ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾಭಾರತಿ ಭಟ್ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಇವರ ಮದುವೆ ಮೇಕಪ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗ್ತಿದೆ. ಅಲ್ಲಿ ಬಂದ ನೆಗೆಟಿವ್ ಕಾಮೆಂಟ್‌ಗೆ ಗೀತಾಭಾರತಿ ಭಟ್ ತಿರುಗೇಟು ನೀಡಿದ್ದರು.
ಮೇಕಪ್ ಆರ್ಟಿಸ್ಟ್ ಒಬ್ಬರು ಗೀತಾಭಾರತಿಗೆ ಮೇಕಪ್ ಮಾಡಿದ ವಿಡಿಯೋ ಹಂಚಿಕೊಂಡಿದ್ದರು. ಓರ್ವ ಮಹಿಳೆಯೆ “ಮೇಕಪ್ ಚೆನ್ನಾಗಿದೆ, ನಿಮ್ಮ ವಧು ಆಯ್ಕೆ ತಪ್ಪಾಗಿದೆ” ಎಂದು ಕಾಮೆಂಟ್ ಮಾಡಿದ್ದರು. ಇದನ್ನು ನೋಡಿ ಗೀತಾಭಾರತಿ ಭಟ್‌ಗೆ ಸಿಟ್ಟು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
25
ನಾನು ನಿಮ್ಮನ್ನು ಅವಮಾನಿಸಬಹುದು
ಯಾರು ಯಾರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೋ, ನಾನು ಕೂಡ ನಿಮ್ಮ ಬಣ್ಣ, ಮುಖದ ಲಕ್ಷಣ, ಇನ್ನಿತರ ವಿಷಯಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬಹುದು ಅಥವಾ ನಿಮ್ಮನ್ನು ನಾನು ಕೂಡ ಅವಮಾನಿಸಬಹುದು! ದೇವರ ಪ್ರತಿಯೊಂದು ಸೃಷ್ಟಿಯೂ ತನ್ನದೇ ಆದ ರೀತಿಯಲ್ಲಿ ಸುಂದರವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದರೆ ಇತರರ ಬಗ್ಗೆ ಕರುಣೆಯಿಂದ ಇರಿ, ಇಲ್ಲದಿದ್ದರೆ ಸುಮ್ಮನಿರಿ” ಎಂದು ಗೀತಾ ಹೇಳಿದ್ದಾರೆ.
35
ನಿಮ್ಮ ಪ್ರೀತಿಗೆ ನಾನು ಚಿರಋಣಿ
ನನಗೆ ಬಂದ ಕೆಟ್ಟ ಕಾಮೆಂಟ್‌ಗಳ ಬಗ್ಗೆ ನೀವು ಪ್ರತಿಯೊಬ್ಬರು ತೋರುತ್ತಿರುವ ಪ್ರತಿಕ್ರಿಯೆ, ಪ್ರೀತಿ ಮತ್ತು ಕರುಣೆಯ ಮಾತುಗಳನ್ನು ಕಂಡು ನಾನು ನಿಜಕ್ಕೂ ಭಾವುಕಳಾಗಿದ್ದೇನೆ, ಇದನ್ನು ಅರಗಿಸಿಕೊಳ್ಳಲು ಟೈಮ್ ಬೇಕು! ನೀವು ಕೊಟ್ಟ ಪ್ರೀತಿಯಿಂದ ನಾನು ಧನ್ಯಳಾಗಿದ್ದೇನೆ. ನನಗೆ ಇಷ್ಟು ಪ್ರೀತಿ, ಒಳ್ಳೆಯ ಮಾತುಗಳನ್ನು ಕಳುಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು! ನಾನು ನಿಜವಾಗಿಯೂ ಚಿರಋಣಿ! ಎಂದಿದ್ದಾರೆ ಗೀತಾ.
ಇದೆಲ್ಲ ಏನೂ ಇಲ್ಲ, ಇದಕ್ಕಿಂತ ಕೆಟ್ಟ ಕಾಮೆಂಟ್‌ಗಳು ಬರುತ್ತವೆ, ಆದರೆ ನಾನು ಅವುಗಳನ್ನು ಎಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲ್ಲ ಅಥವಾ ಪ್ರಾಮುಖ್ಯತೆ ನೀಡಿಲ್ಲ, ನಾನು ಅದನ್ನೆಲ್ಲ ನಿರ್ಲಕ್ಷ್ಯ ಮಾಡುತ್ತಿದ್ದೆ. ಈ ಬಾರಿ ನನಗೆ ಸುಮ್ಮನಿರಲು ಇಷ್ಟವಿರಲಿಲ್ಲ.. ಈ ರೀತಿಯ ಮಹಿಳೆಯರಿಗೆ ಅಥವಾ ಯಾರೇ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ, ಅವರ ನಿಜವಾದ ಸ್ಥಾನ, ಯೋಗ್ಯತೆಯನ್ನು ತೋರಿಸುವ ಅಗತ್ಯವಿದೆ ಎಂದಿದ್ದಾರೆ.
55
ತೆರೆ ಮೇಲೆ ಬರೋದು ಯಾವಾಗ?
ಗೀತಾ ಭಾರತಿ ಭಟ್ ಅವರು ಸದ್ಯ ಯಾವುದೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಮುಂದೆ ಅವರು ತೆರೆ ಮೇಲೆ ಕಾಣಿಸಿಕೊಳ್ಳಬಹುದೇನೋ!
ಅಂದಹಾಗೆ ಬ್ರಹ್ಮಾವರ ರಾಜಾರಾಮ್ ಭಟ್ ಅವರನ್ನು ಗೀತಾ ಮದುವೆಯಾಗಿದ್ದಾರೆ. ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.