ಕಿರುತೆರೆ ಇತಿಹಾಸದಲ್ಲಿ‌ ಮೊದಲ ಬಾರಿಗೆ AI ಬಳಸಿ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರೋಮೊ ರಿಲೀಸ್… ಸೀರಿಯಲ್ ಆರಂಭ ಯಾವಾಗ?

Published : Aug 30, 2025, 04:24 PM IST

ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ AI ತಂತ್ರಜ್ಞಾನ ಬಳಸಿ , ತಯಾರಾಗಿರುವ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರೊಮೋ ಬಿಡುಗಡೆಯಾಗಿದ್ದು, ಇದೇ ಸೆಪ್ಟೆಂಬರ್ 1 ರಿಂದ ಸೀರಿಯಲ್ ಆರಂಭವಾಗಲಿದೆ.

PREV
17

ಇಲ್ಲಿವರೆಗೆ ಜನರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ 'ಶ್ರೀ ರಾಘವೇಂದ್ರ ಮಹಾತ್ಮೆ' (Sri Raghavendra Mahathme) ಧಾರಾವಾಹಿಯ ಪ್ರೊಮೋ ಬಿಡುಗಡೆಯಾಗಿದೆ. ಇದು ಅಂತಿಂಥ ಪ್ರೊಮೋ ಅಲ್ಲ, ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ AI ತಂತ್ರಜ್ಞಾನ ಬಳಸಿ , ತಯಾರಾಗಿರುವ ಪ್ರೊಮೋ ಇದಾಗಿದೆ.

27

ಹಲವು ಸಮಯದ ಹಿಂದೆಯೇ ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಆಗಿದ್ದ ರಾಘವೇಂದ್ರ ಹುಣಸೂರ್, ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ಮಾಡಬೇಕೆನ್ನುವ ಆಸೆಯನ್ನು ತಿಳಿಸಿದ್ದರು. ಇದೀಗ ಹಲವು ಸಮಯ ಬಳಿಕ ಅವರ ಕನಸು ನನಸಾಗಿದ್ದು, ಶೀಘ್ರದಲ್ಲಿ ಸೀರಿಯಲ್ ಬಿಡುಗಡೆಗೆ ತಯಾರಾಗಿದೆ.

37

ಜೀ ಕನ್ನಡ ವಾಹಿನಿಯೂ (Zee Kannada) ಅದ್ಭುತವಾದ ಧಾರಾವಾಹಿಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿವರೆಗೂ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಸಾರವಾಗುತ್ತಿತ್ತು.ಇದೀಗ ಸೀರಿಯಲ್ ಗೆ ಅಂತ್ಯ ಕಂಡಿದ್ದು, ಇನ್ನು ಮುಂದೆ ಸೆಪ್ಟೆಂಬರ್ 1 ರಿಂದ ಆ ಸಮಯದಲ್ಲಿ 'ಶ್ರೀ ರಾಘವೇಂದ್ರ ಮಹಾತ್ಮೆ' ಆರಂಭವಾಗಲಿದೆ.

47

ಈಗಾಗಲೇ ಬಿಡೂಗಡೆಯಾಗಿರುವ AI ತಂತ್ರಜ್ಞಾನ  (AI Promo)ಬಳಸಿ ಮಾಡಿರುವ ಪ್ರೊಮೋ ಅದ್ಭುತವಾಗಿ ಮೂಡಿ ಬಂದಿದೆ. ಮಾನವರ ಉದ್ಧಾರಕ್ಕಾಗಿ ಬರ್ತಾ ಇದ್ದಾರೆ ರಾಘವೇಂದ್ರ ಸ್ವಾಮಿ ಎನ್ನುವುದರಿಂದ ಸೀರಿಯಲ್ ಆರಂಭವಾಗುತ್ತದೆ.

57

ಪ್ರೊಮೋದಲ್ಲಿ ತೋರಿಸಿದಂತೆ ರಾಘವೇಂದ್ರ ಸ್ವಾಮಿ ಕಾಲಿಡುತ್ತಿದ್ದಂತೆ, ಬರಡು, ಬಂಜರು ಭೂಮಿಯಲ್ಲೂ ಸಹ ಹಸಿರು ತುಂಬುತ್ತದೆ, ಕಾರ್ಮೋಡ ಕವಿದು ಮಳೆಯಾಗುತ್ತದೆ. ಗುರುಗಳ ಆಶೀರ್ವಾದದಿಂದ ಕುರೂಪಿ ಕೂಡ ಸುಂದರಿಯಾಗುತ್ತಾಳೆ. ಮಾಂಸಾಹಾರವು ಹಣ್ಣು ಹಂಪಲಾಗಿ ಬದಲಾಗುತ್ತದೆ.

67

'ಶ್ರೀ ರಾಘವೇಂದ್ರ ಮಹಾತ್ಮೆಯಲ್ಲಿ' ರಾಯರ ಬಾಲ್ಯದಿಂದ ಹಿಡಿದು ಅವರ ಆಧ್ಯಾತ್ಮ ಪಯಣ, ಉಪದೇಶಗಳು, ಪವಾಡಗಳು ರಾಯರ ಜೀವನ ಚರಿತ್ರೆ, ಅವರ ಆಶೀರ್ವಾದಿಂದ ನಡೆದ ಪಾವಡಗಳು ಎಲ್ಲವನ್ನೂ ಪ್ರೇಕ್ಷಕರು ಕಣ್ತುಂಬಿಸಿಕೊಳ್ಳಬಹುದು.

77

ಇನ್ನು ಈ ಧಾರಾವಾಹಿಯಲ್ಲಿ ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್, ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ನಟಿಸಿದ್ದಾರೆ. ಇವರೊಂದಿಗೆ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿ ಹಲವರು ನಟಿಸಲಿದ್ದಾರೆ.ಇನ್ನು ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ.

Read more Photos on
click me!

Recommended Stories