Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು!

Published : Feb 09, 2026, 11:56 AM IST

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ತಾಯಿ ಗೋಪಿಕಾಂಬಾ ಪಾತ್ರದಲ್ಲಿ ನಟಿ ಶ್ರೀಲತಾ ನಟಿಸುತ್ತಿದ್ದಾರೆ. ಗದಗ ಮೂಲದವರಾದ ಇವರು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದು, ಯಾವುದೇ ನಟನಾ ಹಿನ್ನೆಲೆಯಿಲ್ಲದೆ ಅಚಾನಕ್ಕಾಗಿ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

PREV
16
ರಾಯರ ಅಮ್ಮನ ಪಾತ್ರದಲ್ಲಿ...

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ 'ಶ್ರೀ ರಾಘವೇಂದ್ರ ಮಹಾತ್ಮೆ' ಸೀರಿಯಲ್​ನಲ್ಲಿ, ರಾಯ ಅಮ್ಮ ಗೋಪಿಕಾಂಬ ಪಾತ್ರವನ್ನು ನೋಡಿದರೆ, ಎಂಥವರಿಗೂ ಒಂದು ಕ್ಷಣ, ಕೈ ಎತ್ತಿ ನಮಸ್ಕಾರ ಮಾಡುವ ಹಂಬಲವಾಗುತ್ತದೆ. ಅದೆಂಥ ತೇಜಸ್ಸು, ಅದೆಂಥ ವರ್ಚಸ್ಸು, ಬಹುಶಃ ರಾಯರ ಅಮ್ಮನೂ ಇದೇ ತೇಜಸ್ಸು ಹೊಂದಿರಬಹುದು ಎನ್ನುವ ಭಾವನೆ ಮೂಡುವುದು ಸಹಜ.

26
ಗೋಪಿಕಾಂಬಾ ಪಾತ್ರ

ಈ ಪಾತ್ರಕ್ಕೆ ಜೀವ ತುಂಬುತ್ತಿರುವ ಚೆಲುವೆಯ ಹೆಸರು ನಟಿ ಶ್ರೀಲತಾ (Srilatha). ರಾಯರ ತಾಯಿ ಗೋಪಿಕಾಂಬ ಪಾತ್ರದಲ್ಲಿ ಇವರು ನಟಿಸುತ್ತಿದ್ದಾರೆ.

36
ಸಾಫ್ಟ್​ವೇರ್​ ಡೆವಲಪರ್​

ಶ್ರೀಲತಾ ಅವರು ಗದಗ ಮೂಲದವರು. ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಡೆವಲಪರ್​ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅದನ್ನು ಈಗ ಬಿಟ್ಟು ಬಂದಿದ್ದಾರೆ. ಇದೀಗ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುತೂಹಲದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

46
ರಂಗಭೂಮಿ ಹಿನ್ನೆಲೆಯಿಲ್ಲ

ಯಾವುದೇ ರಂಗಭೂಮಿಯ ಹಿನ್ನೆಲೆಯಿಂದ ನಾನು ಬಂದವಳಲ್ಲ. ಗದಗದವಳಾದ ನಾನು ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಡೆವಲಪ್​ ಆಗಿ ಕೆಲಸ ಮಾಡುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಭರತನಾಟ್ಯ, ಸಂಗೀತದಲ್ಲಿ ಆಸಕ್ತಿ ಇತ್ತು. ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದೆ. ಅಷ್ಟನ್ನು ಬಿಟ್ಟರೆ ಯಾವುದೇ ಹಿನ್ನೆಲೆ ಇಲ್ಲ ಎಂದು ಶ್ರೀಲತಾ ಹೇಳಿದ್ದಾರೆ.

56
ಕನಸಿನಲ್ಲಿಯೂ ಎಣಿಸಿರಲಿಲ್ಲ

ಸಿನಿಮಾಗಳಲ್ಲಿ ನಟನೆ ಮಾಡುವ ಕನಸೂ ಇರಲಿಲ್ಲ. ಅದರ ಬಗ್ಗೆ ಗೊತ್ತೂ ಇರಲಿಲ್ಲ. ಆದರೆ, ಅಚಾನಕ್​ ಆಗಿ ಈ ರೋಲ್​ ಸಿಕ್ಕಿತು. ಬಣ್ಣದ ಲೋಕಕ್ಕೆ ಕರೆದುತಂದು ನಿಲ್ಲಿಸಿದೆ. ಎಲ್ಲವೂ ಅದಾಗಿಯೇ ಆಗುತ್ತಿದೆ ಎಂದು ಶ್ರೀಲತಾ ಹೇಳಿಕೊಂಡಿದ್ದಾರೆ.

66
ಪಾತ್ರಕ್ಕೆ ಜೀವ ತುಂಬ್ತಿರೋ ನಟಿ

ಅದರಲ್ಲಿಯೂ ದೈವಿಭಕ್ತಿ ತುಂಬಿದ ರೋಲ್​ ಒಂದನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ಗೋಪಿಕಾಂಬಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ನಟಿ ಶ್ರೀಲತಾ. ಸುಮ್ಮನೇ ಆಡಿಷನ್​ಗೆ ಹೋಗಿದ್ದೆ. ರಾಘವೇಂದ್ರನ ಕೃಪೆಯಿಂದ ರೋಲ್​ ಸಿಕ್ಕಿತು ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories