ಬಿಗ್‌ಬಾಸ್ ಮನೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಮಲ್ಲಮ್ಮ, ತಮ್ಮ ಫಿಲ್ಟರ್ ಇಲ್ಲದ ಮಾತುಗಳಿಂದ ಸಂಚಲನ ಸೃಷ್ಟಿಸಿದ್ದಾರೆ. ವೇದಿಕೆಯ ಮೇಲೆ ಸೂಪರ್ ಸ್ಟಾರ್ ಸುದೀಪ್ ಅವರೊಂದಿಗೆ ತಮಾಷೆಯ ಒಪ್ಪಂದವೊಂದನ್ನು ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ಈ ಬಾರಿಯ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಮಲ್ಲಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಯಾವುದೇ ಫಿಲ್ಟರ್ ಇಲ್ಲದೇ ಸುದೀಪ್ ಅವರೊಂದಿಗೆ ಮಲ್ಲಮ್ಮ ಮಾತನಾಡಿರೋದು ಎಲ್ಲರ ಗಮನ ಸೆಳೆದಿದೆ. ಸೂಪರ್ ಸ್ಟಾರ್ ಆಗಿದ್ರೂ ಮಲ್ಲಮ್ಮ ಜೊತೆ ತುಂಬಾ ಆತ್ಮೀಯವಾಗಿ ಮಾತನಾಡಿದ್ದನ್ನು ಕಂಡು ಹೆಸರಿಗೆ ತಕ್ಕಂತೆ ಮಾಣಿಕ್ಯ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
25
ಉತ್ತರ ಕರ್ನಾಟಕ ಗ್ರಾಮೀಣ ಭಾಗದ ಭಾಷೆ
ಉತ್ತರ ಕರ್ನಾಟಕ ಗ್ರಾಮೀಣ ಭಾಗದ ಜನರು ಎರಡ್ಮೂರು ಪದಗಳನ್ನು ಜೊತೆಯಾಗಿ ಸೇರಿಸಿಕೊಂಡು ಅವಸರವಾಗಿ ಮಾತನಾಡುತ್ತಾರೆ. ಬೆಂಗಳೂರು ಮತ್ತು ಮೈಸೂರು ಭಾಗದ ಜನತೆಗೆ ಉತ್ತರ ಕರ್ನಾಟಕ ಭಾಗದ ಮಾತುಗಳು ಬೇಗ ಅರ್ಥವಾಗಲ್ಲ. ನಿಧಾನವಾಗಿ ಆಲಿಸಿದ್ರೆ ಮಾತ್ರ ಅರ್ಥ ಮಾಡಿಕೊಳ್ಳಬಹುದು
35
ಮಲ್ಲಮ್ಮ ಮಾತು
ವೇದಿಕೆ ಮೇಲೆ ಬಂದ ಮಲ್ಲಮ್ಮ ಅವರು ಪಟಪಟ ಅಂತ ಮಾತನಾಡಲು ಶುರು ಮಾಡಿದರು. ಆಗ ಸುದೀಪ್, ನೀವು ಸ್ವಲ್ಪ ನಿಧಾನವಾಗಿ ಮಾತನಾಡಿ ಎಂದು ಮನವಿ ಮಾಡಿಕೊಂಡರು. ಬಿಗ್‌ಬಾಸ್ ಕುರಿತು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನನಗೆ ಗೊತ್ತಿಲ್ಲ ಅಂತಾನೇ ಮಲ್ಲಮ್ಮ ಹೇಳಿದರು. ಮಲ್ಲಮ್ಮ ಅವರ ಮಾತುಗಳನ್ನು ಕೇಳಿದ್ರೆ ಹೀಗೆಯೇ ಆಟ ಆಡಬೇಕೆಂದು ಮಲ್ಲಮ್ಮ ಬಂದಿಲ್ಲ ಎಂಬುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು.
ಮನೆಯೊಳಗೆ ಹೋಗೋದು ಅಡುಗೆ ಮಾಡೋದು, ಆಟ ಆಡೋದು ಸರ್. ಮನೆಗೆ ಬಂದವರನ್ನು ಪರಿಚಯ ಮಾಡಿಕೊಳ್ಳುತ್ತೇನೆ. ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಈಗ ನಿಮ್ಮೊಂದಿಗೆ ಮಾತನಾಡುತ್ತಿದ್ದೀನಿ. ಹಾಗೆ ಅಲ್ಲಿದ್ದವರು ಜೊತೆಯೂ ಮಾತನಾಡುತ್ತೇನೆ. ಮನೆಯೊಳಗೆ ನನಗಿಷ್ಟ ಬಂದಂತೆಯೇ ಇರುತ್ತೇನೆ. ನನಗೆ ನನ್ನದೇ ರೂಲ್ಸ್ ಎಂದು ಮಲ್ಲಮ್ಮ ತಮಾಷೆ ಮಾಡಿದರು.
ಮಲ್ಲಮ್ಮ ಅವರ ಫಿಲ್ಟರ್ ಇಲ್ಲದ ಮಾತುಗಳನ್ನು ಕೇಳಿದ ಸುದೀಪ್, ಯಾವುದೇ ಹಿಂಜರಿಕೆಯಿಲ್ಲದೇ ಸುಂದರವಾದ ತಮಾಷೆಯ ಒಪ್ಪಂದವನ್ನು ಮಾಡಿಕೊಂಡರು. ಮನೆಯೊಳಗೆ ಹೋದ್ಮೇಲೆ ನೀವು ಬಿಗ್‌ಬಾಸ್ ಜೊತೆ ಏನಾದರೂ ಮಾತನಾಡಿಕೊಳ್ಳಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದ್ರೆ ಶನಿವಾರ ಮತ್ತು ಭಾನುವಾರ ನಾನು ಬರುತ್ತೇನೆ. ಆಗ ನನ್ನ ಮರ್ಯಾದೆ ತೆಗಿಯಬೇಡಿ. ಈ ಬಗ್ಗೆ ನಾವಿಬ್ಬರು ಡೀಲ್ ಮಾಡಿಕೊಳ್ಳೋಣ ಎಂದು ಮಲ್ಲಮ್ಮ ಮತ್ತು ಸುದೀಪ್ ಹ್ಯಾಂಡ್‌ಶೇಕ್ ಮಾಡಿಕೊಂಡರು.