಾ, ತಾನು ಎಡವಿದ್ದೆಲ್ಲಿ ಎಂದು ಯೋಚನೆ ಮಾಡುತ್ತಾ, ತನ್ನ ಹೆಡ್ಡತನವನ್ನು ದೂಷಿಸುತ್ತಾಳೆ. 
 

ನಾನು ಕಣ್ಣಿಗೆ ಬಟ್ಟೆ ಕಟ್ಟಿರೋ ಭಾಗ್ಯ, ಜೀವನದಲ್ಲಿ ಎಡವದೇ ಇರೋದಕ್ಕೆ ಸಾಧ್ಯಾನ? ನನ್ನ ಕಣ್ಣಿಗೆ ಕಟ್ಟಿರೋದೆ ಅಂತಿಂತ ಪರದೆ ಅಲ್ಲ, ದಪ್ಪ ಪರದೆ, ನನ್ನ ಕಣ್ಣು ಮುಂದೆ ಇಷ್ಟೆಲ್ಲಾ ನಡೆತಾ ಇದ್ದರೂ ಕೂಡ, ಏನೂ ಕಾಣದೇ ಇರೋವಷ್ತು ದಪ್ಪದ ಪರದೇ ಕಟ್ಟಿಕೊಂಡಿರೋ ದಡ್ಡಿ ನಾನು ಎನ್ನುತ್ತಾ, ಮಳೆಯಲ್ಲಿ ನೆನೆಯುತ್ತಾ ಹಣೆ ಚಚ್ಚಿಕೊಳ್ಳುತ್ತಿದ್ದಾಳೆ ಭಾಗ್ಯ. 
 

ಭಾಗ್ಯ ಗೋಳು ನೋಡಿದ ಜನರು, ಭಾಗ್ಯ ನೀನು ಹೀಗೆ ಇದ್ರೆ ಆಗೋಲ್ಲ ಬದಲಾಗಬೇಕು ಎಂದಿದ್ದಾರೆ, ಅಷ್ಟೇ ಅಲ್ಲ ಅಮ್ಮ ಭಾಗ್ಯ ಈಗಲಾದರು ಸಿಡಿದ್ದೆಳೇ ತಾಯಿ ಅವರನ್ನು ಮಟ್ಟಾಹಾಕು ಎಂದು ಸಹ ಹೇಳಿದ್ದಾರೆ. ಜೊತೆಗೆ ಇಷ್ಟೆಲ್ಲಾ ಆದ ಮೇಲೆ ಮತ್ತೆ ತಾಂಡವ ಬೇಕು, ಅವನ ಜೊತೆ ಜೀವನ ನಡೆಸಿದರೆ ಸೆಲ್ಫ್ ರೆಸ್ಪೆಕ್ಟ್ ಇರೋದಿಲ್ಲ ಬದಲಾಗು ಎಂದು ಬುದ್ದಿ ಮಾತು ಹೇಳಿದ್ದಾರೆ. ಇನ್ನೂ ಹಲವು ಹಲವು ಭಾಗ್ಯ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಶರಪಂಜರ (Sharapanjara) ಮೂವೀ ಕಲ್ಪನ ಆಗಿದ್ದಾರೆ ಭಾಗ್ಯ ಎಂದು ಸಹ ಹೊಗಳಿದ್ದಾರೆ. 
 

Latest Videos

click me!