ಅಮೃತಧಾರೆ (Amruthadhaare) ಸೀರಿಯಲ್ ಈಗ ರೋಚಕ ಹಂತ ತಲುಪಿದೆ. ಆಸ್ತಿಗೆ ಮಲ್ಲಿ ಸಹಿ ಹಾಕಿಸಿಕೊಳ್ಳುವ ಸಂಬಂಧ ಜೈದೇವ್ ಅವಳನ್ನು ಮನೆಗೆ ಕರೆದಿದ್ದ. ಇದೇ ಒಳ್ಳೆಯ ಸಮಯ ಎಂದು ಗೌತಮ್ ಜೈದೇವ್ನಿಗೆ ಹಳ್ಳ ತೋಡಲು ಪ್ಲ್ಯಾನ್ ಮಾಡಿದ್ದ.
28
ಡಿವೋರ್ಸ್ ಪೇಪರ್ ಹಿಡಿದು ಎಂಟ್ರಿ
ಅದೇ ರೀತಿ, ಮಲ್ಲಿ ಡಿವೋರ್ಸ್ ಪೇಪರ್ ಹಿಡಿದು ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಅವಳು ಆಸ್ತಿ ಪೇಪರ್ಗೆ ಸಹಿ ಹಾಕಲು ಬಂದಿದ್ದಾಳೆ ಎಂದು ಖುಷಿಯಾಗಿದ್ದ ಜೈದೇವ್‌ಗೆ ಶಾಕ್ ಆಗಿದೆ. ಡಿವೋರ್ಸ್ ಪೇಪರ್ಗೆ ಸಹಿ ಹಾಕಿದ್ರೆ ಆಸ್ತಿ ಪೇಪರ್ಗೆ ಸಹಿ ಹಾಕುವುದಾಗಿ ಮಲ್ಲಿ ಹೇಳಿದ್ದಾಳೆ.
38
ಕಾಣದ ಗೌತಮ್
ಅದೇ ಇನ್ನೊಂದೆಡೆ, ದಿನವೂ ಗೌತಮ್ನನ್ನು ನೋಡುತ್ತಿದ್ದ ಭೂಮಿಕಾ, ಆತ ಮನೆಯಿಂದ ಹೊರಕ್ಕೆ ಬರದೇ ಇರುವುದಕ್ಕೆ ಬೇಸರವಾಗಿದೆ. ಕೊನೆಗೆ, ಮಿಂಚುಗೆ ಹೋಗಿ ವಿಷಯ ಕೇಳಿದಾಗ ಪಪ್ಪನಿಗೆ ಹುಷಾರಿಲ್ಲ ಎಂದಿದ್ದಾಳೆ.
ಗಾಬರಿಯಿಂದ ಓಡಿಹೋದ ಭೂಮಿಕಾ, ಗೌತಮ್ನನ್ನು ಮುಟ್ಟಿ ನೋಡಿದಾಗ ಜ್ವರ ಬಂದಿರುವುದು ತಿಳಿದಿದೆ. ಆತನ ಹಣೆಗೆ ತಣ್ಣೀರಿನ ಪಟ್ಟಿ ಇಟ್ಟಿದ್ದಾಳೆ. ಇದನ್ನು ಆಕಾಶ್ ಮತ್ತು ಮಿಂಚು ಅಚ್ಚರಿಯಿಂದ ನೋಡಿದ್ದಾರೆ.
58
ದಂಪತಿ ಒಂದಾಗೋದು ಗ್ಯಾರೆಂಟಿ
ಅಲ್ಲಿಗೆ ಭೂಮಿಕಾ ಮತ್ತು ಗೌತಮ್ ಒಂದಾಗುವುದು ಗ್ಯಾರೆಂಟಿ ಎಂದಾಯ್ತು. ಅದೇ ಇನ್ನೊಂದೆಡೆ ಮಲ್ಲಿಗೆ ಜೈದೇವ್ನಿಂದ ಮುಕ್ತಿ ಸಿಕ್ಕರೆ ಅಲ್ಲಿಗೆ ಆ ಸಮಸ್ಯೆಯೂ ಪರಿಹಾರ ಆಗತ್ತೆ. ಇನ್ನು ಸೀರಿಯಲ್ನಲ್ಲಿ ಏನೂ ಉಳಿಯುವುದಿಲ್ಲ.
68
ಸೀರಿಯಲ್ ಮುಗಿಯತ್ತಾ?
ಹಾಗಿದ್ದರೆ ಸೀರಿಯಲ್ ಮುಗಿಯತ್ತಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡತೊಡಗಿದೆ. ಅಷ್ಟಕ್ಕೂ ಟಿಆರ್ಪಿ ಹೆಚ್ಚಿಗೆ ಇರುವ ಅಮೃತಧಾರೆ ಸೀರಿಯಲ್ ಅನ್ನು ಅಷ್ಟು ಸುಲಭದಲ್ಲಿ ಮುಗಿಸುವುದಿಲ್ಲ ಎನ್ನುವುದು ಕೂಡ ಅಷ್ಟೇ ದಿಟ.
78
ಇನ್ನೇನು ಟ್ವಿಸ್ಟ್?
ಇನ್ನೂ ಒಂದು ಏನೋ ಟ್ವಿಸ್ಟ್ ತಂದು ಸೀರಿಯಲ್ ಎಳೆಯಬಹುದು. ಅಷ್ಟಕ್ಕೂ ಗೌತಮ್‌ನ ಮಗಳು ಇನ್ನೂ ಸಿಕ್ಕಿಲ್ಲ. ಅವಳು ಯಾರು? ಮಿಂಚುನೇ ಮಗಳಾ ಅಥ್ವಾ ಅವಳು ಬೇರೆಯವಳಾ ಎನ್ನುವುದು ಕೂಡ ತಿಳಿಯಬೇಕಿದೆ.
88
ವೀಕ್ಷಕರ ಅಭಿಪ್ರಾಯ
ಗೌತಮ್ ಮತ್ತು ಭೂಮಿಕಾರನ್ನು ಆದಷ್ಟು ಬೇಗ ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಿದ್ದರೂ, ಈ ಸೀರಿಯಲ್ ಅಷ್ಟು ಬೇಗ ಮುಗಿಯುವುದು ಬೇಡ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್ ವೀಕ್ಷಕರನ್ನು ಹಿಡಿದಿಟ್ಟುಕೊಂಡಿರುವುದು ಕಮೆಂಟ್ಸ ನೋಡಿದರೆ ತಿಳಿಯುತ್ತದೆ.