ಆಸಿಯಾ ಬೇಗಂ ಗಣೇಶನ ಭಕ್ತಿ: ಧರ್ಮದ ಎಲ್ಲೆ ಮೀರಿದ ಹನುಮನ ಸುಂದರಿ ಬಾಯಲ್ಲಿ 'ವಕ್ರತುಂಡ' ಶ್ಲೋಕ!

Published : Aug 29, 2025, 11:06 PM IST

ಕಿರುತೆರೆ ರಿಯಾಲಿಟಿ ಶೋ ನಟಿ ಆಸಿಯಾ ಬೇಗಂ ಜನ್ಮತಃ ಮುಸ್ಲಿಂ ಆಗಿದ್ದರೂ  ಹಿಂದೂ ಧರ್ಮದ ಆರಾಧ್ಯ ದೈವ ಗಣೇಶ ಹಬ್ಬದಲ್ಲಿ ಪಾಲ್ಗೊಂಡು ಗಣೇಶನ ಶ್ಲೋಕ ಪಠಿಸಿದ್ದಾರೆ. ಧಾರ್ಮಿಕ ಭೇದ ಮರೆತು ಭಕ್ತಿಯ ಮಹತ್ವ ಸಾರಿದ್ದಾರೆ. ಈ ಮೂಲಕ ಸ್ನೇಹ, ಸಾಮರಸ್ಯದ ಸಂದೇಶ ಸಾರಿದ್ದಾರೆ.

PREV
110

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ನಟಿ ಹಾಗೂ ಮಾಡೆಲ್ ಆಸಿಯಾ ಬೇಗಂ ಅವರು, ಧಾರ್ಮಿಕವಾಗಿ ಮುಸ್ಲಿಂ ಕುಟುಂಬವಾಗಿದ್ದರೂ, ಹಿಂದೂ ಧರ್ಮದ ಆರಾಧ್ಯ ದೈವವಾಗಿರುವ ಗಣೇಶನ ವಿಗ್ರಹವನ್ನು ಕೈಯಲ್ಲಿ ಹಿಡಿದು ವಕ್ರತುಂಡ ಮಹಾಕಾಯ ಮಂತ್ರವನ್ನು ಜಪಿಸಿದ್ದಾರೆ. ಈ ಮೂಲಕ ಧರ್ಮ ಯಾವುದಾದರೇನು, ದೈವ ಭಕ್ತಿಗೆ ಮನಸ್ಸಿದ್ದರೆ ಸಾಕು ಎಂಬುದನ್ನು ತೋರಿಸಿದ್ದಾರೆ.

210

ಕನ್ನಡ ಕಿರುತೆರೆಯಲ್ಲಿ ಸಾಮಾನ್ಯ ಕುರಿಗಾಹಿಯಾಗಿ ಜಾನಪದ ಹಾಡುಗಾರನಾಗಿ ಸರಿಗಮಪ ವೇದಿಕೆ ಮೂಲಕ ಅತಿದೊಡ್ಡ ಟಿವಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತನಾಗಿರುವ ಹನುಮಂತ ಲಮಾಣಿ ನಿಮ್ಮೆಲ್ಲರಿಗೂ ಪರಿಚಯ. ಹಾಗೆಯೇ ಹನುಮಂತ ಲಮಾಣಿಗೆ ಭರ್ಜರಿ ರಿಯಾಲಿಟಿ ಶೋನಲ್ಲಿ ಜೋಡಿಯಾಗಿದ್ದ ಹುಡುಗಿ ಮುಸ್ಲಿಂ ಸಮುದಾಯದ ಮಾಡೆಲಿಂಗ್ ಸುಂದರಿ ಆಸಿಯಾ ಬೇಗಂ.

310

ಇವರು ಜನ್ಮತಃ ಅನ್ಯ ಕೋಮಿನವರಾಗಿದ್ದರೂ ಹಿಂದೂ ಸಂಪ್ರದಾಯಸ್ಥ ಹುಡುಗಿಯಂತೆ ಮಿಂಚಿದ್ದಳು. ಆದರೆ, ಇದೀಗ ಇದೇ ಆಸಿಯಾ ಬೇಗಂ ಗಣಪತಿ ಹಬ್ಬದ ನಿಮಿತ್ತ ಗಣೇಶ ಮೂರ್ತಿಯನ್ನು ಹಿಡಿದು 'ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭ..., ಎಂದು ಗಣಪತಿ ಕುರಿತ ಶ್ಲೋಕವನ್ನೂ ಹೇಳಿ ಕೈಮುಗಿದಿದ್ದಾಳೆ. ಈ ಮೂಲಕ ಭಕ್ತಿಗೆ ಯಾವುದೇ ಧರ್ಮ ಬೇಧ ಬಾರದು ಎಂಬುದನ್ನು ತೋರಿಸಿದ್ದಾರೆ.

410

ಅಷ್ಟಕ್ಕೂ ಸ್ವತಃ ಆಸಿಯಾ ಬೇಗಂ ಗಣೇಶ ಹಬ್ಬದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವುದಕ್ಕೆ ಮುಂದಾಗಿಲ್ಲ. ಇಲ್ಲಿ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಬೆಸ್ಟ್ ಫ್ರೆಂಡ್ ಆಗಿರುವ ಕಿರುತೆರೆ ನಟಿ ಯಶಸ್ವಿನಿ ಜೊತೆಗೆ ಗಣೇಶ ಹಬ್ಬದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ.

510

ನಟಿ ಯಶಸ್ವಿನಿ ಜೊತೆಗೆ ಆಸಿಯಾ ಬೇಗಂ ಕೂಡ ಗಣೇಶನನ್ನು ತೆಗೆದುಕೊಂಡು ಬಂದು ಮನೆಗೆ ಪ್ರತಿಷ್ಠಾಪನೆಗೆ ಹೋಗುವಾಗ ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ವೆಲ್‌ಕಮ್ ಗಣೇಶ (Welcome Ganesha) ಎಂದು ಹೇಳುವ ಮೂಲಕ ಗಣೇಶನ ಸ್ತುತಿ ಆರಂಭಿಸಿದ್ದಾರೆ.

610

ಇದಾದ ನಂತರ ನಟಿ ಯಶಸ್ವಿನಿ ಗಣೇಶನ ಜಪ ಮಾಡುವ ಶ್ಲೋಕವಾದ 'ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭ, ನಿರ್ವಿಘ್ನಂ ಕುರು ಮೇ ದೇವ, ಸರ್ವಕಾರ್ಯೇಷು ಸರ್ವದಾ..' ಎಂದು ಹೇಳಿಕೊಟ್ಟಿದ್ದನ್ನು ಆಸಿಯಾ ಬೇಗಂ ಕೂಡ ಹೇಳಿದ್ದಾರೆ. ಕೊನೆಗೆ ಗಣೇಶನಿಗೆ ಕೈಮುಗಿದಿದ್ದಾರೆ. ಈ ಮೂಲಕ ಸ್ನೇಹಿತೆಯ ಜೊತೆಯಲ್ಲಿ ಗಣೇಶನ ಸ್ತುತಿ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಸಂತಸವನ್ನು ನೀಡಿದ್ದಾರೆ.

710

ಆಸಿಯಾ ಬೇಗಂ ಇದೇ ಮೊದಲ ಬಾರಿಗೆ ಗಣಪತಿ ಶ್ಲೋಕವನ್ನು ಹೇಳಿರಬಹುದು. ಆದರೆ, ಹಿಂದೂ ಧಾರ್ಮಿಕ ಪದ್ದತಿ ಹಾಗೂ ಸಂಪ್ರದಾಯದಂತೆ ಉಡುಪನ್ನು ಧರಿಸುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಅವರ ವೃತ್ತಿ.

810

ವೃತ್ತಿಯಲ್ಲಿ ಮಾಡೆಲ್, ರಿಯಾಲಿಟಿ ಶೋ ನಟಿ, ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದು, ತಮಗೆ ಆಫರ್ ಬಂದ ರೀತಿಯಲ್ಲಿ ಉಡುಪು ಧರಿಸುತ್ತಾರೆ. ಎಲ್ಲ ಪೋಷಾಕುಗಳಲ್ಲಿ ಅದ್ಭುತ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ.

910

ಹಿಂದೂ ಧರ್ಮದಲ್ಲಿ ಬರುವಂತಹ ಅನೇಕ ದೇವತೆಗಳ ಪೋಷಾಕನ್ನು ಆಸಿಯಾ ಬೇಗಂ ಹಾಕಿದ್ದಾರೆ. ಸರಸ್ವತಿ, ಲಕ್ಷ್ಮೀ, ರಾಧೆ, ಹಿಂದೂ ಯುವತಿ, ಗ್ರಾಮೀಣ ಭಾಗದ ಹಿಂದೂ ಹುಡುಗಿ, ದೇವಸ್ಥಾನಕ್ಕೆ ಹೋಗುವ ಯುವತಿ ಹೀಗೆ ಹಲವು ಪೋಷಾಕುಗಳಲ್ಲಿ ಮಿಂಚಿದ್ದಾರೆ.

1010

ಈ ಎಲ್ಲ ಪೋಷಾಕಿನಲ್ಲಿಯೂ ಸೀರೆ, ಲಂಗ-ದಾವಣಿ, ತಲೆತುಂಬಾ ಹೂವು, ಕೈಗೆ ಬಳೆ, ಹಣೆಗೆ ಬೊಟ್ಟು ಹೀಗೆ ಎಲ್ಲವನ್ನೂ ಧರಿಸಿ ಥೇಟ್ ಹಿಂದೂ ಸಂಪ್ರದಾಯದ ಹುಡುಗಿಯಂತೆ ಆಸಿಯಾಂ ಬೇಗಂ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories