ನನ್ನ ಪ್ರಪಂಚದ ಜೊತೆ ಪ್ರಪಂಚ ನೋಡ್ತಿದ್ದೀನಿ… ಅಮ್ಮನ ಜೊತೆಗಿನ ಸಾನ್ಯಾ ಅಯ್ಯರ್ ಟ್ರಾವೆಲ್ ಫೋಟೊ ವೈರಲ್!

Published : Nov 16, 2024, 09:48 PM ISTUpdated : Nov 17, 2024, 09:38 AM IST

ನಟಿ ಸಾನ್ಯಾ ಅಯ್ಯರ್ ತನ್ನ ತಾಯಿ ಜೊತೆ ದೇಶ ವಿದೇಶ ಸುತ್ತುತ್ತಿದ್ದು, ತಮ್ಮ ಟ್ರಾವೆಲ್ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ, ಸಖತ್ ವೈರಲ್ ಆಗುತ್ತಿದೆ.   

PREV
18
ನನ್ನ ಪ್ರಪಂಚದ ಜೊತೆ ಪ್ರಪಂಚ ನೋಡ್ತಿದ್ದೀನಿ… ಅಮ್ಮನ ಜೊತೆಗಿನ ಸಾನ್ಯಾ ಅಯ್ಯರ್ ಟ್ರಾವೆಲ್ ಫೋಟೊ ವೈರಲ್!

ಪುಟ್ಟ ಗೌರಿಯಾಗಿ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸಿದ ಬಾಲ ಕಲಾವಿದೆ ಸಾನ್ಯಾ ಅಯ್ಯರ್ (Saanya Iyer). ನಂತರ ಇವರು ಕನ್ನಡಿಗರಿಗೆ ಪರಿಚಿತರಾದದ್ದು ಬಿಗ್ ಬಾಸ್ ಸೀಸನ್ 9 ರ ಮೂಲಕ. 
 

28

ಬಿಗ್ ಬಾಸ್ ಓಟಿಟಿ ಮತ್ತು ಬಿಗ್ ಬಾಸ್ 9ರಲ್ಲಿ (Bigg Boss Season 9) ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಸಾನ್ಯಾ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು. 
 

38

ಇದಾದ ನಂತರ ಸಾನ್ಯಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸುದ್ದಿಯಾಗಿದ್ದರು. ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡಿದ್ದು, ಚಿತ್ರದ ಹಾಡುಗಳು ಗಮನ ಸೆಳೆದಿದ್ದವು. ಆದರೆ ಸಿನಿಮಾ ಬಿಡುಗಡೆಯಾದ ಮೇಲೆ ಅಷ್ಟೊಂದು ಸದ್ದು ಮಾಡಿಲ್ಲ. 
 

48

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಾನ್ಯಾ ಅಯ್ಯರ್, ಟ್ರಾವೆಲ್ ಪ್ರಿಯೆಯಾಗಿದ್ದು, ಹೆಚ್ಚಾಗಿ ತಮ್ಮ ಟ್ರಾವೆಲ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
 

58

ಸಾನ್ಯಾ ಅಯ್ಯರ್ ತಮ್ಮ ತಾಯಿ ದೀಪಾ ಅಯ್ಯರ್ (Deepa Iyer) ಜೊತೆಗೆ ಹೆಚ್ಚಾಗಿ ದೇಶ ವಿದೇಶ ಸುತ್ತುತ್ತಲೇ ಇರುತ್ತಾರೆ. ನಿಜ ಹೇಳಬೇಕಂದ್ರೆ ಇವರಿಬ್ಬರು ಬೆಸ್ಟ್ ಟ್ರಾವೆಲ್ ಪಾರ್ಟನರ್ ಕೂಡ ಹೌದು. 
 

68

ನಮ್ಮ ದೇಶದ ಮೂಲೆ ಮೂಲೆಯಲ್ಲಿರುವ ಯಾವುದೇ ದೇಗುಲ ಇರಲಿ, ಪ್ರವಾಸಿ ತಾಣಗಳೇ ಇರಲಿ, ಅಥವಾ ವಿದೇಶದ ಸುಂದರ ತಾಣಗಳೇ ಇರಲಿ ಸಾನ್ಯಾ ಹೆಚ್ಚಾಗಿ ಟ್ರಾವೆಲ್ ಮಾಡೋದೆ ತಾಯಿ ಜೊತೆ. ಇದೀಗ ಇಬ್ಬರು ದೇಶ ವಿದೇಶ ಸುತ್ತಿದ ವಿಡಿಯೋಗಳನ್ನು ಜೊತೆಯಾಗಿ ಸೇರಿಸಿ ವಿಡೀಯೋ ಮಾಡಿ ಶೇರ್ ಮಾಡಿದ್ದಾರೆ. 
 

78

ಟ್ರಾವೆಲಿಂಗ್ ವಿದ್ ಅಮ್ಮ ಎನ್ನುತ್ತಾ, ಜೊತೆಗೆ ನನ್ನ ಪ್ರಪಂಚದ ಜೊತೆ ಪ್ರಪಂಚ ನೋಡುತ್ತಿದ್ದೇನೆ ಎನ್ನುವುದಾಗಿ ಕ್ಯಾಪ್ಶನ್ ಬರೆದಿದ್ದಾರೆ. ಈ ತಾಯಿ ಮಗಳ ಜೋಡಿಯನ್ನು ಸಿಕ್ಕಾಪಟ್ಟೆ ಜನ ಮೆಚ್ಚಿಕೊಂಡಿದ್ದಾರೆ. ಬೆಸ್ಟ್ ಅಮ್ಮ ಮಗಳ ಜೋಡಿ ಎನ್ನುತ್ತಿದ್ದಾರೆ. 

88

ಅಮ್ಮ-ಮಗಳ ಜೋಡಿ (mom daughter duo)  ಯಾವಾಗ್ಲೂ ಹೀಗೆ ಇರಲಿ ಎಂದು ಜನ ಹಾರೈಸಿದ್ದಾರೆ, ಅಷ್ಟೇ ಅಲ್ಲ ಇದು ಪ್ರತಿಯೊಬ್ಬ ಹೆಣ್ಣುಮಗಳ ಕನಸು, ಸಾನ್ಯಾ ನೀವು ಆ ಕನಸಲ್ಲಿ ಜೀವಿಸುತ್ತಿದ್ದೀರಿ ಎಂದು ಸಹ ಹೇಳಿದ್ದಾರೆ. ಒಟ್ಟಲ್ಲಿ ಅಭಿಮಾನಿಗಳು ಅಮ್ಮ ಮಗಳ ಜೋಡಿಗೆ ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. 
 

click me!

Recommended Stories