Bigg Boss Kannada 12: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಸ್ಟಾರ್ ನಟ ಮೊದಲ ಅತಿಥಿಯಾಗಿ ಆಗಮಿಸುವ ನಿರೀಕ್ಷೆಯಿದೆ. ಇದರ ನಡುವೆ ಸ್ಪರ್ಧಿಗಳಿಗೆ ಬಿಗ್‌ಬಾಸ್ ದೊಡ್ಡ ಶಾಕ್ ನೀಡಿದ್ದಾರೆ.
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಅತ್ಯಂತ ಅದ್ಧೂರಿ ಮತ್ತು ಸಡಗರದಿಂದ ಆರಂಭವಾಗಿದೆ. 12ನೇ ಬಾರಿಯೂ ಚಂದನವನ ಮಾಣಿಕ್ಯ ಸುದೀಪ್ ಅವರೇ ನಿರೂಪಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈಗ ಬಿಗ್‌ಬಾಸ್ ಮನೆಯೊಳಗೆ ಅತಿಥಿಯಾಗಿ ಸ್ಟಾರ್ ನಟರೊಬ್ಬರು ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
25
ಮೊದಲ ಅತಿಥಿ ಯಾರು?
ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕಲಾವಿದರು ಮತ್ತು ಚಿತ್ರತಂಡ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಬರುತ್ತಾರೆ. ಸ್ಪರ್ಧಿಗಳೊಂದಿಗೆ ಕ್ವಾಲಿಟಿ ಸಮಯ ಕಳೆದು, ಬಿಗ್‌ಬಾಸ್ ಸೂಚನೆಯಂತೆಯೇ ಕೆಲವು ಚಟುವಟಿಕೆಯನ್ನು ನಡೆಸಿಯೂ ಕೊಡುತ್ತಾರೆ. ಈ ಬಾರಿ ಮೊದಲ ಅತಿಥಿ ಯಾರಾಗಿರಬಹುದು ಎಂಬುದರ ಬಗ್ಗೆ ಒಂದಿಷ್ಟು ಹೆಸರು ಮುನ್ನಲೆಗೆ ಬಂದಿವೆ.
35
ಕಾಂತಾರ ಚಾಪ್ಟರ್ 1
ಇದೇ ಅಕ್ಟೋಬರ್ 2 ರಂದು ಕನ್ನಡದ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗುತ್ತಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ನೋಡಲು ಇಡೀ ವಿಶ್ವದ ಸಿನಿಲೋಕ ಕಾಯುತ್ತಿದೆ. ಸಿನಿಮಾ ಪ್ರಚಾರದ ಹಿನ್ನೆಲೆ ರಿಷಬ್ ಶೆಟ್ಟಿ ಬಿಗ್‌ಬಾಸ್‌ಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಕಲರ್ಸ್ ಕನ್ನಡ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ರಿಷಬ್ ಶೆಟ್ಟಿ ಒಬ್ಬರೇ ಬರ್ತಾರಾ ಅಥವಾ ಚಿತ್ರತಂಡದ ಪ್ರಮುಖರು ಬರ್ತಾರೆಯೇ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಬಿಗ್‌ಬಾಸ್ ಮನೆಯೊಳಗೆ ಬಂದಿರುವ ಎಲ್ಲಾ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡೋಷ್ಟರಲ್ಲಿ ಎಲಿಮಿನೇಷನ್ ಭಯ ಶುರುವಾಗಿದೆ. ಸ್ಪರ್ಧಿಗಳನ್ನು ಸ್ವಾಗತಿಸುವ ಬದಲು, ಮನೆಯಿಂದ ಯಾರು ಹೋಗಬೇಕು ಅಂತ ತಿಳಿಸಿ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಬಗ್ಗೆ ಸ್ಪರ್ಧಿಗಳಲ್ಲಿ ಆಳವಾದ ಚರ್ಚೆಗಳು ನಡೆದಿದೆ.
ರಕ್ಷಿತಾ ಶೆಟ್ಟಿ, ಮಾಳು, ಸ್ಪಂದನಾ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದಂತೆ ಕಾಣಿಸುತ್ತದೆ. ಈ ಮೂವರನ್ನ ಆಯ್ಕೆ ಮಾಡಿರೋದಕ್ಕೆ ಇನ್ನುಳಿದ ಸ್ಪರ್ಧಿಗಳು ಸಮಜಾಯಿಷಿ ನೀಡಿದ್ದಾರೆ. ಜಾನ್ವಿ ಮತ್ತು ಅಶ್ವಿನಿ ಗೌಡ ಮಾತುಗಳಿಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.