ಮತ್ತೊಂದು ಕನ್ನಡ ಧಾರಾವಾಹಿ ಅಂತ್ಯ ಆಗೋದು ಪಕ್ಕಾ! ಸಾಕ್ಷಿ ಕೊಟ್ಟ ಮರ್ಯಾದೆ ರಾಮಣ್ಣ!

Published : Feb 17, 2026, 03:36 PM IST

Maryade Ramanna Serial Kannada: ಇತ್ತೀಚೆಗೆ ಹೊಸ ಧಾರಾವಾಹಿಗಳು ಆರಂಭ ಆಗುತ್ತಿವೆ. ಜಗದ್ಧಾತ್ರಿ ಹಾಗೂ ಕೃಷ್ಣರುಕ್ಕು ಧಾರಾವಾಹಿಗಳು ಬರಲಿವೆ ಎನ್ನಲಾಗಿತ್ತು. ಈಗ ಇನ್ನೊಂದು ಸೀರಿಯಲ್‌ ಕೂಡ ಬರಲಿದ್ದು, ಪ್ರೋಮೋ ರಿಲೀಸ್‌ ಆಗಿದೆ. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಲಿದೆ. 

PREV
15
‘ಮರ್ಯಾದೆ ರಾಮಣ್ಣ’ ಧಾರಾವಾಹಿ ಪ್ರೋಮೋ ರಿಲೀಸ್‌

ಹೌದು, ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಮರ್ಯಾದೆ ರಾಮಣ್ಣ’ ಎನ್ನುವ ಧಾರಾವಾಹಿ ಪ್ರೋಮೋ ರಿಲೀಸ್‌ ಆಗಿದೆ. ಈ ಪ್ರೋಮೋ ಅಂತೂ ಭಾರೀ ಕುತೂಹಲ ಮೂಡಿಸಿದೆ. ಕನ್ನಡ ಧಾರಾವಾಹಿಗಳಲ್ಲಿ ಇದು ವಿಭಿನ್ನವಾಗಿ ಮೂಡಿ ಬಂದಿದೆ.

25
ಈ ಸೀರಿಯಲ್‌ ಕಥೆ ಏನು?

ಈ ಹಿಂದೆ ಜೋಡಿಹಕ್ಕಿ ಧಾರಾವಾಹಿಯಲ್ಲಿ ಪೈಲ್ವಾನ್‌ ಕಥೆ ಇತ್ತು. ಇಲ್ಲಿ ಕೂಡ ಪೈಲ್ವಾನ್‌ ಕಥೆ ಇರಲಿದೆ. ಆದರೆ ಕಥೆಯ ಎಳೆ ಮಾತ್ರ ಬೇರೆ ಇರಲಿದೆ. ತಾಯಿಯಾಗಿ ಬ್ರಹ್ಮಚೈರ್ಯ ಪಾಲಿಸುವ ಪೈಲ್ವಾನ್‌ ರಾಮಣ್ಣನ ಕಥೆ ಇಲ್ಲಿದೆ.

35
ಹೀರೋ ಯಾರು?

ಪೈಲ್ವಾನ್‌ ರಾಮಣ್ಣನ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ರಿವೀಲ್‌ ಮಾಡಿಲ್ಲ. ಆದರೆ ವೀಕ್ಷಕರು ಮಾತ್ರ ಚೇತನ್‌ ಚಂದ್ರ ಅವರು ನಟಿಸುತ್ತಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

45
‘ಸತ್ಯಂ ಶಿವಂ ಸುಂದರಂ’ ಹೀರೋ

ಚೇತನ್‌ ಚಂದ್ರ ಅವರು ಈ ಹಿಂದೆ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ಲೀಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್‌ ಅಂತ್ಯವಾಗಿ ವರ್ಷಗಳೇ ಉರುಳಿವೆ. ಈಗ ಮರ್ಯಾದೆ ರಾಮಣ್ಣ ಎನ್ನುವ ಸೀರಿಯಲ್‌ನಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

55
ಯಾವ ಧಾರಾವಾಹಿ ಅಂತ್ಯ ಆಗುತ್ತೆ?

ಮರ್ಯಾದೆ ರಾಮಣ್ಣ ಧಾರಾವಾಹಿ ಪ್ರಸಾರ ಆಗಲಿದೆ ಎಂದಾದರೆ, ಇನ್ನೊಂದು ಸೀರಿಯಲ್‌ ಅಂತ್ಯ ಆಗಬೇಕಿದೆ. ಸ್ನೇಹದ ಕಡಲಲ್ಲಿ, ನೀ ಇರಲು ಜೊತೆಯಲ್ಲಿ ಧಾರಾವಾಹಿಗಳ ಮಧ್ಯೆ ಒಂದು ಸೀರಿಯಲ್‌ ಅಂತ್ಯ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಅಧಿಕೃತ ಮಾಹಿತಿ ಕೊಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories