Naa Ninna Bidalaare Serial ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ಗೆ ಸರ್ಜರಿ; ಸದ್ಯ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Published : Feb 17, 2026, 09:16 AM IST

Naa Ninna Bidalaare Kannada Serial Episode: ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಶೂಟಿಂಗ್‌ ಮಾಡುವಾಗ, ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಅವರ ಕಾಲಿಗೆ ಗಾಯ ಆಗಿದೆ, ಹೀಗಾಗಿ ಸರ್ಜರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

PREV
15
ನೀತಾ ಅಶೋಕ್‌ಗೆ ಏನಾಯ್ತು?

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಸಾಕಷ್ಟು ಸೂಪರ್‌ ನ್ಯಾಚುರಲ್‌ ವಿಷಯಗಳಿವೆ. ಹೀಗಾಗಿ ಏನಾದರೊಂದು ಸ್ಟಂಟ್‌ ಮಾಡಬೇಕಾಗಿ ಬರುವುದು. ಆ ಟೈಮ್‌ನಲ್ಲಿ ನೀತಾ ಅಶೋಕ್‌ಗೆ ಪಾದ ಉಳುಕಿದೆ.

25
ನೀತಾ ಅಶೋಕ್‌ ಏನು ಹೇಳಿದರು?

“ನನ್ನ ಪ್ರೀತಿಯ ಎಲ್ಲರಿಗೂ, ನಮಸ್ಕಾರ, ಶೂಟಿಂಗ್‌ ಟೈಮ್‌ನಲ್ಲಿ ಆದ ಸಣ್ಣ ಪಾದದ ಉಳುಕು, ಕೊನೆಗೆ ಮೂಳೆ ಮುರಿತಕೆ ಕಾರಣವಾಯಿತು. ನಮ್ಮ ಇಡೀ ದೇಹದ ತೂಕವನ್ನು ಪಾದವೇ ಹೊರುವುದು, ಹೀಗಾಗಿ ಸರ್ಜರಿ ಮಾಡಬೇಕಾಗಿ ಬಂತು. ಈಗ ಸರ್ಜರಿ ಯಶಸ್ವಿಯಾಗಿ ಮುಗಿದಿದೆ ಎಂದು ಹೇಳಲು ಖುಷಿಯಾಗುತ್ತದೆ. ಸೂಕ್ತ ಕಾಳಜಿಯೊಂದಿಗೆ ನನ್ನ ಚೇತರಿಕೆಯ ಹಂತ ಈಗ ಆರಂಭವಾಗಿದೆ” ಎಂದು ನೀತಾ ಅಶೋಕ್‌ ಹೇಳಿದ್ದಾರೆ.

35
ನನ್ನ ಸ್ವಲ್ಪ ಮಿಸ್‌ ಮಾಡ್ಕೊಳ್ಳಿ

“ನಿಮ್ಮ ಕಾಳಜಿ, ಪ್ರಾರ್ಥನೆ, ಪ್ರೀತಿಗಾಗಿ ಧನ್ಯವಾದಗಳು. ನಾನೀಗ ವಿಶ್ರಾಂತಿ ಪಡೆಯುತ್ತಿದ್ದೇನೆ. ಅಷ್ಟರವರೆಗೆ ನನ್ನನ್ನು ಸ್ವಲ್ಪ ಮಿಸ್ ಮಾಡಿಕೊಳ್ಳಿ, ಏಕೆಂದರೆ ನಾನು ಮೊದಲಿನಂತೆ ಈಗ ಆಕ್ಟಿವ್‌ ಆಗಿರೋಕೆ ಕಷ್ಟ ಆಗಬಹುದು. ನಿಮ್ಮ ಬಗ್ಗೆ ಕಾಳಜಿ ಇರಲಿ, ದಯೆ ತೋರಿ ಮತ್ತು ಕೃತಜ್ಞರಾಗಿರಿ” ಎಂದು ನೀತಾ ಅಶೋಕ್‌ ಅವರು ಹೇಳಿದ್ದಾರೆ.

45
ಮುಂದೆ ಏನಾಗುವುದು?

ನೀತಾ ಅಶೋಕ್‌ ಅವರ ಕಾಲಿಗೆ ಗಾಯ ಆಗಿರೋದಿಕ್ಕೆ ಹಾಗೆ, ಅವರು ಸದ್ಯ ಶೂಟಿಂಗ್‌ನಲ್ಲಿ ಭಾಗವಹಿಸೋದು ಡೌಟ್.‌ ಇವರ ಪಾತ್ರ ಅಷ್ಟು ತೆರೆ ಮೇಲೆ ಕಾಣಿಸಿಕೊಳ್ಳೋದು ಡೌಟ್‌, ಅಥವಾ ಬ್ಯಾಂಕಿಂಗ್‌ ಇದ್ದರೆ, ನೀತಾ ಬರೋವರೆಗೆ ಏನಾದರೂ ಮ್ಯಾಜಿಕ್‌ ಮಾಡಬಹುದು.

55
ಪಾತ್ರಧಾರಿಗಳು

ಅಂಬಿಕಾ-ನೀತಾ ಅಶೋಕ್‌

ಹಿತಾ- ಮಹಿತಾ 

ಶರತ್-‌ ಶರತ್‌ ಪದ್ಮನಾಭನ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories