ಗಂಡ ಜೈದೇವ್ ಕಿವಿ ಊದಿದ ದಿಯಾ ಬೇಬಿ: ಸಂಸಾರ ಒಡೆಯೋದು ಅಂದ್ರೆ ಇದೇ ನೋಡಿ

Published : Sep 29, 2025, 10:24 AM IST

Amruthadhaare Serial News: ಜೈದೇವ್‌ಗೆ ತಾಯಿ ಶಕುಂತಲಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಪತ್ನಿ ದಿಯಾಳ ಕುತಂತ್ರದ ಮಾತಿನಿಂದಾಗಿ, ಮನೆಯ ಒಳಿತಿಗಾಗಿ ಶ್ರಮಿಸುತ್ತಿರುವ ತಮ್ಮ ಪಾರ್ಥನ ಮೇಲೆಯೇ ಜೈದೇವ್ ದ್ವೇಷ ಸಾಧಿಸಲು ಮುಂದಾಗಿದ್ದಾನೆ.

PREV
15
ಅಮೃತಧಾರೆ ಸೀರಿಯಲ್

ಅಮೃತಧಾರೆ ಸೀರಿಯಲ್ ಸಾಲು ಸಾಲು ತಿರುವುಗಳನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರ ಬಳಗವನ್ನು ಹೆಚ್ಚಿಸಿಕೊಂಡಿದೆ. ಒಂದ್ಕಡೆ ಭೂಮಿಕಾ-ಗೌತಮ್ ಪ್ರೇಮಕಥೆ, ತಂದೆ-ಮಗನ ನಡುವಿನ ಬಾಂಧವ್ಯ ಮತ್ತೊಂದೆಡೆ ಜೈದೇವ್ ಅವನತಿ ಶುರುವಾಗಿದೆ. ಗೌತಮ್ ಮನೆಯಿಂದ ಹೊರ ಬಂದ ಬಳಿಕ ಜೈದೇವ್ 600 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ.

25
ಜೈದೇವ್‌

ಈ ಸಾಲದಿಂದ ಹೊರಗೆ ಬರೋದು ಹೇಗೆ ಎಂದು ಪಾರ್ಥ ಯೋಚನೆ ಮಾಡುತ್ತಿದ್ದಾನೆ. ಆದರೆ ಜೈದೇವ್‌ಗೆ ಇದ್ಯಾವುದೂ ಕೇರ್ ಇಲ್ಲದೇ ಜಾಲಿ ಜಾಲಿಯಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಜೈದೇವ್, ಸೋದರ ಪಾರ್ಥ್ ಮಾಡುತ್ತಿರೊ ಕೆಲಸಗಳಲ್ಲಿ ಮೂಗು ತೂರಿಸುತ್ತಿದ್ದಾನೆ.

35
ಶಕುಂತಲಾ ಕ್ಲಾಸ್

ಜೈದೇವ್‌ ನಡವಳಿಕೆಯಿಂದ ಕೋಪಗೊಂಡಿರುವ ಶಕುಂತಲಾ, ಅವನು ನಿನಗಿಂತ ಚಿಕ್ಕವನಾಗಿರಬಹುದು. ಬ್ಯುಸಿನೆಸ್ ಹೇಗೆ ನಡೆಸಬೇಕು ಎಂಬುದರ ಬಗ್ಗೆ ವಿದೇಶಕ್ಕೆ ಹೋಗಿ ಓದಿಕೊಂಡು ಬಂದಿದ್ದಾನೆ. ಮನೆ ಮತ್ತು ಕಂಪನಿಯ ಒಳ್ಳೆಯದಕ್ಕಾಗಿ ಪಾರ್ಥ ಕೆಲಸ ಮಾಡುತ್ತಾನೆ. ಒಬ್ಬ ಅಣ್ಣನಾಗಿ ಹೇಗಿರಬೇಕೋ ಹಾಗೆ ನಡೆದುಕೋ ಎಂದು ಜೈದೇವ್‌ ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.

45
ಸೋದರ ಮೇಲೆಯೇ ಜೈದೇವ್ ದ್ವೇಷ

ಅಮ್ಮ ಬೈದಿದ್ದರಿಂದ ಕೆಂಡವಾಗಿದ್ದ ಜೈದೇವ್‌ನನ್ನು ಸಮಾಧಾನ ಮಾಡಬೇಕಿದ್ದ ದಿಯಾ ಬೇಬಿ, ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾಳೆ. ಇದರಿಂದ ಜೈದೇವಬ್ ಮತ್ತಷ್ಟು ಕೋಪಗೊಂಡಿದ್ದಾನೆ. ಮನೆಯ ಹಿತಕ್ಕಾಗಿ ಕೆಲಸ ಮಾಡ್ತಿರೋ ಸೋದರ ಮೇಲೆಯೇ ಜೈದೇವ್ ದ್ವೇಷ ಸಾಧಿಸಲು ಮುಂದಾಗಿದ್ದಾನೆ.

ಇದನ್ನೂ ಓದಿ: ಅಪ್ಪು ಹಾಡಿಗೆ Amruthadhaare ಅಪ್ಪ-ಮಗನ ಡೇ ಔಟ್​: ಕುಣಿದಾಡಿದ ಪುನೀತ್​ ರಾಜ್​ ಫ್ಯಾನ್ಸ್​

55
ಗಂಡನ ಕಿವಿಯನ್ನು ಊದಿದ ದಿಯಾ ಬೇಬಿ

ನಿಮ್ಮ ತಾಯಿ ನಿಮಗಿಂತ ಅವರಿಗೆ ಹೆಚ್ಚು ಸಪೋರ್ಟ್ ಮಾಡೋದು. ನೀವು ಮಾಮ್ ಮಾಮ್ ಅಂತ ಎಷ್ಟೇ ಕೆಲಸ ಮಾಡಿದರೂ, ಅವರು ಮಾತ್ರ ಕಿರಿಯ ಮಗನ ಪರವಾಗಿಯೇ ಇರುತ್ತಾರೆ. ನಿಮ್ಮ ಯಾವ ನಿರ್ಧಾರಗಳಿಗೂ ಅವರು ಗೌರವ ಕೊಡಲ್ಲ. ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಈ ರೀತಿಯಾದ್ರೆ ಮುಂದೆ ಕಷ್ಟವಾಗುತ್ತೆ ಎಂದು ದಿಯಾ ಗಂಡನ ಕಿವಿಯನ್ನು ಊದಿದ್ದಾಳೆ.

ಇದನ್ನೂ ಓದಿ: Amruthadhaare : ದಿಯಾಗೆ ಬುದ್ದಿ ಹೇಳಿದ ಅಪೇಕ್ಷಾ… ದಿನ ಕಳೆದಂತೆ ಭೂಮಿಕಾ ಆಗಿ ಬದಲಾಗ್ತಿದ್ದಾಳೆ ಅಪ್ಪಿ

Read more Photos on
click me!

Recommended Stories